ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಕಾಂಗ್ರೆಸ್, ದೇವೇಗೌಡರನ್ನ ಪಿಎಂ ಮಾಡಿದ್ದು ಕಾಂಗ್ರೆಸ್ : ಒಕ್ಕಲಿಗ ಒಕ್ಕೂಟದ ಅಧ್ಯಕ್ಷ ಹನುಮಂತಯ್ಯ

Most read

ಬೆಂಗಳೂರು: ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ, ಜೆಡಿಎಸ್ ನಿಂದ ಯಾವ ಸಹಕಾರವೂ ಆಗಿಲ್ಲ. ಸಮಾಜಕ್ಕೆ ಹೆಚ್ಚಿನ ಸಹಾಯ ಮಾಡಿದ್ದು ಕಾಂಗ್ರೆಸ್. ಹಾಗಾಗಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಮುದಾಯದ ಒಕ್ಕೂಟ ಮನವಿ ಮಾಡಿದೆ.

ಕ್ಯಾಪಿಟಲ್ ಹೋಟೆಲ್ ನಲ್ಲಿ ಏರ್ಪಡಿಸಲಾಗಿದ್ದ ಒಕ್ಕಲಿಗರ ಒಕ್ಕೂಟದ ಮುಖಂಡರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗ ಮಠಗಳಿಗೆ ಕಾಂಗ್ರೆಸ್ ಕೊಡುಗೆ ಅನನ್ಯ. ಹಿಂದೆ ಎಂ.ವಿ. ಕೃಷ್ಣಪ್ಪ 20 ಎಕರೆ ಭೂಮಿಯನ್ನು ಶ್ರೀಗಂಧಕಾವಲ್ ಬಳಿ ಕೊಟ್ಟಿದ್ದರು. 10 ಎಕರೆ ಜಾಗವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಜೂರು ಮಾಡಿದ್ದಾರೆ. ಹಾವನೂರು ಆಯೋಗ ವನ್ನು ರಚಿಸಿದ್ದು ದೇವರಾಜ ಅರಸು ಅವರು. ಆ ಸಂದರ್ಭದಲ್ಲಿ ಅರಸು ಅವರು ಒಕ್ಕಲಿಗರಿಗೆ 11% ಮೀಸಲಾತಿ ಕೊಟ್ಟಿದ್ದನ್ನು ಮರೆಯುವಂತಿಲ್ಲ ಎಂದು ಅವರು ಹೇಳಿದರು.

ಆದಿಚುಂಚನಗಿರಿಯಲ್ಲಿ ಮೆಡಿಕಲ್ ಕಾಲೇಜು. ಎಂಜಿನಿಯರಿಂಗ್ ಕಾಲೇಜುಗಳನ್ನು ಮಂಜೂರು ಮಾಡಿದ್ದು ಕಾಂಗ್ರೆಸ್ ಸರ್ಕಾರ. ಹೆಚ್ ಡಿ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ದೇವೇಗೌಡರನ್ನ ಪ್ರಧಾನ ಮಂತ್ರಿ ಮಾಡಿದ್ದು ಕಾಂಗ್ರೆಸ್ ಎಂದು ಹೇಳಿದ ಅವರು, ಆದಿಚುಂಚನಗಿರಿ ಮಠಕ್ಕೆ ಪರ್ಯಾಯವಾಘಿ ಮತ್ತೊಂದು ಒಕ್ಕಲಿಗ ಮಠ ಸ್ಥಾಪಿಸಿದ್ದು ಜೆಡಿಎಸ್ ಪಕ್ಷ ಎಂದು ಟೀಕಿಸಿದರು.

ದೇವೇಗೌಡರು ಒಕ್ಕಲಿಗ ನಾಯಕರನ್ನು ಪಕ್ಷದಿಂದ ಹೊರದಬ್ಬಿದರು. ಹೆಚ್.ಎನ್.ನಂಜೇಗೌಡ, ಬೈರೇಗೌಡ, ರಾಮಯ್ಯ, ಜೀವರಾಜ್ ಅಳ್ವಾ, ಅಂಬರೀಶ್ ಇವರನ್ನ ಹೊರಹಾಕಲಾಯಿತು.. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಇದೆ ವೇಳೆ ಸಮುದಾಯದ ಮುಖಂಡ ಕೃಷ್ಣೆಗೌಡ ಮಾತನಾಡಿ, ಒಕ್ಕಲಿಗರು ಸಿಎಂ, ಪ್ರಧಾನಿ ಆದರು. ಒಕ್ಕಲಿಗರನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಯಿತು. ಆದರೆ ಒಕ್ಕಲಿಗ ಸಮುದಾಯಕ್ಕೆ ಇವರ ಕೊಡುಗೆಯೇನು? ಈಗ ಮೂರು ಜನ ಅವರ ಮನೆಯವರೇ ಚುನಾವಣೆಗೆ ನಿಂತಿದ್ದಾರೆ. ಬೇರೆಯವರು ಸಮುದಾಯದಲ್ಲಿ ಇರಲಿಲ್ವಾ?. ಹಲವು ವೇಷ ಧರಿಸಿನಾಟಕ ಮಾಡ್ತಾರೆ. ಮೊದಲು ನಾವು ಅವರಿಗೆ ಸಪೋರ್ಟ್ ಮಾಡಿದ್ದೆವು. ಅವರ ಮಕ್ಕಳು,ಮೊಮ್ಮಕ್ಕಳಿಗೆ ಎಲ್ಲ ಬೇಕು. ಡಿ.ಕೆ.ಶಿವಕುಮಾರ್ ನಮ್ಮ ನಾಯಕರು ಆಗೋದು ಬೇಡವೇ ಎಂದು ಅವರು ಪ್ರಶ್ನಿಸಿದರು.

17 ವರ್ಷಗಳ ಕಾಲ ಮಂಜುನಾಥ್ ನಿರ್ದೇಶಕರನ್ನಾಗಿ ಮಾಡಲಾಗಿತ್ತು. ಆದರೆ ಜಯದೇವ ಆಸ್ಪತ್ರೆ ಕಟ್ಟಿದವರು ಪ್ರಭುದೇವ್. ಪ್ರಭುದೇವ್,ಲಿಂಗಾಯತ ಸಮುದಾಯದವರು. ಮಂಜುನಾಥ್ ಆಸ್ತಿ 150 ಕೋಟಿ. ಅವರ ಒಟ್ಟು ಸಂಬಳ ಸೇರಿ 3 ಕೋಟಿ ಆಗಲ್ಲ. ಇವರಿಗೆ ಹೇಗೆ ಬಂತು 150 ಕೋಟಿ ರುಪಾಯಿ ಮೌಲ್ಯದ ಆಸ್ತಿ. ದೇವೇಗೌಡರಿಗೆ ಇದ್ದಿದ್ದು 3 ಎಕರೆ ಜಮೀನು. ಈಗ ಅವರ ಆಸ್ತಿ ಎಷ್ಟು? ಇವರೇನು ಗದ್ದೆ ಉತ್ತಿದ್ರಾ,ಬಿತ್ತಿದ್ರಾ? ಎಂದು ಮಂಜುನಾಥ್ ಮತ್ತು ದೇವೇಗೌಡರ ವಿರುದ್ಧ ಕೃಷ್ಣೇಗೌಡ ಕಿಡಿಕಾರಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗ್ತಾರೆ. ಯಾವುದೇ ಅನುಮಾನ ಬೇಡ. ಪಕ್ಷದ ಆಂತರಿಕ ವಿಚಾರದಲ್ಲಿ ತಲೆ ಹಾಕುವುದು ಬೇಡ. ನಮ್ಮ ಸಮುದಾಯ ಅವರ ಬೆನ್ನಿಗೆ ನಿಲ್ಲಲಿದೆ. ದೇವೇಗೌಡರಿಂದ ಯಾವುದೇ ನ್ಯಾಯ ಸಿಕ್ಕಿಲ್ಲ. ಹೊಸ ನಾಯಕತ್ವ ಸೃಷ್ಟಿಯಾಗಲಿ. ಅಪ್ಪ ಮಕ್ಕಳು ಮೋಸ ಮಾಡ್ತಾನೇ ಇದ್ದಾರೆ. ಕುಮಾರಸ್ವಾಮಿ ಮಂಡ್ಯದಲ್ಲಿ ಸೋಲ್ತಾರೆ. ಮೂರು ಕಡೆಯೂ ಅವರು ಸೋತು ಆಗೋಗಿದೆ ಎಂದು ಒಕ್ಕೂಟದ ಖಜಾಂಚಿಯೂ ಆಗಿರುವ ಪ್ರೊ.ಕೃಷ್ಣೇಗೌಡ ಆಕ್ರೋಶ ಹೊರಹಾಕಿದ್ದಾರೆ.

More articles

Latest article