ಪ್ರಜ್ವಲ್ ಅಶ್ಲೀಲ ವಿಡಿಯೋ ಹಗರಣ: ಇಂದು SIT ಮುಖ್ಯಸ್ಥ B.K. ಸಿಂಗ್ ನೇತೃತ್ವದಲ್ಲಿ ಸಭೆ.

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಮತ್ತು ಈ ಸಂಬಂಧ ದಾಖಲಾಗಿರುವ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿರುವ ವಿಶೇಷ ತನಿಖಾ ತಂಡ (SIT) ದ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಇಂದು ನಡೆಯಲಿದೆ.

ಸಿಐಡಿ ಕಚೇರಿಯಲ್ಲಿ SIT ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಮಹತ್ವದ ಸಭೆಯಲ್ಲಿ ಎಸ್ ಐಟಿ ತಂಡದಲ್ಲಿರುವ ಐಪಿಎಸ್ ಅಧಿಕಾರಿಗಳಾದ ಸುಮನ್ ಡಿ ಪನ್ನೇಕರ್, ಸೀಮಾ ಲಾಟ್ಕರ್ ಭಾಗವಹಿಸಲಿದ್ದಾರೆ.

ತನಿಖೆ ವಿಧಾನ, ಎಸ್ ಐಟಿಗೆ ಅಧಿಕಾರಿ-ಸಿಬ್ಬಂದಿ ನೇಮಕ ಸೇರಿದಂತೆ ಪ್ರಕರಣದ ವಿಚಾರಣೆಯ ಪ್ರಾಥಮಿಕ ವಿಚಾರಗಳ ಕುರಿತು ಅಧಿಕಾರಿಗಳು ಚರ್ಚಿಸಲಿದ್ದಾರೆ.

More articles

Latest article

Most read