ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ರಾಜಕೀಯಗೊಳಿಸಿ ರಾಜಕೀಯ ಲಾಭ ಪಡೆಯಲು ಬಿಜೆಪಿ ಮತ್ತಿತರರು ಮುಂದಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಇದಕ್ಕೆ ಅಂತ್ಯವಾಡಿದ್ದಾರೆ.
ಇಂದು ನೇಹಾ ಹಿರೇಮಠ ಮನೆಗೆ ಸಿಎಂ ಭೇಟಿ ಮಾಡುತ್ತಿದ್ದು, ನೇಹಾ ಹಿರೇಮಠ ಮನೆಯ ಸುತ್ತ ಪೋಲಿಸ್ ಭದ್ರತೆ ಒದಗಿಸಲಾಗಿದೆ.
ನೇಹಾ ಅವರ ಅತ್ಯಯನ್ನು ಹಿಂದೂ ಮುಸ್ಲಿಂ ಹೋರಾಟ ಎಂಬಂತೆ ಬಿಂಬಿಸಿ ರಾಜ್ಯಾದ್ಯಂತ ಸುದ್ದಿ ಹರಡುತ್ತಿದ್ದ ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಮತ್ತವರ ಸಚಿವರು ಇದು ಸೂಕ್ಷ್ಮ ವಿಷಯ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು ಎಂದು ಹೇಳಿದ್ದರು. ಬಿಜೆಪಿ ತನ್ನ ರಾಜಕೀಯಕ್ಕಾಗಿ ಹೇಳಿಕೆ ನೀಡುತ್ತಲೇ ಬಂದಿದ್ದರು. ಆದರೆ ಈಗ ಸಿದ್ದರಾಮಯ್ಯ ಅವರೇ ನೇಹಾ ಅವರ ಮನೆಗೆ ಭೇಟಿ ನೀಡುವ ಮೂಲಕ ಬಿಜೆಪಿಯ ರಾಜಕೀಯಕ್ಕೆ ತೆರೆ ಎಳೆದಿದ್ದಾರೆ.

                                    