ಆರ್‌ಸಿಬಿ ಪ್ಲೇಆಫ್ ಪ್ರವೇಶಿಸುವುದು ಅಷ್ಟು ಸುಲಭವಿಲ್ಲ; ಕಾರಣವೇನು ಗೊತ್ತೇ?

Most read

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮೇ 18) ರಾತ್ರಿ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಸೆಣಸಲಿದೆ. ಪ್ಲೇ ಆಫ್ ಹಂತಕ್ಕೆ ಹೋಗುವುದಕ್ಕೆ ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದು, ಇದರ ಫಲಿತಾಂಶವೇ ಎಲ್ಲವನ್ನೂ ನಿರ್ಧರಿಸಲಿದೆ. ಈ ನಡುವೆ ಬೆಂಗಳೂರಲ್ಲಿ ಮೂರು ನಾಲ್ಕು ದಿನಗಳ ಕಾಲ ಭಾರೀ ಮಳೆಯ (Heavy Rain) ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ರಾಜ್ಯ ಹಾವಾಮಾನ ಇಲಾಖೆ ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು ಅಭಿಮಾನಿಗಳನ್ನು ಚಿಂತೆಗೆ ಈಡುಮಾಡಿದೆ

ಒಂದು ವೇಳೆ ಪಂದ್ಯದ ದಿನ ಮಳೆ ಬಾರದೆ ಇದ್ದರೂ ಸಹ ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುವುದು ಅಷ್ಟು ಸುಲಭವಾಗಿಲ್ಲ. ಆರ್‌ಸಿಬಿಗಿಂತ ಸಿಎಸ್‌ಕೆ ಒಂದು ಹೆಚ್ಚಿನ ಪಂದ್ಯವನ್ನು ಗೆದ್ದಿರುವುದು ಪ್ಲಸ್‌ ಪಾಯಿಂಟ್‌ ಆಗಲಿದೆ. ಅಲ್ಲದೇ ಸಿಎಸ್‌ಕೆ ನೆಟ್ ರನ್‌ ರೇಟ್ (NRR) ಕೂಡ‌ RCB ಗಿಂತ ಹೆಚ್ಚಾಗಿದೆ.

ಚೆನ್ನೈ 13 ಪಂದ್ಯಗಳನ್ನಾಡಿದ್ದು 7 ರಲ್ಲಿಗೆಲುವು ಸಾಧಿಸಿದೆ. CSK 6 ಪಂದ್ಯಗಳಲ್ಲಿ ಸೋತು 14 ಅಂಕ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. RCB 13 ಪಂದ್ಯಗಳಲ್ಲಿ 6 ಮ್ಯಾಚ್‌ ಗೆದ್ದಿದ್ದು, 7 ರಲ್ಲಿ ಸೋತಿದ್ದು 12 ಅಂಕ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ರನ್ ರೇಟ್ +0.528 ಮತ್ತು ಬೆಂಗಳೂರಿನ ರನ್ ರೇಟ್ +0.387 ಆಗಿದೆ.


ಬೆಂಗಳೂರು ತಂಡ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿ, 200 ರನ್ ಗಳಿಸಿ ಕನಿಷ್ಠ 18 ರನ್ ಗಳ ಅಂತರದಿಂದ ಮ್ಯಾಚ್‌ ವಿನ್‌ ಆದರೆ ಪ್ಲೇ ಆಫ್‌ ಕನಸು ಈಡೇರಲಿದೆ. ಒಂದು ವೇಳೆ ಬೆಂಗಳೂರು 200 ರನ್‌ಗಳ ಗುರಿ ಬೆನ್ನಟ್ಟಿದರೆ 11 ಎಸೆತ ಬಾಕಿ ಇರುವಾಗಲೇ ಪಂದ್ಯ ಗೆಲ್ಲಲೇಬೇಕು. ಆದರೆ ಗುರಿ ಬೇರೆಯಾದರೆ ಅದಕ್ಕೆ ಸಮೀಕರಣಗಳೂ ಬದಲಾಗುತ್ತವೆ. ಹೀಗಾಗಿ RCB ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಸುಲಭವಲ್ಲ.

ಮಳೆ ಬಂದರು ಕ್ರಿಕೆಟ್‌ ಆಡಬಹದು: ಚಿನ್ನಸ್ವಾಮಿಯಲ್ಲಿ ಹೊಸ ತಂತ್ರಜ್ಞಾನ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅತ್ಯುತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆ ಇರುವುದು ವಿಶೇಷವಾಗಿದ್ದು, ಸದ್ಯ ಬೆಂಗಳೂರು ಹವಾಮಾನದ ಹಿನ್ನೆಲೆಯಲ್ಲಿ ಮತ್ತೆ ಚರ್ಚೆಯಲ್ಲಿದೆ. ಈ ವ್ಯವಸ್ಥೆಯನ್ನು ದೇಶದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಮಳೆ ಬಂದು ನಿಂತ ನಂತರ, ಮೈದಾನದಲ್ಲಿ ಎಷ್ಟೇ ಪ್ರಮಾಣದ ನೀರು ಇದ್ದರೂ ಕೇವಲ 15 ನಿಮಿಷಗಳ ಅವಧಿಯಲ್ಲಿ ಸಬ್ಏರ್ ವ್ಯವಸ್ಥೆಯು ಮೈದಾನವನ್ನು ಆಟಕ್ಕೆ ಸಿದ್ಧಪಡಿಸುವುದು ವಿಶೇಷ.

ಸಬ್ ಏರ್ ಸಿಸ್ಟಮ್ಸ್ ನಿರ್ಮಿಸಿದ ಉಪ ಮೇಲ್ಮೈ ಗಾಳಿ ಮತ್ತು ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆ ಇದಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇದನ್ನು 2017 ರಲ್ಲಿ ಅಳವಡಿಸಲಾಗಿದೆ. ಇದು ಪ್ರತಿ ನಿಮಿಷಕ್ಕೆ 10,000 ಲೀಟರ್ ಪ್ರಮಾಣದಲ್ಲಿ ನೆಲದಿಂದ ನೀರನ್ನು ಸ್ಥಳಾಂತರಿಸಬಲ್ಲದು. ಈ ವ್ಯವಸ್ಥೆ ಅಳವಡಿಸುವುದಕ್ಕೆ 4.25 ಕೋಟಿ ರೂಪಾಯಿ ವ್ಯಯಿಸಿದೆ. ಇದಕ್ಕಾಗಿ 4.5 ಕಿ.ಮೀ. ಪೈಪ್ ಬಳಸಲಾಗಿದೆ.

More articles

Latest article