ಉತ್ತರ ಕನ್ನಡ ಜಿಲ್ಲೆಯ ನಕಲಿ ಹಿಂದುತ್ವಕ್ಕೆ ಹಿನ್ನಡೆಯಾದೀತೆ???

Most read

ಇತ್ತೀಚೆಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಒಂದು ಸಮೂಹ ಗಟ್ಟಿಯಾಗಿ ಮಾತನಾಡ ತೊಡಗಿತು. ಜನರಿಗೆ ಹಿಂದುತ್ವ ಹೇಳುವುದು ಕೇವಲ ರಾಜಕೀಯ ಅನ್ನಿಸ ತೊಡಗಿದೆ. ಜಿಲ್ಲೆಯ ಸಹಸ್ರಾರು ಪದವೀಧರರಿಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಬೆಲೆ ಏರಿಕೆ ಬಿಸಿ. ಹಾಗಾಗಿ ಬಿಜೆಪಿಗೆ ಭಾವನಾತ್ಮಕವಾಗಿ ಹುಬ್ಬಳ್ಳಿ ಲವ್ ಪ್ರಕರಣದಂತಹ ಸಂಗತಿಯನ್ನು ಪ್ರಚಾರ ಮಾಡುವ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ಜನ ಜಾಗೃತರಾದರೆ ಈ ಬಾರಿ ನಕಲಿ ಹಿಂದುತ್ವ ಶೋಷಣೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ – ಸುಬ್ರಾಯ ಆರ್ ಹೆಗಡೆ, ಸಿದ್ದಾಪುರ.

ಉತ್ತರ ಕನ್ನಡ ಜಿಲ್ಲೆಯಲ್ಲಿ  ಎರಡು ಭಾಗವಿದೆ. ಘಟ್ಟದ ಮೇಲಿನ ಶಿರಸಿ ಯಲ್ಲಾಪುರ ಮುಂಡಗೋಡ ಸಿದ್ಧಾಪುರ ಇದ್ದರೆ, ಘಟ್ಟದ ಕೆಳಗೆ ಭಟ್ಕಳ  ಕುಮುಟಾ ಹೊನ್ನಾವರ ಅಂಕೋಲ ಕಾರವಾರ ಬರುತ್ತದೆ. ಉಡುಪಿ ಮತ್ತು ಮಂಗಳೂರಿನ  ಪ್ರಭಾವ ಘಟ್ಟದ ಕೆಳಗಿನ ಕರಾವಳಿಯ ಊರಿನಲ್ಲಿ ಕೊಂಚ ಇದೆ.

ಉತ್ತರ ಕನ್ನಡದಲ್ಲಿ ಭಟ್ಕಳದಲ್ಲಿ ಮುಸ್ಲಿಂ ಬ‍ಾಹುಳ್ಯ. ಆದರೆ ಅಲ್ಲಿ ಕೂಡಾ ಹಿಂದೂ ಶಾಸಕ ಗೆದ್ದದ್ದೂ ಇದೆ. ಉಳಿದಂತೆ ಮುಸ್ಲಿಂರು ಅಲ್ಲಿ ಸ್ವಲ್ಪವೇ ಇರುವುದು.

ಆನಂತರ ಅನಂತ ಹೆಗಡೆ ಹಿಂದುಳಿದ ವರ್ಗದ ಯುವಕರನ್ನು ಸೇರಿಸಿ ಹಿಂದುತ್ವದ ಹೆಸರಿನಲ್ಲಿ ನಿರಂತರ ಲೋಕಸಭಾ ಸದಸ್ಯರಾದರು.  ಬಿಜೆಪಿ ಒಂದು ಬಣ ಅವರ ವಿರುದ್ಧವಾಗಿ ನಿಂತಿತು. ಈಗ ಅವರ ಬದಲು ವಿಶ್ವೇಶ್ವರ ಹೆಗಡೆಯವರಿಗೆ ಬಿಜೆಪಿ ಸೀಟು ನೀಡಿದೆ.

ತೀರಾ ಮತೀಯವಾದವೇ ಬಿಜೆಪಿ ಅಜೆಂಡಾ, ಹಿಂದೂ ರಾಷ್ಟ್ರ,  ಸಂವಿಧಾನ ಬದಲಾವಣೆ ಹೀಗೆ ಅತಿರೇಕದ ಕನಸು ಕಟ್ಟಿದ್ದ ಅನಂತ ಕುಮಾರ ಅನುಯಾಯಿಗಳಿಗೆ ದೊಡ್ಡ ಹೊಡೆತ ಅನಂತಜೀಯವರ ಸೀಟು ತಪ್ಪಿದ್ದು.

ದೇಶದ ಅನೇಕ ಎಂ ಪಿ ಸೀಟುಗಳಲ್ಲೂ ಹೀಗೇ ಆಗಿದೆ. ಅನಂತ ಹೆಗಡೆಯವರ ಫೇಸ್‌ಬುಕ್‌ ಅಭಿಮಾನಿಗಳು ಬಿಜೆಪಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗದುಕೊಂಡು ಈಗ ಚುನಾವಣೆ ವಿಷಯದಿಂದ ದೂರವಿದ್ದಾರೆ. ಹಿಂದೂ ಹುಲಿ ..ಮುಂದಿನ ಮುಖ್ಯಮಂತ್ರಿ ಅಂತೆಲ್ಲಾ ಬರೆದುಕೊಂಡವರು ಮೂಲೆಗೆ ಬಿದ್ದ ತಮ್ಮ ನಾಯಕನನ್ನು ನೋಡಿ ಕೆರಳಿದ್ದಾರೆ. ಸೇಡು ತೀರಿಸಿಕೊಳ್ಳಲು ಕಾದಿದ್ದಾರೆ.

ಇನ್ನೊಂದು ವರ್ಗ ಬಿಜೆಪಿಯಲ್ಲಿರುವ ಬ್ರಾಹ್ಮಣರು. ವಿಶ್ವೇಶ್ವರ ಹೆಗಡೆ ಅನುಯಾಯಿಗಳು. ಅವರದು ಮೋದಿ ಭಕ್ತಿ ಮತ್ತು ಹಿಂದುತ್ವ. ಇವರು ಹಿಂದುತ್ವ ದ ಕುರಿತು ಹೋರಾಟ ಮಾಡುವ ಜನಗಳಲ್ಲ. ಕೇವಲ ಎತ್ತಿಕಟ್ಟುವ ವರ್ಗ. ಸಧ್ಯ ಇವರು ಮಾತ್ರ ಬಿಜೆಪಿ ಜೊತೆಗಿದ್ದಾರೆ.

ಆರ್ ಎಸ್ ಎಸ್ ಶಾಖೆ ಅಂತಹ ದೊಡ್ಡ ಪ್ರಮಾಣದಲ್ಲೇನೂ ಇಲ್ಲ. ಸಂಘದ ಸ್ವಯಂ ಸೇವಕರಲ್ಲೂ ಎರಡು ಭಾಗವಿದೆ. ಒಂದು ಗುಂಪು ಅನಂತರ ಜೊತೆಗಿದೆ.

ಅಂಜಲಿ ನಿಂಬಾಳ್ಕರ್-‌ ಕಾಂಗ್ರೆಸ್‌ ಅಭ್ಯರ್ಥಿ

ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡು ತಾಲೂಕಿನಲ್ಲಿ ಅಲ್ಪ ಸಂಖ್ಯೆಯ ಮುಸ್ಲಿಂರಿದ್ದರೂ ಯಾವುದೇ ಹಿಂದೂ ಮುಸ್ಲಿಂ ಘರ್ಷಣೆಯ ವಿಷಯ ಇಲ್ಲ. ಆದರೂ ಮುಸ್ಲಿಂ ರನ್ನು ತೋರಿಸಿ ಹಿಂದೂಗಳನ್ನು ಬೆದರಿಸಿ ಬಿಜೆಪಿ ತನ್ನ ಚೀಲದಲ್ಲಿರಿಸಿಕೊಂಡಿತ್ತು.

ಆದರೆ ಇತ್ತೀಚೆಗೆ ಜಿಲ್ಲೆಯ ಅಭಿವೃದ್ಧಿ ಕುರಿತು ಒಂದು ಸಮೂಹ ಗಟ್ಟಿಯಾಗಿ ಮಾತನಾಡ ತೊಡಗಿತು. ಜನರಿಗೆ ಹಿಂದುತ್ವ ಹೇಳುವುದು ಕೇವಲ ರಾಜಕೀಯ ಅನ್ನಿಸ ತೊಡಗಿದೆ. ಜಿಲ್ಲೆಯ ಸಹಸ್ರಾರು ಪದವೀಧರರಿಗೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯೂ ಆಗಿಲ್ಲ. ಬೆಲೆ ಏರಿಕೆ ಬಿಸಿ. ಹಾಗಾಗಿ ಬಿಜೆಪಿ ಭಾವನಾತ್ಮಕವಾಗಿ ಹುಬ್ಬಳ್ಳಿ ಲವ್ ಪ್ರಕರಣದಂತಹ ಸಂಗತಿಯನ್ನು ಪ್ರಚಾರ ಮಾಡುವ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗದ ಜನ ಜಾಗೃತರಾದರೆ ಈ ಬಾರಿ ನಕಲಿ ಹಿಂದುತ್ವ ಶೋಷಣೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ.

ಸುಬ್ರಾಯ ಆರ್ ಹೆಗಡೆ. ಸಿದ್ದಾಪುರ

ಇದನ್ನೂ ಓದಿ- ಕುಣಬಿ, ಕುಂಬ್ರಿಗಳ ಎಸ್ಟಿ ಹೋರಾಟಕ್ಕೆ ಸಂಸತ್‌ನಲ್ಲಿ ದನಿಯಾಗುವೆ: ಡಾ.ಅಂಜಲಿ

More articles

Latest article