ಎಚ್ಚರಿಕೆ, ಮುಂದಿನ ಹತ್ತು ದಿನಗಳ ಕಾಲ ರಣಬಿಸಿಲು ತಡೆದುಕೊಳ್ಳಲು ಸಿದ್ಧರಾಗಿ!

Most read

ಬೆಂಗಳೂರು: ರಾಜ್ಯದಲ್ಲಿ ಮುಂಗಾರುಪೂರ್ವ ಮಳೆ ದುರ್ಬಲವಾಗಿದ್ದು, ತಾಪಮಾನದಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಮಾರ್ಚ್‌ 24ರಿಂದ ಮೇ 2ರವರೆಗೆ ರಾಜ್ಯಾದ್ಯಂತ ಬಿಸಿಲು ಮತ್ತು ಬಿಸಿಗಾಳಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದೆ.

ಮುಂದಿನ ಹತ್ತು ದಿನಗಳ ಕಾಲ ಉತ್ತರ ಕರ್ನಾಟಕದ ಹಲವ ಸ್ಥಳಗಳಲ್ಲಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ ಹಚ್ಚುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD ) ತಿಳಿಸಿದೆ.

ಈ ದಿನಗಳಲ್ಲಿ ಈ ಹಿಂದಿಗಿಂತಲೂ ರಣಬಿಸಿಲನ್ನು ರಾಜ್ಯದ ಜನತೆ ಎದುರಿಸಬೇಕಾಗಿ ಬರುತ್ತದೆ ಎಂದು ಎಚ್ಚರಿಸಲಾಗಿದೆ.

ವಿಜಯಪುರ, ಯಾದಗಿರಿ, ಕೊಪ್ಪಳ, ಕಲ್ಬುರ್ಗಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ಚಿತ್ರದುರ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಬೆಳಗಾವಿ, ಗದಗ ಮತ್ತು ದಾವಣಗೆರೆಗಳಲ್ಲಿ ಬಿಸಿಗಾಳಿಯನ್ನು ಜನ, ಜಾನುವಾರುಗಳನ್ನು ಕಂಗಡೆಸುವ ಸಾಧ್ಯತೆ ಇದೆ.

ಬಿಸಿಗಾಳಿ ಮತ್ತು ತಾಪಮಾನದ ಹೆಚ್ಚಳದಿಂದಾಗಿ ಆರೋಗ್ಯದ ಸಮಸ್ಯೆ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಕೆಳಕಂಡ ವಿಷಯಗಳನ್ನು ಅನುಸರಿಸಬೇಕು ಎಂದು ಕರ್ನಾಟಕ ಸರ್ಕಾರದ ಹವಾಮಾನ ಇಲಾಖೆ ತಿಳಿಸಿದೆ.

• ವಿಪರೀತ ಬಿಸಿಲು ಇರುವ ಸಂದರ್ಭದಲ್ಲಿ ಅಂದರೆ ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಮನೆಯಿಂದ ಹೊರಗೆ ಹೋಗಬೇಡಿ, ಬಿಸಿಲಿನಲ್ಲಿ ಅಡ್ಡಾಡಬೇಡಿ.
• ಕಾಲಕಾಲಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಿ
• ಹಗುರವಾದ, ಹತ್ತಿಯಿಂದ ಮಾಡಿದ ಬಟ್ಟೆಗಳನ್ನು ಧರಿಸಿ
• ಹೊರಗೆ ಹೋಗುವಾಗ ಛತ್ರಿಯನ್ನು ಬಳಸಿ, ಸೂರ್ಯನ ಕಿರಣ ನೇರವಾಗಿ ಮೈಮೇಲೆ ಬೀಳುವುದನ್ನು ಆದಷ್ಟು ತಪ್ಪಿಸಿ
• ದೇಹವನ್ನು ನಿರ್ಜಲೀಕರಣಗೊಳಿಸುವ ( dehydration ) ಆಲ್ಕೋಹಾಲ್‌, ಕಾಫಿ,‌ ಟೀ ಕಾರ್ಬೋನೇಟೆಡ್ ತಂಪು ಪಾನೀಯಗಳನ್ನು ಕುಡಿಯಬೇಡಿ
• ಸಾಧ್ಯವಾದಷ್ಟು ಬಿಸಿ ಆಹಾರವನ್ನೇ ಸೇವಿಸಿ
• ನಿಲ್ಲಿಸಿದ ವಾಹನಗಳ ಒಳಗೆ ಮಕ್ಕಳನ್ನು, ಸಾಕುಪ್ರಾಣಿಗಳನ್ನು ಬಿಡಬೇಡಿ
• ನಿಂಬೆ ನೀರು, ಮಜ್ಜಿಗೆಯಂಥ ಮನೆಯಲ್ಲಿ ತಯಾರಾದ ಪಾನೀಯವನ್ನು ಸೇವಿಸಿ.
• ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಸಾಕಷ್ಟು ನೀರನ್ನು ಕೊಡಿ
• ಮನೆಯನ್ನು ತಂಪಾಗಿರಿಸಲು ಶಟರ್ ಗಳು, ಪರದೆಗಳು, ಸನ್‌ ಶೇಡ್‌ ಗಳನ್ನು ಬಳಸಿ
• ಆಗಾಗ ತಣ್ಣೀರಿನಲ್ಲಿ ಸ್ನಾನ ಮಾಡಿ
• ಹೊರಗೆ ಹೋಗುವಾಗ ಕುಡಿಯುವ ನೀರು, ತಲೆವಸ್ತ್ರ, ಛತ್ರಿ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ. ಒಂದು ಗ್ಲೂಕೋಸ್‌ ಪ್ಯಾಕೇಟ್‌ ಇಟ್ಟುಕೊಂಡಿರಿ.

More articles

Latest article