ಹುರಿದು ರುಬ್ಬಿದ ಟಮೋಟೋ ಬಾತ್ ಸೂಪರ್

Most read

ಟಮೋಟೋ ಬಾತ್ ನಾನಾ ರೀತಿಯಾಗಿ ಮಾಡಬಹುದು. ಆದರೆ ಇವತ್ತು ರುಬ್ಬಿದ ಮಾಸಾಲೆಯೊಂದಿಗೆ ಟಮೋಟೋ ಬಾತ್ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಅದಕ್ಕೆ ಬೇಕಾಗುವ ಪದಾರ್ಥಗಳು:

ಟಮೋಟೋ
ಬ್ಯಾಡಗಿ‌ ಮೆಣಸಿನಕಾಯಿ
ಧನ್ಯ
ಶುಂಠಿ
ಬೆಳ್ಳುಳ್ಳಿ
ಮಸಾಲೆ ಪದಾರ್ಥಗಳು
ಎಣ್ಣೆ
ಉಪ್ಪು
ಅಕ್ಕಿ

ಮಾಡುವ ವಿಧಾನ: ಬಾಂಡಲಿಯಲ್ಲಿ ಎಣ್ಣೆ ಕಾಯಲು ಬಿಡಿ, ಅದಕ್ಕೆ ಒಳಮುಷ್ಠಿ ಧನ್ಯ, ಹದಿನೈದು ಬ್ಯಾಡಗಿ ಮೆಣಸಿನಕಾಯಿ, ಎರಡು ಉಂಡೆ ಬೆಳ್ಳುಳ್ಳಿ, ಸ್ವಲ್ಪ ಶುಂಠಿಯನ್ನು ಫ್ರೈ ಮಾಡಿಕೊಳ್ಳಿ. ಒಂದು ಟೇಬಲ್ ಸ್ಪೂನ್ ಒಂ ಕಾಳು, ಅರ್ಧ ಕಾಯಿ ತುರಿ ಹಾಕಿ ಮತ್ತೆ ಪ್ರೈ ಮಾಡಿಕೊಳ್ಳಿ. ಆರು ಟಮೋಟೋ ಅಚ್ಚಿಟ್ಟುಕೊಂಡು ಅದೇ ಫ್ರೈಗೆ ಹಾಕಿ ಸ್ವಲ್ಪ ಹೊತ್ತು ಉರಿದುಕೊಳ್ಳಿ. ತಣ್ಣಗಾದ ಮೇಲೆ ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.

ಅರ್ಧ ಕೆಜಿ ಅಕ್ಕಿಗೆ ಇಷ್ಟೆಲ್ಲ ಪದಾರ್ಥಗಳು ಬೇಕಾಗುತ್ತವೆ. ಒಂದು ಕುಕ್ಕರ್ ಗೆ 100 ಗ್ರಾಂನಷ್ಟು ಎಣ್ಟೆ ಹಾಕಿ ಕಾದ ಮೇಲೆ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮರಾಠಿ ಮೊಗ್ಗು, ಪಾಲಕ್ ಎಲೆಯನ್ನು ಹಾಕಿ ಫ್ರೈ ಮಾಡಿ. ನಂತರ ಸ್ವಲ್ಪ ಕರಿಬೇವು ಹಾಕಿ. ಒಂದು ಮುಷ್ಠಿಯಷ್ಟು ಗೋಡಂಬಿ ಹಾಕಿ ಫ್ರೈ ಮಾಡಿ. ಅದಕ್ಕೆ ಎರಡು ಈರುಳ್ಳಿ ಹಾಕಿ ನಂತರ ಕಸ್ತೂರಿ ಮೇತಿ, ಬಟಾಣಿ, ಅರಿಶಿನ ಪುಡಿ ಹಾಕಿ ಫ್ರೈ ಮಾಡಿ. ಬಳಿಕ ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ. ಅಕ್ಕಿಗೆ ಎಷ್ಟು ನೀರು ಬೇಕು ಎಂಬುದನ್ನು ನೋಡಿಕೊಂಡು ನೀರನ್ನು ಬೆರೆಸಿ. ಒಂದು ಕುದಿ ಬಂದ ಬಳಿಕ ಅದಕ್ಕೆ ಅಕ್ಕಿ ಬೆರೆಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮುಚ್ಚಳ‌ಮುಚ್ಚಿ. ಆಮೇಲೆ ತೆಗೆದರೆ ಆಹಾ ಅದ್ಭುತ ಟಮೋಟೋ ಬಾತ್ ರೆಡಿ.

More articles

Latest article