ಹೊನ್ನಾವರ/ಭಟ್ಕಳ: ಎದ್ದೇಳು ಕರ್ನಾಟಕ ಉತ್ತರ ಕನ್ನಡ ಜಿಲ್ಲಾ ಘಟಕವು ಏಪ್ರಿಲ್ 27 ಮತ್ತು 28 ರಂದು ಕ್ಷೇತ್ರದ ಹೊನ್ನಾವರ ಮತ್ತು ಭಟ್ಕಳ, ತಾಲೂಕಿನಲ್ಲಿ ಚುನಾವಣಾ ಪೂರ್ವ ಜನ ಜಾಗೃತಿ ಕಾರ್ಯಕ್ರಮ ಮತ್ತು ಜನರೊಂದಿಗೆ ಸಂವಾದ ಹಾಗೂ ವಿವಿಧ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಲಾಯಿತು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರವೂ ಹಲವು ದಶಕಗಳಿಂದ ಅಭಿವೃದ್ದಿ ವಂಚನೆ ಗೊಂಡಿದೆ. ಹೀಗಾಗಿ ಈ ಸಲ ಬಿಜೆಪಿ ಏತರ ಅಭ್ಯರ್ಥಿಯಾಗಿರುವ ಡಾ ಅಂಜಲಿ ನಿಂಬಾಳ್ಕರ್ ಅವರನ್ನು ಬೆಂಬಲಿಸಿ ಗೆಲ್ಲಿಸುವಂತೆ ಮನವಿ ಮಾಡಲಾಯಿತು.
ಏಪ್ರಿಲ್ 27 ರಂದು ಭಟ್ಕಳ ತಾಲೂಕಿನ ಬೈಲೂರು, ತುದ್ದಳ್ಳಿ, ಮುರ್ಡೇಶ್ವರ , ಬೇಂಗ್ರೆ, ಶಿರಾಲಿ, ಆಲ್ವೇಕೊಡಿ, ಚಿತ್ರಾಪುರ, ಶಾರ್ದೊಳೆ, ಗಣೇಶ ನಗರ, ಗುದ್ದೇಮಕ್ಕಿ, ಮಂಕಿ, ತಾರ್ಮಸ್ಕಿ, ಅನಂತವಾಡಿ, ಕೋಟಾ,ಮಾವಳ್ಳಿ, ಮಾದೀಕೋಡ್ಲು, ನಿರಕಂಠ, ಮುಂತಾದ ಕಡೆಗಳಲ್ಲಿ ಏಪ್ರಿಲ್ 28 ರಂದು, ಹೊನ್ನಾವರ ತಾಲೂಕಿನ ಹಳದಿಪುರ, ಈರಪ್ಪನಹಿತ್ಲು, ಗೊಡ್ಕುಳಿ, ಹೊರಭಾಗ, ಕರಿಮುಲೆ, ಬೈಗಾರಕೇರಿ, ಧಾರೇಶ್ವರ, ಪಾವಿನಕೂರ್ವ, ಮಣ್ಣಗದ್ದೆ, ಕೇವಿಹಿತ್ಲು, ನಡುವಿನಕೆರಿ,ಬಗ್ರಾನಿ, ಕಿರಬೈಲ, ತಾರಿಬಾಗಿಲು, ಬೇತ್ತಗೆರಿ, ದೇವಗಿರಿ. ಮುಂತಾದ ಕಡೆಗಳಲ್ಲಿ ಮೀನುಗಾರ ಮುಖಂಡರು, ಭಂಡಾರಿ ಸಮಾಜದ ಮುಖಂಡರು. ಇಡಿಗ ಸಮಾಜದ ಮುಖಂಡರು, ದೇವಾಡಿಗ ಸಮಾಜದ ಮುಖಂಡರು, ಇವರೊಂದಿಗೆ ಸಭೆ ನಡೆಸಲಾಯಿತು.
ಅನೇಕ ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ಬೇಡಿಕೆಯಾಗಿರುವ ಮತ್ತು ತುರ್ತಾಗಿ ನಿರ್ಮಿಸಲೇಬೇಕಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಲೆಬೇಕೆಂಬ ಹಕ್ಕೊತ್ತಾಯ ಮಂಡಿಸಿದರು. ಯುವ ಜನರು ಎದುರಿಸುತ್ತಿರುವ ನಿರುದ್ಯೋಗ ಸಮಸ್ಯೆ, ಉದ್ಯೋಗ ಇಲ್ಲದಿರುವುದರಿಂದ ಬೋಟ್ ಮೇಲೆ ಮೀನುಗಾರಿಕೆ, ಮೀನುಗಾರರಿಗೆ ಮೂಲಭೂತ ಸೌಕರ್ಯಗಳ ಕೊರತೆ, ಸೇತುವೆ ಇಲ್ಲದೆ ಸಂಪರ್ಕ ಕಡಿತ, ರಸ್ತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಮುಂತಾದ ಸಮಸ್ಯೆಗಳನ್ನು ಹೇಳಿಕೊಂಡರು, ಇದೇ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಪ್ರಕಟಿಸಿದ “ಅನುಭವಿಸಿದ್ದು ಸಾಕು” ಎಂಬ ಪುಸ್ತಕ ಮತ್ತು “ನಾಡ ಉಳಿಸುವ ಮಹಾಕಾಯಕದಲ್ಲಿ ಕೈ ಗೂಡಿಸ ಬನ್ನಿ” ಎಂಬ ಕರಪತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಈ ಸಭೆ ಮತ್ತು ಸಂವಾದ ಕಾರ್ಯಕ್ರಮದ ಸಂದರ್ಭದಲ್ಲಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಬರೆದಿರುವ ಮನೆ ಮನೆಗೆ ಸಂವಿಧಾನ ಪುಸ್ತಕವನ್ನು ವಿತರಿಸಲಾಯಿತು.