ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ (Pen Drive Case) ನಿನ್ನೆ ಪೊಲೀಸರ ವಶದಲ್ಲಿದ್ದ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜೇಗೌಡರನ್ನ (Devarajegowda) ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಶನಿವಾರ ಬಂಧಿಸಿ ಜೆಎಂಎಸ್ ಪಿ ನ್ಯಾಯಾಲಯ ಮುಂದೆ ಹಾಜರು ಪಡಿಸಿತ್ತು. ಈಗ ನ್ಯಾಯಾಲಯವು ದೇವರಾಜೇಗೌಡನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಇಲ್ಲಿಯ ಜೆ ಎಂ ಎಪ್ ಸಿ ನ್ಯಾಯಾಲಯ ವಕೀಲ ಹಾಗೂ ಬಿಜೆಪಿ ಮುಖಂಡ ದೇವರಾಜ ಗೌಡ ರವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಸಿದೆ.
ಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಮಹಿಳೆಯೊಬ್ಬರು ವಕೀಲ ದೇವರಾಜೇಗೌಡ ವಿರುದ್ಧ ಏಪ್ರಿಲ್ 1 ತಂದು ನೀಡಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪರಸ್ಥಳಕ್ಕೆ ತೆರಳುತ್ತಿದ್ದ ವಕೀಲ ದೇವರಾಜೇಗೌಡರನ್ನ ಹಿರಿಯೂರಿನಲ್ಲಿ ಬಂಧಿಸಿ, ಶನಿವಾರ ರಾತ್ರಿ ನ್ಯಾಯಾಲಯಕ್ಕೆ ಹಾಜರು ಪಡಿಸಿಸಲಾಗಿತ್ತು.
ಇಲ್ಲಿಯ ಜೆ ಎಂ ಎಪ್ ಸಿ ನ್ಯಾಯದೀಶರು ಜಮೀನು ನಿರಾಕರಿಸಿ ಮೇ 24ರ ವರಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಸಿದೆ.
ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಇರುವ ವೃತ್ತ ನಿರೀಕ್ಷಕರ ಕಚೇರಿ ಆವರಣದಲ್ಲಿ ವಕೀಲ ದೇವರಾಜೇಗೌಡರಿಂದ ಮಾಹಿತಿ ಕಲೆ ಹಾಕಿದ ಪೊಲೀಸರು, ಸಂತ್ರಸ್ತೆ ಮಹಿಳೆ ಕಾರಿನಲ್ಲೂ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ದೂರು ದಾಖಲಿಸಿದ್ದ ಹಿನ್ನಲೆಯಲ್ಲಿ ಕಾರಿನ ಪಂಚನಾಮೆ ನಡೆಸಿ, ಕಾರು, ಕಾರಿನಲ್ಲಿದ್ದ ಬ್ಯಾಗ್ ಮತ್ತು ಮೊಬೈಲ್ ವಶಪಡಿಸಿಕೊಂಡರು. ನ್ಯಾಯಾಂಗಕ್ಕೆ ಒಳಪಡಿಸುವ ಮುನ್ನ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.
ಏಪ್ರಿಲ್ ೧ ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವಕೀಲ ದೇವರಾಜೇಗೌಡನ ಮೇಲೆ ಮಹಿಳೆ ನೀಡಿದ್ದ ದೂರನ್ನಾಧರಿಸಿ ಪ್ರಕರಣ ದಾಖಲಾಗಿತ್ತು. ಸಂತ್ರಸ್ಥೆ ಪತಿ ಸಹ ಜಾತಿ ನಿಂಧನೆ ಆರೋಪ ನಡೆಸಿ ಇದೇ ಪಟ್ಟಣದ ಠಾಣೆಗೆ ಮಾರ್ಚ್ ೩೧ ರಂದು ದೂರು ನೀಡಿದ್ದರು. ಇತ್ತೀಚೆಗೆ ಪ್ರಜ್ವಲ್ ಪೆನ್‌ಡ್ರೆöÊವ್ ಪ್ರಕರಣದಲ್ಲಿ ಹಲವು ಹೇಳಿಕೆ ನೀಡಿದ್ದ ವಕೀಲ ದೇವರಾಜೇಗೌಡ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಬಂಧನದ ಭೀತಿಯಿಂದ ಪರಾರಿಯಾಗಲು ಎತ್ನಿಸಿದ್ದ ವೇಳೆಯಲ್ಲಿ ಖಚಿತ ಮಾಹಿತಿ ಮೇರೆಗೆ ಹಿರಿಯೂರು ಸಮೀಪ ಗುರುವಾರ ರಾತ್ರಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.
ಶುಕ್ರವಾರ ಬೆಳಗ್ಗೆ ಪಟ್ಟಣದ ವೃತ್ತನಿರೀಕ್ಷಕರ ಕಚೇರಿಗೆ ಕರೆತಂದು ಎಸ್ಪಿ ಮಹಮದ್ ಸುಜೇತಾ, ಪೊಲೀಸ್ ಎಎಸ್ಪಿ ವೆಂಕಟೇಶ್‌ನಾಯ್ಡು, ಡಿವೈಎಸ್ಪಿ ಅಶೋಕ್ ಹಾಗೂ ವೃತ್ತನಿರೀಕ್ಷಕ ಸುರೇಶ್‌ಕುಮಾರ್ ಸಂಜೆ ೪ ಗಂಟೆ ವರೆಗೆ ವಿಚಾರಣೆ ನಡೆಸಿದರು. ಹತ್ತಾರು ವಾಹಿನಿಗಳ ಕ್ಯಾಮರಾ ಕಂಡು ಸಾರ್ವಜನಿಕರು ಠಾಣೆ ಸಮೀಪ ಜಮಾಯಿಸಿದರು. ಅಲ್ಲಲ್ಲಿ ಕುತೂಹಲದ ವೀಕ್ಷಣೆಗಾಗಿ ಕಾದು ನಿಂತಿದ್ದ ಸಾರ್ವಜನಿಕರರನ್ನು ಸ್ಥಳದಿಂದ ಕಳುಹಿಸಿದ ಪೊಲೀಸರು ವ್ಯವಸ್ಥೆ ಬಿಗಿಗೊಳಿಸಿದರು.
ವಿಚಾರಣೆ ವೇಳೆ ಪ್ರಶ್ನೆಗೆ ಮರುಪ್ರಶ್ನೆ ಹಾಕಿದ್ದಾರೆ. ನಾನು ಈ ಮೊದಲೇ ನನ್ನ ಮೇಲೆ ಹನಿಟ್ರಾಪ್ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ದೂರು ನೀಡಿದ್ದೇನೆ ಎಂದು ವಿಚಾರಣೆ ವೇಳೆ ಸಮರ್ಥಿಸಿಕೊಂಡಿರುವ ಬಗ್ಗೆ ಮೂಲಗಳಿಂದ ತಿಳಿದುಬಂದಿತ್ತು. ಬಂಧಿಸಿ ಕರೆತಂದ ದೇವರಾಜೇಗೌಡರ ಆರೋಗ್ಯ ವಿಚಾರಿಸಲು ಬಂದಿದ್ದ ಸುನೀಲ್ ಮತ್ತು ಇತರೆ ವಕೀಲರನ್ನು ವಿಚಾರಣೆ ನಂತರ ಭೇಟಿಗೆ ಅವಕಶ ನೀಡುತ್ತೇವೆ ಎಂದು ಯಾರನ್ನೂ ಭೇಟಿ ಮಾಡಲು ಬಿಟ್ಟಿಲ್ಲ ಎನ್ನಲಾಗಿದೆ.