ರಾಜ್ಯಾದ್ಯಂತ ಇಂದು ಭಾರೀ ಮಳೆ ಸುರಿಯಲಿದೆ, ಎಚ್ಚರ: ಬೆಂಗಳೂರಿಗರೇ ಭರ್ಜರಿ ಮಳೆಗೆ ಸಿದ್ಧರಾಗಿ

Most read

ಬೆಂಗಳೂರು: ಇಂದು ರಾಜ್ಯದ ಬಹುತೇಕ ಭಾಗಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆ ಇದ್ದು ಎಚ್ಚರ ವಹಿಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ (KSNDMC) ಸೂಚನೆ ನೀಡಿದೆ.

ಮಳೆಗಾಗಿ ಶಬರಿಯಂತೆ ಕಾಯುತ್ತಿರುವ ಬೆಂಗಳೂರಿಗೂ ಮಳೆ ಮಾರುತಗಳು ಪ್ರವೇಶಿಸಿದ್ದು, ಈಗಾಗಲೇ ವೈಟ್ ಫೀಲ್ಡ್, ವರ್ತೂರು, ಸರ್ಜಾಪುರ ರಸ್ತೆ, ಮಾರತಹಳ್ಳಿ ಸುತ್ತಮುತ್ತ ತುಂತುರು ಮಳೆ ಆರಂಭಗೊಂಡಿದೆ. ಇಂದು ಸಂಜೆ ಅಥವಾ ರಾತ್ರಿ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.

KSNDMC ಈಗಾಗಲೇ ಆರೆಂಜ್ ಅಲರ್ಟ್ ಹೊರಡಿಸಿದ್ದು, ಗುಡುಗು-ಸಿಡಿಲು ಇರುವೆಡೆ ಜನರು ಆದಷ್ಟು ಮನೆಗಳಲ್ಲಿ ಇರುವುದು ಒಳ್ಳೆಯದು. ನಿನ್ನೆಯಷ್ಟೇ ಸಿಡಿಲಿನ ಹೊಡೆತಕ್ಕೆ ಬೀದರ ಜಿಲ್ಲೆಯಲ್ಲಿ ಇಬ್ಬರ ದುರ್ಮರಣವಾಗಿದ್ದು, ಮಳೆ ಬಂದಾಗ ಸಿಡಿಲಿನಿಂದ ರಕ್ಷಣೆ ಪಡೆಯಲು ಸುರಕ್ಷಿತ ಸ್ಥಳಗಳನ್ನು ತಲುಪಿಕೊಳ್ಳುವುದು ಮುಖ್ಯವಾಗಿರುತ್ತದೆ.

ರಾಜ್ಯದ ಕರಾವಳಿ ಭಾಗದಲ್ಲಿ ಗುಡುಗು ಮಿಂಚು ಸಮೇತ ಮಳೆ ಸುರಿಯಲಿದೆ ಎಂದು KSNDM ಎಲ್ಲೋ ಅಲರ್ಟ್ ಹೊರಡಿಸಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಬಿರುಗಾಳಿಯೂ ಸಹ ಇರಲಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹೊರಡಿಸಲಾಗಿದೆ.

OrangeAlert #thunderstorms #lightning #warning #Karnataka KarnatakaRains #PreMonsoon

More articles

Latest article