ಬೆಂಗಳೂರು : ಟೆಕ್ಕಿಯೊಬ್ಬ ಕೇವಲ ನಾಲ್ಕು ಲಕ್ಷ ರೂಪಾಯಿಗಾಗಿ ತನ್ನ ಹೆತ್ತವರನ್ನೇ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನ ಹೆಚ್ಎಎಲ್ನ ವಿಜ್ಞಾನ ನಗರದಲ್ಲಿ ನಿವೃತ್ತ ನೇವಿ ಅಧಿಕಾರಿ ನವೀನ್ ಚಂದ್ರ ಭಟ್ ಹಾಗೂ ದಂತ ವೈದ್ಯೆ ಡಾ. ಶ್ಯಾಮಲಾ ಜೀವ ತೆಗೆದಿದ್ದಾನೆ. ಆರೋಪಿ ರೋಹನ್ ಭಟ್ನನ್ನು ಪೊಲೀಸರು ನಿನ್ನೆಯೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉದ್ಯೋಗವಿಲ್ಲದೇ ಪರದಾಡುತ್ತಿದ್ದ, ಇದರಿಂದ ಪೋಷಕರು ಹಾಗೂ ರೋಹನ್ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಅಲ್ಲದೇ, ರೋಹನ್ ಪೋಷಕರಿಂದ ದೂರವಿದ್ದು ಪ್ರತೇಕವಾಗಿ ವಾಸಿಸುತ್ತಿದ್ದನು.
ತನ್ನ ಖರ್ಚಿಗೆಂದು ಪೋಷಕರ ಬಳಿ 4 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಪೋಷಕರು ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ರೋಹನ್, ತಂದೆಯ ಪಕ್ಕೆಲುಬಿಗೆ ಮತ್ತು ತಾಯಿಯ ಕತ್ತಿನ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ.
ಪೊಲೀಸ್ ವಿಚಾರಣೆ ವೇಳೆ ಬಂಧಿತ ಆರೋಪಿ ರೋಹನ್ ಭಟ್, ಮಾನಸಿಕ ಅಸ್ವಸ್ಥನಂತೆ ವಿಚಿತ್ರವಾಗಿ ಉತ್ತರ ನೀಡಿದ್ದಾನೆ. ಆತ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುವಂತಹ ಹೇಳಿಕೆಗಳನ್ನು ನೀಡಿದ್ದಾನೆ ಎನ್ನಲಾಗಿದೆ.
ದಂಪತಿಗಳಿಗೆ ಮತ್ತೋರ್ವ ಪುತ್ರಿಯಿದ್ದು, ಆಕೆ ಅಮೆಕಾದಲ್ಲಿ ನೆಲೆಸಿದ್ದು, ಆಕೆ ಮರಳಿದ ನಂತರವೇ ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
4 ಲಕ್ಷ ರೂಪಾಯಿಗೆ ಹೆತ್ತವರನ್ನೇ ಸಾಯಿಸಿದ ಮಗ
ಉದ್ಯೋಗವಿಲ್ಲದೇ ಪರಿತಪಿಸಿದ್ದ ರೋಹನ್ ಭಟ್