ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ Birthday Party: ಸಾರ್ವಜನಿಕರ ವ್ಯಾಪಕ ಆಕ್ರೋಶ

ಕೋಲಾರ: ಸರ್ಕಾರಿ ನಿಯಮಾವಳಿ ಉಲ್ಲಂಘಿಸಿ ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸದ ಅವಧಿಯಲ್ಲೇ ಹುಟ್ಟುಹಬ್ಬ ಆಚರಣೆ ಮಾಡಿರುವ ಘಟನೆ ಕೋಲಾರ ತಾಲ್ಲೂಕು ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ಸಿಬ್ಬಂದಿ ಕಂಪ್ಯೂಟರ್ ಆಪರೇಟರ್ ಜಯಪ್ರಕಾಶ್ ಎಂಬುವರ ಹುಟ್ಟುಹಬ್ಬ ಆಚರಣೆಯಲ್ಲಿ ಉಪ ನೊಂದಣಾಧಿಕಾರಿ ಪ್ರಸಾದ್ ಕುಮಾರ್ ಸೇರಿದಂತೆ ಎಲ್ಲಾ ಸಿಬ್ಬಂದಿ ಭಾಗಿಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಮಿನಿ ವಿಧಾನ ಸೌದದ ಎರಡನೇ ಮಹಡಿ ಸರ್ಕಾರಿ ಕಚೇರಿಯಲ್ಲಿ ಹಾಗೂ ಕೆಲಸದ‌ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಕ್ಕೆ ನೋಂದಣಿ ಸೇರಿ ಬೇರೆ ಬೇರೆ ಕೆಲಸಗಳಿಗಾಗಿ ಬಂದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳದಂತೆ ಇತ್ತೀಚೆಗೆ ಸರ್ಕಾರ ಆದೇಶ ನೀಡಿತ್ತು. ಸರ್ಕಾರಿ ಆದೇಶಕ್ಕೂ ಬೆಲೆ ನೀಡದೆ ಇರುವುದು ಬೇಜವಾಬ್ದಾರಿಯ ಪ್ರತೀಕ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿದ್ದು, ಇದರ ನಡುವೆ ಸಾಮಾನ್ಯ ಜನರ ಕೆಲಸಗಳಿಗೆ ಮೀಸಲಿಟ್ಟ ಸಮಯದಲ್ಲಿ ಹುಟ್ಟುಹಬ್ಬ ಆಚರಣೆ ಬೇಕಾ ಎಂಬ ಪ್ರಶ್ನೆ ಉದ್ಭವಿಸಿದೆ.

More articles

Latest article

Most read