ಕೊಯಮತ್ತೂರಿನ ಜಗ್ಗಿ ವಾಸುದೇವ್ ಒಡೆತನದ ಇಶಾ ಫೌಂಡೇಶನ್‌ನಲ್ಲಿ 2016 ರಿಂದ ಆರು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಮಿಳುನಾಡು ಪೊಲೀಸರು ಗುರುವಾರ ಮದ್ರಾಸ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ನ್ಯಾಯಮೂರ್ತಿಗಳಾದ ಎಂಎಸ್ ರಮೇಶ್ ಮತ್ತು ಸುಂದರ್ ಮೋಹನ್ ಅವರ ಪೀಠದ ಮುಂದೆ ಪೊಲೀಸರು ಮೌಖಿಕವಾಗಿ ಮಾಹಿತಿ ಸಲ್ಲಿಸಿದ್ದು, ನಾಪತ್ತೆ ಪ್ರಕರಣಗಳ ತನಿಖೆ ಈಗಾಗಲೇ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಪೀಠವು ಸಲ್ಲಿಕೆಯಾದ ಮಾಹಿತಿಯನ್ನು ದಾಖಲಿಸಿಕೊಂಡು. ಮುಂದಿನ ವಿಚಾರಣೆಯ ದಿನಾಂಕವಾದ ಏಪ್ರಿಲ್ 18 ರೊಳಗೆ ತನಿಖೆಯ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಗಣೇಶನ್ (46) ಎಂಬಾತ ಇಶಾ ಫೌಂಡೇಶನ್ ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಮಾರ್ಚ್‌ನಲ್ಲಿ ಇಶಾ ಫೌಂಡೇಶನ್‌ನಿಂದ ಅನುಮಾನಸ್ಪದವಾಗಿ ನಾಪತ್ತೆಯಾದ್ದ. ತಿರುನಲ್ವೇಲಿ ಜಿಲ್ಲೆಯ ತಿರುಮಲೈ ಎಂಬಾತ ತನ್ನ ಸಹೋದರ ಗಣೇಶನನ್ನು ಹಾಜರುಪಡಿಸುವಂತೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಈಗ ನ್ಯಾಯಾಲಯ ನಡೆಸುತ್ತಿದೆ.
ಗಣೇಶನ್ (46) ಕಳೆದ ವರ್ಷ ಮಾರ್ಚ್‌ನಲ್ಲಿ ಇಶಾ ಫೌಂಡೇಶನ್‌ನಿಂದ ನಾಪತ್ತೆಯಾದ ನಂತರ ಆತನ ಸೋದರ ತಿರುಮಲೈ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವು ದಿನಗಳಿಂದ ತನ್ನ ಸಹೋದರನೊಂದಿಗೆ ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಶಾ ಫೌಂಡೇಶನ್ ಅನ್ನು ಸಂಪರ್ಕಿಸಿದ್ದರು. ಆ ಸಮಯದಲ್ಲಿ ಫೌಂಡೇಶನ್, ಆತ ಎರಡು ದಿನಗಳಿಂದ ಕೆಲಸಕ್ಕೆ ಬಂದಿಲ್ಲ ಎಂಬ ಮಾಹಿತಯನ್ನು ನೀಡಿದ್ದಾರೆ. ಇದಾದ ನಂತರ, ತಿರುಮಲೈ ಪೊಲೀಸ್ ದೂರು ದಾಖಲಿಸಿದ್ದರು. ನಂತರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ತನ್ನ ಸಹೋದರನನ್ನು ಹಾಜರುಪಡಿಸುವಂತೆ ಕೋರಿದ್ದರು.