ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುಯಾಗುತ್ತಿರುವ ಹಾಲ್ ಗೆ ದಿನಕ್ಕೆ 15 ಲಕ್ಷ ಬಾಡಿಗೆ..!

Most read

ಸದ್ಯ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಎಲ್ಲಿ, ಹೇಗೆ ನಡೆಯಬಹುದೆಂಬ ಕುತೂಹಲ ಜೋರಾಗಿದೆ. ಯಾಕಂದ್ರೆ ಈಗಾಗಲೇ ಪ್ರಿವೆಡ್ಡಿಂಗ್ ಮ್ಯಾರೇಜ್ ಅನ್ನೇ ಅಂಬಾನಿ ದೊಡ್ಡ ಮಟ್ಟಕ್ಕೆ ಮಾಡಿದ್ದಾರೆ. ಬಾಲಿವುಡ್ ತಾರೆಯರನ್ನೆಲ್ಲಾ ಕರೆಸಿದ್ದಾರೆ. ಈಗ ಮದುವೆ ವಿದೇಶದಲ್ಲಿ ಆಗಬಹುದು ಎಂಬ ಕಲ್ಪನೆ ಇತ್ತು. ಆದರೆ ಈಗ ಅದಕ್ಕೆಲ್ಲಾ ತೆರೆ ಬಿದ್ದಿದೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆಯಲಿದೆ.

ಜಿಯೋ ವರ್ಲ್ಡ್ ಸೆಂಟರ್ ಮಾಲೀಕರು ಮತ್ತ್ಯಾರು ಅಲ್ಲ ಮುಖೇಶ್ ಅಂಬಾನಿ ಅವರೇ. ತಮ್ಮ ಒಡೆತನದ ಐಷರಾಮಿ ಹಾಲ್ ನಲ್ಲಿಯೇ ಮದುವೆ ನಡೆಸುತ್ತಿದ್ದಾರೆ. ಈ ಜಿಯೋ ವರ್ಲ್ಡ್ ಮಾಲ್ ಸುಮಾರು 18.5 ಎಕರೆ ವಿಸ್ತೀರ್ಣದಲ್ಲಿದೆ. ಇದರ ಒಳಗೆ ಪರ್ಫಾಮಿಂಗ್ ಆರ್ಟ್ಸ್ ಆಫ್ ಥಿಯೇಟರ್, ರೂಪ್ ಟಾಪ್ ಡ್ರೈವ್ ಇನ್ ಥಿಯೇಟರ್, ಹೊಟೇಲ್ ಗಳು, ಎರಡು ಮಾಲ್ ಗಳು, ವಾಣಿಜ್ಯ ಸಂಕೀರ್ಣಗಳು ಇದಾವೆ.

ಮದುವೆ ನಡೆಯುವ ಜಿಯೋ ವರ್ಲ್ಡ್ ಗಾರ್ಡನ್ ಸುಮಾರು ಐದು ಲಕ್ಷ ಚದುರ ಅಡಿ ಇದೆ. ಪಶ್ವಿಮ ಮುಂಬೈನ ಅತಿ ದೊಡ್ಡ ತೆರೆದ ಸ್ಥಳವಾಗಿದೆ. ಇಲ್ಲಿ 5 ಸಾವಿರ ಕಾರುಗಳ ಪಾರ್ಕಿಂಗ್ ಮಾಡಬಹುದು. ಅಂಬಾನಿಯಂತಹ ಶ್ರೀಮಂತರ ಮದುವೆಗಳನ್ನು ಮಾಡುವುದಕ್ಕೆ ಉತ್ತಮವಾದ ಸ್ಥಳಾವಕಾಶ ಇಲ್ಲಿದೆ. ಈ ಹಾಲ್ ಬೇರೆಯವರು ಬಾಡಿಗೆ ತೆಗೆದುಕೊಳ್ಳಬೇಕೆಂದರೆ ದಿನದ ಬಾಡಿಗೆ 15 ಲಕ್ಷ ರೂಪಾಯಿ ಇದೆ. ವಿದೇಶದಲ್ಲಿ ಮದುವೆ ಮಾಡುತ್ತಾರೆಂಬ ವದಂತಿಗೆ ತೆರೆ ಎಳೆದಿರುವ ಅಂಬಾನಿ, ತಮ್ಮದೇ ಅದ್ದೂರಿತನದ ಹಾಲ್ ನಲ್ಲಿಯೇ ಮದುವೆ ಮಾಡುತ್ತಿದ್ದಾರೆ.

More articles

Latest article