ಬಾಗಲಕೋಟೆಯಲ್ಲಿ ಶೇ.27.82ರಷ್ಟು ಮತದಾನ

ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ  ಉಪ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಶೇ.27.82ರಷ್ಟು ಮತದಾನ ನಡೆದಿದೆ. ಬಿರು ಬಿಸಿಲಿನಲ್ಲೂ ಜನ ಮತದಾನ ಮಾಡುತ್ತಿದ್ದಾರೆ. 

ಅಮೀನಗಡದಲ್ಲಿ ಮತದಾನದ ವೇಳೆ ಅವ್ಯವಸ್ಥೆ ಆರೋಪ ಕೇಳಿಬಂದಿದ್ದು,  ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಮತದಾರರಿಗೆ ತೊಂದರೆ ಆಗಿದೆ.  ಸಾಲಿನಲ್ಲಿ ನಿಂತಿದ್ದ ವೇಳೆ ಅಸ್ವಸ್ಥಗೊಂಡು   ವೃದ್ಧೆ ಕುಸಿದು ಬಿದ್ದರು. ತಕ್ಷಣ ವೃದ್ಧೆಯನ್ನು ಚಿಕಿತ್ಸೆಗಾಗಿ  ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರು. 
ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಸ್ವಗ್ರಾಮ ತಿಮ್ಮಾಪೂರದಲ್ಲಿ ಮತಗಟ್ಟೆ ಸಂಖ್ಯೆ 39ರಲ್ಲಿ ಉಮೇಶ್ ಮೇಟಿ ಮತದಾನ‌ ಮಾಡಿದರು.   ಗ್ರಾಮದ ಮುಖಂಡರು, ಯುವಕರ ಜೊತೆ ಬಂದು ಹಕ್ಕು ಚಲಾಯಿಸಿದರು.
ವಿಧಾನಪರಿಷತ್ ಸದಸ್ಯ ಪಿ.ಹೆಚ್.ಪೂಜಾರ ಬಾಗಲಕೋಟೆ ನಗರದ ಸಕ್ರಿ ಮಹಾವಿದ್ಯಾಲಯದಲ್ಲಿ ಮತ ಚಲಾವಣೆ ಮಾಡಿದ್ದಾರೆ. 
ಜಿಲ್ಲಾ ಪಂಚಾಯತ್​ ಮುಖ್ಯ ಕಾರ್ಯನಿರ್ವಾಹಕ ಶಶಿಧರ ಕುರೇರ ವೋಟಿಂಗ್ ನವನಗರ ಅಂಬೇಡ್ಕರ್ ಭವನದ 194ರ ಮತಗಟ್ಟೆಯಲ್ಲಿ ಪತ್ನಿ ಸಮೇತ ಆಗಮಿಸಿದ ಸಿಇಓ ಕುಟುಂಬ ಸಮೇತ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮತದಾನ ಮಾಡಿದರು.

ಇನ್ನೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬೆಳಗ್ಗೆ 11 ಗಂಟೆ ವರೆಗೆ ಶೇ.22 ರಷ್ಟು ಮತದಾನ ನಡೆದಿದೆ.  

More articles

Latest article

Most read