ಮತಗಟ್ಟೆಯ ಬಳಿ ಬಿಜೆಪಿ ಶಾಲು, ಚಿಹ್ನೆ ಬಳಸಿ ಮತಯಾಚನೆ: ಡಾ. ಅಂಜಲಿ ನಿಂಬಾಳ್ಕರ್ ಗರಂ

Most read

ಖಾನಾಪುರ (ಬೆಳಗಾವಿ): ಖಾನಾಪುರದ ನಿಟ್ಟೂರು ಮತಗಟ್ಟೆ ಬಳಿ ಬಿಜೆಪಿ ಶಾಲು, ಬಾವುಟಗಳನ್ನು ಇಟ್ಟುಕೊಂಡು ಪ್ರಚಾರ ನಡೆಸುತ್ತಿದ್ದುದನ್ನು ಗಮನಿಸಿದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.

ಪ್ರಾಮಾಣಿಕವಾಗಿ ಚುನಾವಣೆ ಎದುರಿಸಿ ಎಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಕಿಡಿಕಾರಿದ ಅವರು ಪ್ರಚಾರಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಚುನಾವಣಾಧಿಕಾರಿಗಳಿಗೂ ತರಾಟೆ ತೆಗೆದುಕೊಂಡರು.

ಉತ್ತರ ಕನ್ನಡದಲ್ಲಿ ಬದಲಾವಣೆ ಬಯಸಿ ಹೆಚ್ಚಿನ ಪ್ರಮಾಣದ ಮತದಾನವಾಗುತ್ತಿದೆ

ಸಂವಿಧಾನದ ರಕ್ಷಣೆ ಜೊತೆಯಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಜನತೆ ಬದಲಾವಣೆ ಬಯಸಿ ಮತದಾನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಹೇಳಿದರು.

ಖಾನಾಪುರ ಮತಗಟ್ಟೆ ಸಂಖ್ಯೆ-116 ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡುಮಕ್ಕಳ ಶಾಲೆಯಲ್ಲಿ ಮತ ಚಲಾಯಿಸಿ ಮಾತನಾಡಿದ ಅವರು ಎಂಟು ಕ್ಷೇತ್ರದಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ಉತ್ತರ ಕನ್ನಡದಲ್ಲಿ ಬದಲಾವಣೆ ಬಯಸಿ ಹೊಸದೊಂದು ಇತಿಹಾಸ ನಿರ್ಮಿಸಲು ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಸ್ವಯಂ ಪ್ರೇರಿತರಾಗಿ ಮತದಾನ ಮಾಡುತ್ತಿದ್ದಾರೆ, ಮತದಾನ ಸಂವಿಧಾನ ನಮಗೆ ನೀಡಿರುವ ಮಹತ್ವದ ಅಧಿಕಾರ ಪ್ರತಿಯೊಬ್ಬರು ಮತ ಚಲಾಯಿಸಿ ಎಂದರು.

More articles

Latest article