ಬೆಂಗಳೂರು: ರಾಜ್ಯ ಮದ್ಯ ಮಾರಾಟಗಾರರ ಸಂಘದ ಮಾಹಿತಿ ಪ್ರಕಾರ ಡಿಸೆಂಬರ್ 28ರಿಂದ ಡಿಸೆಂಬರ್ 31ರ ಮಧ್ಯಾಹ್ನದವರೆಗೆ 713.58 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಈ ನಾಲ್ಕು ದಿನಗಳಲ್ಲಿ 6.97 ಲಕ್ಷ ಕಾರ್ಟನ್ ಬಾಕ್ಸ್ ಗಳಷ್ಟು ಬಿಯರ್ ಮತ್ತು ಐಎಂಎಲ್ ನ 11.05 ಲಕ್ಷ
ಕಾರ್ಟನ್ ಬಾಕ್ಸ್ ಸೇರಿ 18.3 ಲಕ್ಷ ಕಾರ್ಟನ್ ಬಾಕ್ಸ್ ಗಳಷ್ಟು ಬಿಯರ್ ಮಾರಾಟವಾಗಿದೆ.
ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚುತ್ತಲೇ ಇದೆ. 2024ರ ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ ಶೇ.4.63 ರಷ್ಟು ಮದ್ಯ ಮಾರಾಟ ಹೆಚ್ಚಳ ಕಂಡಿದೆ. ಆದರೆ ಜುಲೈ ತಿಂಗಳಲ್ಲಿ ಮದ್ಯ ಮಾರಾಟ ಶೇ.9.86 ರಷ್ಟು ಮತ್ತು ಡಿಸೆಂಬರ್ ನಲ್ಲಿ ಶೇ.11.78ರಷ್ಟು ಕುಸಿತ ಕಂಡಿದೆ. ಮೇ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಶೇ.27ರಷ್ಟು ಹೆಚ್ಚಳವಾಗಿದೆ. 2023ರಲ್ಲಿ ವರ್ಷದ ಕೊನೆ ದಿನ ಭಾನುವಾರ ಬಂದಿದ್ದರೆ 2024 ರಲ್ಲಿ ವಾರದ ದಿನ ಬಂದಿರುವುದೇ ಕಾರಣ ಎನ್ನಲಾಗುತ್ತದೆ. ಅಬಕಾರಿ ಇಲಾಖೆ 2024-25ರ ಆರ್ಥಿಕ ವರ್ಷದ ಶೇ.69.13 ರಷ್ಟು ಆದಾಯ ಏಪ್ರಿಲ್ -ಡಿಸೆಂಬರ್ ಅವಧಿಯಲ್ಲಿ ಗಳಿಸಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಶೇ.73.78 ರಷ್ಟು ಆದಾಯ ಗಳಿಸಿತ್ತು. ಕಳೆದ ವರ್ಷ ಅಬಕಾರಿ ಇಲಾಖೆ 34,628,98 ಕೋಟಿ ಆದಾಯ ಗಳಿಸಿತ್ತು. ಇಲಾಖೆಯು ಪ್ರಸಕ್ತ ಸಾಲಿ ಆರ್ಥಿಕ ವರ್ಷದಲ್ಲಿ 38,525 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಕಳೆದ ವರ್ಷ ಇಲಾಖೆಯು 34,628.98 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
.