ಬೆಂಗಳೂರು : ನೇಹಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿರುವುದಕ್ಕೆ ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಈ ಸಂಬಂಧ ಗೃಹ ಮಂತ್ರಿಗಳು ಹುಬ್ಬಳ್ಳಿಗೆ ಭೇಟಿ ನೀಡಲಿದ್ದಾರೆ. ಕಾನೂನಿನ ಪ್ರಕಾರ ಇಂತಹ ಅಪರಾಧಿಗಳಿಗೆ ಏನು ಶಿಕ್ಷೆ ಆಗಬೇಕೋ ಅದನ್ನು ಕಾನೂನು ವ್ಯವಸ್ಥೆ ನೀಡಲಿದೆ. ಯಾವುದೇ ಕಾರಣಕ್ಕೂ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ದೇವೇಗೌಡರ ಕನಕಪುರ ಪ್ರಚಾರದ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಕನಕಪುರದಲ್ಲಿ ದೇವೇಗೌಡ್ರು ಲೀಡ್ ತೆಗೆದುಕೊಳ್ಳಲಿ ಬೇಡ ಅಂದೋರ್ಯಾರು, ಇಲ್ಲಿ ಲೀಡ್ ತಗೊಂಡು ಗೆಲ್ಲಬೇಡ ಅಂದೋರ್ಯಾರು, ಎಲ್ಲಾ 28 ಸೀಟುಗಳನ್ನು ಮೋದಿಯವರಿಗೆ ಅರ್ಪಿಸಿಬಿಡಲಿ ಬಹಳ ಸಂತೋಷ ಎಂದು ವ್ಯಂಗ್ಯವಾಗಿ ಉತ್ತರಿಸಿದರು.
ಡಿಸೆಂಬರ್ ನಲ್ಲಿ ಸರ್ಕಾರ ಬೀಳುತ್ತೆ ಎನ್ನುವ ಪ್ರತಿಪಕ್ಷಗಳ ಹೇಳಿಕೆಗಳ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಧ್ಯಕ್ಕೆ ಅವರ ಪಕ್ಷದಲ್ಲಿ ಏನ್ ಆಗುತ್ತೆ ಅಂತಾ ನೋಡಿ. ಎಲೆಕ್ಷನ್ ಆದ್ಮೇಲೆ ದಳ ಹಾಗೂ ಬಿಜೆಪಿ ಏನಾಗುತ್ತೆ ಅಂತಾ ಗೊತ್ತಾಗುತ್ತೆ. ಸದ್ಯಕ್ಕೆ ಬಿಜೆಪಿ ದಳ ಏನಾಗುತ್ತೆ ಎಲೆಕ್ಷನ್ ಆದ ಮೇಲೆ ಅವರೇ ಉತ್ತರ ಕೊಡ್ತಾರೆ. ಅದಕ್ಕೆ ನಾನೇನು ಉತ್ತರ ಕೊಡಲ್ಲ ಎಂದಿದ್ದಾರೆ.
ಡಿಕೆಶಿ ಅವರಿಗೆ ಪ್ರತಿದಿನ ೫೦ ಕೋಟಿ ಮಾಡಿಲ್ಲ ಅಂದ್ರೆ ನಿದ್ರೆ ಬರಲ್ಲ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹೌದು ನಾನು ದಿನ ನಿದ್ರೆ ಮಾಡ್ತಾ ಇಲ್ಲ. ಅವರೂ ಮಾಡ್ತಾ ಇಲ್ಲ. ತಮಗೆ ಈ ಅವಕಾಶ ಸಿಕ್ಕಿಲ್ಲ ಎಂದು ಅವರಿಗೆ ನಿದ್ದೆ ಮಾಡೋಕೆ ಆಗ್ತಾ ಇಲ್ಲ ಎಂದಿದ್ದಾರೆ.
ಮುಂಬೈಯಲ್ಲಿ ಬರೀ ನಾಟಕ ಮಾಡಿದ್ರು ಒಬ್ಬ ಶಾಸಕರನ್ನ ಕರೆತಂದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರಉ, ಬಂಡೆ ತರಹ ನಿಂತುಕೊಂಡೆ ಅಲ್ವಾ. ಅಷ್ಟಾದರೂ ಒಪ್ಪಿಕೊಳ್ತಾರೆ ಅಲ್ವಾ I’m so happy. ಜಿ.ಟಿ.ದೇವೇಗೌಡ್ರು, ಬಾಲಕೃಷ್ಷ, ಶಿವಲಿಂಗೇಗೌಡ್ರು ಹೇಳಬೇಕು ಎಂದರು.
ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಪರ ವಾತವರಣ ಎಂಬ ವಿಚಾರವಾಗಿ ಮಾತನಾಡಿ, ಒಳ್ಳೆದು ಆಗಲಿ ಲೀಡ್ ತೆಗೆದುಕೊಳ್ಳಲಿ. ಯಾರು ಬೇಡ ಅಂತಾ ಹೇಳಿದವರು. ಗೆಲ್ಲಬೇಡ ಅಂತಾ ಹೇಳಿದವರು ಯಾರು. ಎಲ್ಲಾ ೨೮ ಕ್ಷೇತ್ರವನ್ನ ಗೆದ್ದು ಮೋದಿಗೆ ಅರ್ಪಿಸಲಿ ಎಂದು ಉತ್ತರಿಸಿದ್ದಾರೆ.