ಹುಬ್ಬಳ್ಳಿ | ಕರ್ಕಶ ಶಬ್ದ ಮಾಡುತ್ತಿದ್ದ 200ಕ್ಕೂ ಅಧಿಕ ಸೈಲೆನ್ಸರ್‌ಗಳನ್ನು ನಾಶಪಡಿಸಿದ ಸಂಚಾರಿ ಪೊಲೀಸರು!

Most read

ರಾಜ್ಯದಲ್ಲಿ ಹೆಚ್ಚು ಕಿರಿಕಿರಿ ಮಾಡುವ ಬೈಕ್‌ ಗಳ ಸೈಲನ್ಸರ್‌ಗಳನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗುತ್ತಿದ್ದಾರೆ ಎಂಬ ಜನರ ಕೂಗಿನ ನಡುವೆಯೇ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಮೌಲ್ಯದ ಬೈಕ್ ಸೈಲೆನ್ಸರ್​ಗಳನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ನಾಶಪಡಿಸಿದ್ದಾರೆ.

ಹುಬ್ಬಳ್ಳಿ ಮತ್ತು ಧಾರವಾಡ ನಗರದಲ್ಲಿ ಜನಸಾಮಾನ್ಯರಿಗೆ ಕಿರಿಕಿರಿಯಾಗುವಂತೆ ಹೆಚ್ಚು ಶಬ್ದ ಮಾಡಿಕೊಂಡು ಬೈಕ್‌ ಓಡಿಸುತ್ತಿದ್ದವರನ್ನು ಹಿಡಿದು ಬೈಕ್‌ ಸೈಲೆನ್ಸರ್‌ ಬೇರ್ಪಡಿಸಿ ಅದನ್ನು ವಶಪಡಿಸಿಕೊಂಡಿದ್ದರು.

11 ಲಕ್ಷಕ್ಕೂ ಅಧಿಕ ಮೌಲ್ಯದ 200ಕ್ಕೂ ಹೆಚ್ಚು ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು, ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ನೇತೃತ್ವದಲ್ಲಿ ನಾಶಪಡಿಸಲಾಯಿತು.

ಶಬ್ದ ಮಾಲಿನ್ಯ ಮಾಡುವ ಸೈಲೆನ್ಸರ್‌ ತಯಾರಕರು ನಗರದಲ್ಲಿ ಇದ್ದಾರೆ. ಅವರಿಗೆ ಈ ಮೂಲಕ ಹೆಚ್ಚರಿಕೆ ರವಾನಿಸಲಾಗಿದೆ. ಮುಂದುವರೆದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರಿ ನಿಯಮ ಉಲ್ಲಂಘಿಸಿದರೆ ಏನಾಗುತ್ತದೆ ಎಂಬುದಕ್ಕೆ ಇಂದು ಸೈಲೆನ್ಸರ್‌ ನಾಶಪಡಿಸಿರುವುದೇ ಒಂದು ಉದಾಹಾರಣೆ ಅಷ್ಟೇ. ಮುಂದು ಇನ್ನು ದೊಡ್ಡ ಮಟ್ಟದ ಕಾರ್ಯಚರಣೆ ನಡೆಸುತ್ತೇನೆ ಎಂದು ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಎಚ್ಚರಿಕೆ ರವಾನಿಸಿದ್ದಾರೆ.

More articles

Latest article