ಧರ್ಮಸ್ಥಳ ಲಾಡ್ಜ್‌ ಗಳಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಕುರಿತು ತನಿಖೆ ನಡೆಸಲು ಎಸ್ಐಟಿಗೆ ಮಹೇಶ್ ಶೆಟ್ಟಿ ತಿಮರೋಡಿ ದೂರು

ಮಂಗಳೂರು: ಧರ್ಮಸ್ಥಳದ ವಿವಿಧ ಲಾಡ್ಜ್‌ ಗಳಲ್ಲಿ 2006ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳನ್ನು ಕುರಿತು ತನಿಖೆ ನಡೆಸುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ತಂಡಕ್ಕೆ (ಎಸ್‌ ಐಟಿ) ದೂರು ಸಲ್ಲಿಸಿದ್ದಾರೆ.
ಕಳೆದ ರಾತ್ರಿ ಅವರು ಬೆಳ್ತಂಗಡಿಯ ಎಸ್‌ ಐಟಿ ಕಚೇರಿಗೆ ಆಗಮಿಸಿ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಅಸಹಜ ಸಾವು ಪ್ರಕರಣಗಳು ಕೇವಲ ಅಸಹಜ ಸಾವುಗಳಲ್ಲ. ಬದಲಾಗಿ ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆಗಳಿವೆ. ಆದ್ದರಿಂದ ಈ ನಾಲ್ಕೂ ಪ್ರಕಣಗಳನ್ನು ಕುರಿತು ತನೀಕೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಪಡಿಸಿದ್ದಾರೆ.

ದೂರಿನ ಜತಗೆ ತಿಮರೋಡಿ ಅವರು ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಪಡೆದಿದ್ದ ದಾಖಲೆಗಳನ್ನು ನೀಡಿದ್ದಾರೆ.

ಮೂರು ವಸತಿ ಗೃಹಗಳಲ್ಲಿ ನಡೆದ ನಾಲ್ಕು ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ. ಈ ಪ್ರಕರಣಗಳಲ್ಲಿ ಪತ್ತೆಯಾಗದ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ಆತುರಾತುರವಾಗಿ ಸುಟ್ಟು ಹಾಕಲಾಗಿದೆ. ಈ ಬಗ್ಗೆ ಕೇವಲ ಅಸಹಜ ಸಾವು ಪ್ರಕರಣ ಎಂದು ಮಾತ್ರ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ಕುರಿತು ಹತ್ಯೆ ಅಥವಾ ಆತ್ಮಹತ್ಯೆಯ ಅನುಮಾನಗಳಿದ್ದರೂ ಎಫ್.ಐ‌.ಆರ್ ದಾಖಲಿಸದಿರುವುದು ಹಲವು ಶಂಕೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

More articles

Latest article

Most read