ದಾವಣಗೆರೆ: ಕ್ಷೇತ್ರದ ಅಭಿವೃದ್ಧಿಯ ಕುರಿತು ಕೇಳಿದರೆ ಸಂಸದ ಸಿದ್ದೇಶ್ವರ್ ಮೋದಿ ಫೋಟೋ ಹಿಡಿದು ತೋರಿಸುತ್ತಾರೆ. ಸಂಸದರಾಗಿ ಇವರ ಅಭಿವೃದ್ಧಿ ಕಾರ್ಯ ಶೂನ್ಯ ಎಂದು ಸಚಿವ ಮಲ್ಲಿಕಾರ್ಜುನ ಗುಡುಗಿದ್ದಾರೆ.
ನಗರದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಚಿವ ಮಲ್ಲಿಕಾರ್ಜುನ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದು, ಜನರ ಒಲವು ಕಾಂಗ್ರೆಸ್ ಪರ ಇದೆ. ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಬಡವರಿಗೆ ಮಹಿಳೆಯರಿಗೆ ಅನುಕೂಲ ಆಗಲಿದೆ. ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ನಾವು ಕೆಲಸ ಮಾಡಿದ್ದೇವೆ ವೋಟ್ ಕೊಡಿ ಅಂತಾ ಕೇಳುತ್ತಿದ್ದೇವೆ. ನಮ್ಮ ಯೋಜನೆಗಳಿಂದ ಆರ್ಥಿಕವಾಗಿ ಜನರು ಸುಧಾರಣೆ ಆಗುತ್ತಾರೆ. ನಾವು ಯಾರನ್ನು ಆಪರೇಷನ್ ಮಾಡಿ ಪಕ್ಷಕ್ಕೆ ಕರೆದುಕೊಂಡಿಲ್ಲ ಎಂದಿದ್ದಾರೆ.
ಅವರ ದರ್ಪ ದೌಲತ್ತು ಬಿಡಬೇಕು. ಹಣದಿಂದ ಶಾಸಕರನ್ನು ಖರೀದಿ ಮಾಡಲು ಹೋದ್ರೆ ಇದೆ ತರಹ ಆಗೋದು. ಅವರಿಗೆ ಗೌರವ ಮರ್ಯಾದೆ ಇಲ್ಲದೆ ಬೇಸತ್ತು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅಲ್ಲಿ ಹಿರಿಯ ಮುಖಂಡರಿಗೂ ಅಸಮಾಧಾನ ಇದೆ. ಯಡಿಯೂರಪ್ಪ ಬಂದು ರಾಜಿ ಸಂಧಾನ ಮಾಡಿದ್ರು. ಜಾತಿಗೆ ಒಬ್ಬರಂತೆ ಮುಖಂಡರನ್ನು ಕರೆಸುತ್ತಿದ್ದಾರೆ. ವೈಯಕ್ತಿಕವಾಗಿ ಬೇಜಾರಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ.
ವೈಯಕ್ತಿಕವಾಗಿ ಈ ಮನುಷ್ಯ ಚೊಂಬೇ. ನನ್ನ ಹೆಸರಿನಲ್ಲೂ ಹಿಂದೆ ನಾಮಪತ್ರ ಹಾಕಿಸಿದ್ದರು. ಯಾರೊ ವೈಯಕ್ತಿಕವಾಗಿ ನಾಮ ಪತ್ರ ಸಲ್ಲಿಸಿರಬಹುದು. ಕರೋನ ಸಮಯದಲ್ಲಿ ಜನರ ಪ್ರಾಣ ತೆಗೆದಿದ್ದಾರೆ ಮನುಷ್ಯತ್ವ ಇದೆಯಾ. ಹಿಂದೆ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಮಂತ್ರಿಗಳು ಆಗಲು ಬಿಡಲಿಲ್ಲ. ದುಡ್ಡಿನ ಭ್ರಮೆಯಲ್ಲಿ ಗೆಲ್ಲುತ್ತೆವೆ ಎಂದು ಕೊಂಡಿದ್ದಾರೆ ಜನರು ತೀರ್ಮಾನ ಮಾಡುತ್ತಾರೆ ಎಂದು ಸಂಸದ ಸಿದ್ದೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.