ಪ್ರಜ್ವಲ್ ನಮ್ಮವನಲ್ಲ: ಕೈತೊಳೆದುಕೊಂಡ ಜೆಡಿಎಸ್ ನಾಯಕರು

ಬೆಂಗಳೂರು: ಕರ್ನಾಟಕ ಕಂಡುಕೇಳರಿಯದ ವಿಕೃತ ಲೈಂಗಿಕ ಹಗರಣ ನಡೆಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೂ ಜೆಡಿಎಸ್ ಗೂ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಜೆಡಿಎಸ್ ನಾಯಕರು ಕೈತೊಳೆದುಕೊಂಡಿದ್ದಾರೆ.

ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ‌ಜೆಡಿಎಸ್ ನಾಯಕರುಗಳಾದ ಜಿ.ಟಿ. ದೇವೇಗೌಡ, ಶರವಣ, ರಮೇಶ್ ಗೌಡ ಉಪ್ಪು ತಿಂದವರು ನೀರು ಕುಡಿಯಲಿ ಎಂದು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣಗೂ ಬಿಜೆಪಿಗೂ ಸಂಬಂಧವಿಲ್ಲ, ಅಷ್ಟು ಮಾತ್ರವಲ್ಲ ಪ್ರಜ್ವಲ್ ಗೂ ಜೆಡಿಎಸ್ ಗೂ ಸಂಬಂಧವಿಲ್ಲ‌ ಎಂದು ಅಚ್ಚರಿಯ ಹೇಳಿಕೆ ನೀಡಿದ ಅವರು, ಪ್ರಕರಣದಲ್ಲಿ ತಪ್ಪು ಆಗಿದೆ ಅಂತಲೂ ಹೇಳಲ್ಲ. ತಪ್ಪು ಮಾಡಿಲ್ಲ ಅಂತಲೂ ವಾದ ಮಾಡಲ್ಲ. ತನಿಖೆ ಆದ ಮೇಲೆ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದರು.

More articles

Latest article

Most read