ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತಂದು ಜಾರಿಗೊಳಿಸಲಾಗುತ್ತಿರುವ ಮೂರು ಹೊಸ ಕ್ರಿಮಿನಲ್ ಕಾನೂನು ಮಸೂದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಕಳೆದ ವರ್ಷವಷ್ಟೇ ಭಾರತೀಯ ನ್ಯಾಯ ಸಂಹಿತಾ – 2023, ಭಾರತೀಯ ಸಾಕ್ಷಿ ಅಧಿನಿಯಮ್ – 2023 ಮತ್ತು ಭಾರತೀಯ ನಾಗರಿಕ ಸುರಕ್ಷಾ (ದ್ವಿತೀಯ) ಸಂಹಿತಾ – 2023 ನ್ನು ತರವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಜುಲೈನಿಂದ ಅದು ಸಂಪೂರ್ಣ ಅಸ್ಥಿತ್ವಕ್ಕೆ ಬರುತ್ತೊದ್ದು ಈಗ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಕೇಂದ್ರ ಸರ್ಕಾರ ತರುತ್ತಿರುವ ಈ ಮೂರು ಹೊಸ ತಿದ್ದುಪಡಿ ಕ್ರಿಮಿನಲ್ ಕಾನೂನುಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ತಕ್ಷಣ ತಜ್ಞರ ಸಮಿತಿಯನ್ನು ರಚಿಸುವಂತೆ ನಿರ್ದಿಷ್ಟ ನಿರ್ದೇಶನಗಳನ್ನು ಕೋರಿ ನೋಟಿಸ್ ನೀಡುವಂತೆ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಕಳೆದ ವರ್ಷ, ಐಪಿಸಿ ಮತ್ತು ಇತರ ಕಾನೂನು ಬದಲಾಗಿ, ಹೊಸದಾಗಿ ಮೂರು ಕ್ರಿಮಿನಲ್ ಮಸೂದೆಯನ್ನು ಎರಡನೇ ಬಾರಿ ಮೋದಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ಆಂಗೀಕಾರಗೊಂಡಿತ್ತು. ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತಾ, ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್ ಬದಲಿಸುವ ಭಾರತೀಯ ನಾಗರೀಕ್ ಸುರಕ್ಷಾ ಸಂಹಿತಾ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಿಸುವ ಭಾರತೀಯ ಸಾಕ್ಷಿ ಅಧಿನಿಯಮ ಕಾಯಿದೆ, ಆಂಗೀಕಾರಗೊಂಡಿತ್ತು.