ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ಕೊಡಮಾಡುವ 2024ನೇ ಸಾಲಿನ “ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಿದೆ. ಸುಮಾರು 3 ವಿದೇಶಿ ಗಣ್ಯರು ಸೇರಿ 60 ಸಾಧಕರಿಗೆ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡ ಪ್ಲಾನೆಟ್ನ ಅಂಕಣಕಾರ, ರಂಗಕರ್ಮಿ ಶಶಿಕಾಂತ ಯಡಹಳ್ಳಿ ಅವರಿಗೆ ಪ್ರತಿಷ್ಠಿತ ‘ಆರ್ಯಭಟ’ ಪ್ರಶಸ್ತಿ ಸಂದಿದೆ.
ಕಾನೂನು ಮತ್ತು ನ್ಯಾಯಾಂಗ ವಿಭಾಗದಿಂದ ಸಿ.ಕೆ.ವಿರೇಶ್ಕುಮಾರ್, ನಟ ರಕ್ಷಿತ್ಶೆಟ್ಟಿ ಚಲನಚಿತ್ರ, ಪತ್ರಕರ್ತ ವೈ.ಎಸ್.ಎಲ್.ಸ್ವಾಮಿ, ಮೇಘಾಶೆಟ್ಟಿ ಸೇರಿದಂತೆ ಹಲವು ಸಾಧಕರಿಗೂ ಈ ಪ್ರಶಸ್ತಿ ದೊರಕಿದ್ದು, ಅವರ ಜೊತೆ ಶಶಿಕಾಂತ ಯಡಹಳ್ಳಿಯವರೂ ‘ಆರ್ಯಭಟ’ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಗೌರವಾನ್ವಿತ ನಿವೃತ್ತ ನ್ಯಾಯಮೂರ್ತಿ ಡಾ. ಎಚ್.ಬಿ.ಪ್ರಭಾಕರ ಶಾಸ್ತ್ರಿರವರು ನೆರವೇರಿಸಲಿದ್ದು, ಮುಖ್ಯ ಅಥಿತಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ, ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ಎಸ್.ನಾರಾಯಣ್ ಭಾಗವಹಿಸಲಿದ್ದಾರೆ. ಆರ್ಯಭಟ ಸಂಸ್ಥೆಯ ಸಂಸ್ಥಾಪಕ ಡಾ. ಹೆಚ್.ಎಲ್.ಎನ್.ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 60 ಸಾಧಕರಿಗೆ 2024ನೇ ಸಾಲಿನ 49ನೇ ವಾರ್ಷಿಕ ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿಯನ್ನು ದಿನಾಂಕ 23/06/2024 ರಸಂಜೆ 6 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿತರಿಸಲಾಗುತ್ತದೆ.