10 ವರ್ಷದಲ್ಲಿ ಹಿಂದುಳಿದವರ, ರೈತರ ಪರ ಯಾವ ಕೆಲಸಗಳೂ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Most read

ಚಿತ್ರದುರ್ಗ: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತದಲ್ಲಿದ್ದರೂ ಈ ದೀರ್ಘಾವಧಿಯಲ್ಲಿ ರೈತರು, ಹಿಂದುಳಿದವರ, ಮಹಿಳೆಯರ ಪರವಾಗಿ ಯಾವ ಕೆಲಸಗಳೂ ಅವರಿಂದ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ಅವರ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಸ್ವಾಗತಿಸಿ ಅವರು ಮಾತನಾಡಿದರು.

ಬರುವ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬಹುಮತದಿಂದ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸುವ ಜವಾಬ್ದಾರಿ ಕ್ಷೇತ್ರದ ಜನತೆಯದ್ದು. ಈ ಮನವಿಯನ್ನು ನಮ್ಮ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಹಾಗೂ ನಾನು ಮಾಡುತ್ತಿದ್ದೇವೆ. 2014ರಲ್ಲಿ ಬಿಜೆಪಿ ನೀಡಿದ ಯಾವ ಭರವಸೆಗಳನ್ನು ಈಡೇರಿಸಿಲ್ಲ. ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಅವರಿಂದ ಆಗಿಲ್ಲ.

ಬಿಜೆಪಿ ಸರ್ಕಾರವನ್ನು ಟೀಕೆ ಮಾಡಬೇಕು ಎಂದು ಹೇಳುತ್ತಿಲ್ಲ. ಆದ್ರೆ ಅವರ ಕೊಟ್ಟ ಮಾತು 10 ವರ್ಷವಾದ್ರು ಈಡೇರಿಸಿಲ್ಲ. ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣಾ ಸಮಯದಲ್ಲಿ ಮಾತ್ರ. ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಸಮಯದಲ್ಲಿ ಮಾತ್ರ ಬಂದಿದ್ದರು. ಪ್ರವಾಹ ಬಂದಾಗ ಬರಗಾಲ ಬಂದಾಗಲೂ ಸಹ ಮೋದಿ ಬಂದು ಕರ್ನಾಟಕ ಜನರ ಕಷ್ಟ ಕೇಳಿಲ್ಲ. ಮೋದಿನೂ ಬಂದಿಲ್ಲ ಅಮಿತ್ ಶಾ ಸಹ ಬಂದಿರಲ್ಲ. ಈಗ ಚುನಾವಣೆ ಬಂದಿದೆ ರಾಜ್ಯಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಎಂದು ಆರೋಪಿಸಿದರು.

ಸದ್ಯ ರಾಜ್ಯದಲ್ಲಿ ನರೇಂದ್ರ ಮೋದಿ ಅಲೆ ಎಲ್ಲಿಯೂ ಇಲ್ಲ. ಯಾಕೆ ಅಂದ್ರೆ ಅವರು ಹೇಳುವ ಸುಳ್ಳು ಜನರಿಗೆ ಅರ್ಥ ಆಗಿದೆ. ಕರ್ನಾಟಕದಲ್ಲಿ ಇರೋದು ಗ್ಯಾರಂಟಿ ಅಲೆ ಮಾತ್ರ. 2013 ರಿಂದ‌ 2018 ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ 165 ಭರವಸೆಗಳಲ್ಲಿ 158 ನ್ನು ಈಡೇರಿಸಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದಿದ್ದೇವೆ. ಬಿಜೆಪಿ ಪ್ರಣಾಳಿಕೆ ಕೊಟ್ಟ ಭರವಸೆ ಈಡಿರಿಸಿಲ್ಲ. 600 ಭರವಸೆಯಲ್ಲಿ 60 % ಸಹ ಈಡಿರಿಸಿಲ್ಲ. ವಿದೇಶದಲ್ಲಿ ಕಪ್ಪು ಹಣ ತಂದು 100 ದಿನಗಳಲ್ಲಿ ಎಲ್ಲರ ಅಕೌಂಟ್ ಗೆ ಹಣ ಜಮಾ ಮಾಡ್ತೀನಿ ಎಂದಿದ್ದರು. 15 ಲಕ್ಷ ಇರಲಿ 15 ಪೈಸೆ ಸಹ ಅವರು ಕೊಟ್ಟಿಲ್ಲ. 2 ಕೋಟಿ ಉದ್ಯೋಗ ಕೊಡ್ತೀನಿ ಎಂದರು ಅದನ್ನೂ ಕೊಟ್ಟಿಲ್ಲ ಎಂದರು.

More articles

Latest article