ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಮೂರನೆ ಹಂತದ ಮತದಾನದ ದಿನವಾದ ಇಂದು ರಾಜ್ಯದಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.41.59 ಮತದಾನ ರಷ್ಟು ಮತದಾನವಾಗಿದೆ.
ಶಿವಮೊಗ್ಗದಲ್ಲಿ ಅತಿಹೆಚ್ಚು ಪ್ರಮಾಣದ ಮತದಾನವಾಗಿದ್ದು, ಮಧ್ಯಾಹ್ನ 1 ಗಂಟೆಯವರೆಗೆ ಶೇ. 44.98 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿದೆ ಎಂಬ ವಿವರ ಈ ಕೆಳಕಂಡಂತಿದೆ.
• ಬಾಗಲಕೋಟೆ – 41.91%
• ಬೆಳಗಾವಿ -40.57%
• ಬಳ್ಳಾರಿ – 44.36%
• ಬೀದರ್ – 37.97%
• ವಿಜಯಪುರ – 39.87%
• ಚಿಕ್ಕೋಡಿ – 45.69%
• ದಾವಣಗೆರೆ – 42.32%
• ಧಾರವಾಡ – 40.61%
• ಕಲಬುರಗಿ – 37.48%
• ಹಾವೇರಿ -43.26%
• ಕೊಪ್ಪಳ -42.74%
• ರಾಯಚೂರು -38.06%
• ಶಿವಮೊಗ್ಗ -44.98%
• ಉತ್ತರ ಕನ್ನಡ -44.22%
ದೇಶದ ಹನ್ನೊಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 93 ಕ್ಷೇತ್ರಗಳಿಗೆ ಇಂದು ಬೆಳಿಗ್ಗೆಯಿಂದ ಮತದಾನ ನಡೆಯುತ್ತಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಹದಿನಾಲ್ಕು ಕ್ಷೇತ್ರಗಳಲ್ಲಿ ನಡೆದಿತ್ತು. ಈಗ ಇನ್ನುಳಿದ ಹದಿನಾಲ್ಕು ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯುತ್ತಿದೆ.
ಚುನಾವಣೆ ವೇಳಾಪಟ್ಟಿ ಹೀಗಿದೆ:
ಹಂತ 1: ಏಪ್ರಿಲ್ 19 (ಚುನಾವಣೆ ನಡೆದಿದೆ)
ಹಂತ 2: ಏಪ್ರಿಲ್ 26 ( ಚುನಾವಣೆ ನಡೆದಿದೆ)
ಹಂತ 3: ಮೇ 7 (ಚುನಾವಣೆ ನಡೆಯುತ್ತಿದೆ)
ಹಂತ 4: ಮೇ 13 (ಚುನಾವಣೆ ನಡೆಯಬೇಕಿದೆ)
ಹಂತ 5: ಮೇ 20 (ಚುನಾವಣೆ ನಡೆಯಬೇಕಿದೆ)
ಹಂತ 6: ಮೇ 25 (ಚುನಾವಣೆ ನಡೆಯಬೇಕಿದೆ)
ಹಂತ 7: ಜೂನ್ 1(ಚುನಾವಣೆ ನಡೆಯಬೇಕಿದೆ)
ಜೂನ್ 4 : ಎಲ್ಲ 543 ಸ್ಥಾನಗಳ ಮತ ಎಣಿಕೆ