Sunday, September 8, 2024

ಸಂಸದ ಅನಂತಕುಮಾರ್‌ ಹೆಗಡೆ ಸೇರಿದಂತೆ ರಾಜ್ಯದ 6 ಬಿಜೆಪಿ ಸಂಸದರ ಆಸಿ ಮೌಲ್ಯ ದುಪ್ಪಟ್ಟು ಜಿಗಿತ

Most read

ಸಂಸದ ಅನಂತಕುಮಾರ್‌ ಹೆಗಡೆ ಹಾಗು ಸಂಸದ ಪ್ರಹ್ಲಾದ್‌ ಜೋಶಿ ಸೇರಿದಂತೆ ರಾಜ್ಯದ ಆರು ಸಂಸದರ ಆಸ್ತಿ ಮೌಲ್ಯ 2004 ರಿಂದ 2019 ರವರೆಗೂ ದುಪ್ಪಟ್ಟು ಜಾಸ್ತಿ ಆಗಿದೆ ಎಂದು ಖಾಸಗಿ ಚುನಾವಣಾ ನಿಗಾ ಸಂಸ್ಥೆಯೊಂದು ವರದಿ ಮಾಡಿದೆ.

ರಾಜ್ಯದ ಸಂಸದರಾದ ರಮೇಶ್‌ ಜಿಗಜಿಣಗಿ, ಸಂಸದ ಪ್ರಹ್ಲಾದ್‌ ಜೋಶಿ, ಸಂಸದ ಡಿ ವಿ ಸದಾನಂದಗೌಡ, ಸಂಸದ ಅನಂತಕುಮಾರ್‌ ಹೆಗಡೆ, ಸಂಸದ ಜಿ ಎಂ ಸಿದ್ದೇಶ್ವರ ಮತ್ತು ಪಿ.ಸಿ.ಗದ್ದಿಗೌಡರ. ಇವರೆಲ್ಲರೂ ಬಿಜೆಪಿಯ ಸಂಸದರಾಗಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಪ್ರಕಾರ 2004 ಎಲ್ಲಿ 77 ಲಕ್ಷದಷ್ಟು ಆಸ್ತಿ ಮೌಲ್ಯ ಹೊಂದಿದ್ದ ಪ್ರಹ್ಲಾದ್‌ ಜೋಶಿ ಅವರ 2019 ರಲ್ಲಿ 11.13 ಕೋಟಿ ಆಸ್ತಿ ಮೌಲ್ಯ ಅಂದರೆ ಶೇ 1.33 ಹೆಚ್ಚಾಗಿದೆ ಎಂದು ಹೇಳಿದೆ.

ಈ ಸಂಸದರ ಪೈಕಿ ಕರ್ನಾಟಕದ ಇನ್ನೂಳಿದ ಐದು ಬಿಜೆಪಿ ಸಂಸದರಾದ, ರಮೇಶ್ ಜಿಗಜಿಣಗಿಯವರ ಆಸ್ತಿ ಮೌಲ್ಯ  2004ರಲ್ಲಿ 54.80 ಲಕ್ಷದಷ್ಟಿದ್ದ ಆಸ್ತಿ ಮೌಲ್ಯ 2019 ಕ್ಕೆ 50.41 ಕೋಟಿ ಅಂದರೆ ಶೇ. 9,098ರಷ್ಟು ಏರಿಕೆಯಾಗಿದೆ. ಡಿ ವಿ ಸದಾನಂದಗೌಡ ಅವರ ಆಸ್ತಿಮೌಲ್ಯವು 2004 ರಲ್ಲಿ 46.30 ಲಕ್ಷದಷ್ಟಿದ್ದು, 2019 ರಲ್ಲಿ 20.93 ಕೋಟಿಯಷ್ಟು ಹೆಚ್ಚವರಿಯಾಗಿದೆ.

ಸಂಸದ ಅನಂತಕುಮಾರ್‌ ಹೆಗಡೆ 2004 ರಲ್ಲಿ 12.06 ಲಕ್ಷ ಇದ್ದ ಆಸ್ತಿ ಮೌಲ್ಯ 2019 ಕ್ಕೆ 8.47 ಕೋಟಿ ಆಗಿದೆ. ದಾವಣಗೆರೆಯ ಸಂಸದರಾಗಿರುವ ಜಿ ಎಂ ಸಿದ್ದೇಶ್ವರ ಅವರ ಆಸ್ತಿ ಮೌಲ್ಯವು 2004 ರಲ್ಲಿ 5.02 ಕೋಟಿ ಇದ್ದು, 2019ರ ವೇಳಗೆ 38.01 ಕೋಟಿ ಹೆಚ್ಚಾಗಿದೆ. ಬಾಗಲಕೋಟೆಯ ಸಂಸದರಾಗಿರುವ ಪಿ ಸಿ ಗದ್ದಿಗೌಡರ ಆಸ್ತಿ ಮೌಲ್ಯವು 2004 ರಲ್ಲಿ 53.75 ಲಕ್ಷ ಕೋಟಿ ಇದ್ದದ್ದು, 2019 ರ ವೇಳೆಗೆ 4.39 ಕೋಟಿ ಆಗಿದೆ.

ಇವರುಗಳು ಚುನಾವಣಾ ಆಯೋಗದೆದುರು ಸಲ್ಲಿಸಿರುವ ಪ್ರಮಾಣ ಪತ್ರಗಳ ವಿಶ್ಲೇಷಣೆಯಿಂದ ಈ ಮಾಹಿತಿ ತಿಳಿದಿದೆ.

More articles

Latest article