ಹಿಂದೆ ಜೆಡಿಎಸ್ ನಾಯಕರು ಬಿಜೆಪಿಗೆ ಕೇಳಿದ್ದನ್ನೇ ನಾವು ಕೇಳುತ್ತಿದ್ದೇವೆ: ಡಿಕೆಶಿ

Most read

ಬೆಂಗಳೂರು: ಹಿಂದೆ ಕುಮಾರಸ್ವಾಮಿ, ದೇವೇಗೌಡರು ಬಿಜೆಪಿಯವರಿಗೆ ಕೇಳಿದ ಪ್ರಶ್ನೆಗಳನ್ನೇ ನಾವು ಇಂದು ಮೋದಿಗೆ ಕೇಳುತ್ತಿದ್ದೇವಷ್ಟೇ. ಈಗಲೂ ಗೌರವಾನ್ವಿತ ದೇವೇಗೌಡರು ಖಾಲಿ ಚೊಂಬಿನ ಪತ್ರಿಕಾ ಜಾಹಿರಾತು ತೋರಿಸಿ ಮೋದಿಯವರಿಗೆ ಇದನ್ನೇ ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಜೆಡಿಎಸ್ ನಾಯಕರನ್ನು ಕುಟುಕಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಅವರು ಸಾರ್ವಜನಿಕವಾಗಿ ಏನು ಬೇಕಾದರೂ ಹೇಳಲಿ ಆದರೆ ಹಿಂದೆ ಇದೇ ಜೆಡಿಎಸ್ ನಾಯಕರು ರಾಜ್ಯಕ್ಕೆ ಮೋದಿಯಿಂದ ಅನ್ಯಾಯ ಆಗಿದೆ ಎಂದು ಕೇಳಿದ್ದಾರಲ್ಲ. ಅದನ್ನೇ ನಾವು ಕೇಳಿದ್ದೇವೆ.

ಪ್ರಜ್ಞಾವಂತ ನಾಡಿನ ಜನ ಎಲ್ಲದನ್ನೂ ನೋಡುತ್ತಿದ್ದಾರೆ. ಈ ಚುನಾವಣೆಯಲ್ಲಿ ಅವರೇ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ರಾಜ್ಯಕ್ಕೆ ಕೊಟ್ಟ ಚೊಂಬಿನಲ್ಲಿ ತಾವು ಹೇಳಿದ 15 ಲಕ್ಷ ರೂ. ಬಂದಿದೆಯಾ ಎಂದು ಸಿದ್ದರಾಮಯ್ಯ, ನಾನು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡ್ತಾ ಇದ್ದೇವೆ. ನೌಕರಿ ಕೊಡುತ್ತೇವೆ ಎಂದು ಯುವಜನತೆಗೆ ಚೊಂಬು ತಾನೆ ಇವರು ಕೊಟ್ಟಿರೋದು. ಈಗ ಕರ್ನಾಟಕಕ್ಕೆ ಖಾಲಿ ಚೊಂಬೇ ಅಲ್ಲವೇ ಇವರು ಕೊಟ್ಟಿರುವುದು ಎಂದು ಕೇಂದ್ರ ಬಿಜೆಪಿ ವಿರುದ್ಧ ಗುಡುಗಿದರು.

ಮುಸ್ಲಿಂ ಬಾಂಧವರು ಓಡಿ ಹೋಗಬೇಕು ಎಂದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟ ಈ ನಾಡು. ಇವರ ಕೈಲಿ ಸಂವಿಧಾನ ಬದಲಾವಣೆ ಮಾಡೋಕೆ ಆಗುತ್ತಾ. ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕಿದೆ. ಹಾಗಂತ ಕ್ರಿಮಿನಲ್ ಗಳಿಗೆ ಅಂಥಹ ಪ್ರಕರಣಗಳಿಗೆ ನಾವು ರಕ್ಷಣೆ ಕೊಡಲ್ಲ. ಯಾರಿಗೂ ನಾವು ಅಂತಹ ಘಟನೆಗಳಿಗೆ ಅವಕಾಶ ಕೊಡಲ್ಲ. ರಾಜ್ಯದಲ್ಲಿ ಶಾಂತಿ ಇದೆ ಎಂದರು.

ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದ್ದಾಗ ಏನೂ ಮಾಡಲು ಆಗಿಲ್ಲ ಪಾಪ. ಈಗಲೂ ದೊಡ್ಡ ಇಂಜಿನ್ ಫೇಲ್ ಆಗುತ್ತದೆ ಎಂದಿದ್ದಾರೆ.

More articles

Latest article