2006ರ ಮುಂಬೈ ಸರಣಿ ರೈಲು ಸ್ಫೋಟ: ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಹೈಕೋರ್ಟ್

Most read

ಮುಂಬೈ: 2006ರಲ್ಲಿ ಮುಂಬೈ ರೈಲು ಸರಣಿ ಸ್ಫೋಟ ಸಂಭವಿಸಿ 180ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದ  ಪ್ರಕರಣದ ಎಲ್ಲಾ 12 ಆರೋಪಿಗಳನ್ನು ಬಾಂಬೆ ಹೈಕೋರ್ಟ್‌ ಇಂದು ನಿರ್ದೋಷಿಗಳು ಎಂದು  ಖುಲಾಸೆಗೊಳಿಸಿದೆ. ಆರೋಪವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲಲವಾಗಿದ್ದು 12 ಆರೋಪಿಗಳೇ ತಪ್ಪೆಸಗಿದ್ದಾರೆ ಎಂದು ನಂಬಲು ಕಷ್ಟವಾಗುತ್ತಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪ್ರಕರಣದ ತನಿಖೆ ಮಾಡಿದ್ದ ಮಹಾರಾಷ್ಟ್ರ ಸರ್ಕಾರದ ಭಯೋತ್ಪಾದನಾ ನಿಗ್ರಹ ದಳಕ್ಕೆ ತೀರ್ಪಿನಿಂದ ಭಾರಿ ಮುಖಭಂಗವಾದಂತಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿಲ್ ಕಿಲೊರ್ ಹಾಗೂ ಶ್ಯಾಮ್ ಚಂದ್ರಕ್ ಅವರ ವಿಶೇಷ ನ್ಯಾಯಪೀಠ ರೈಲು ಸ್ಫೋಟಕ್ಕೆ ಬಳಸಲಾಗದ ಬಾಂಬ್ ಯಾವುದು ಎನ್ನುವುನ್ನೂ ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ. ಆರೋಪಿಗಳನ್ನು ಶಿಕ್ಷಿಸಲು ಈ ಪುರಾವೆಗಳು ನಿರ್ಣಾಯಕವಾಗಿಲ್ಲ ಎಂದು  ಹೇಳಿದೆ.

ಸಾಕ್ಷಿಗಳ ಹೇಳಿಕೆ ಹಾಗೂ ಆಪಾದಿತರಿಂದ ವಶಪಡಿಸಿಕೊಳ್ಳಲಾದ ವಸ್ತುಗಳಿಗೆ ಯಾವುದೇ ಸಾಕ್ಷ್ಯ ಮೌಲ್ಯವಿಲ್ಲ ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣದ ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ವಶಪಡಿಸಿಕೊಂಡ ವಸ್ತು, ಸ್ಫೋಟಕಗಳು ಮತ್ತು ಸರ್ಕ್ಯೂಟ್ ಬಾಕ್ಸ್ಗಳನ್ನು ಕಳೆಪಯಾಗಿ ನಿರ್ವಹಣೆ ಮಾಡಲಾಗಿದೆ. ಕೆಲವು ಆರೋಪಿಗಳ ತಪ್ಪೊಪ್ಪಿಗೆಯು ಅವರಿಗೆ ಹಿಂಸೆ ನೀಡಿ ಹೇಳಿಸಿದ ಹಾಗಿದೆ. ಆರೋಪಿಗಳ ತಪ್ಪೊಪ್ಪಿಗೆ ವಿವರಣೆ ಅಪೂರ್ಣವಾಗಿದ್ದು, ಕೆಲವು ಭಾಗಗಳು ಕಾಪಿ ಪೇಸ್ಟ್ ಮಾಡಿದಂತಿದೆ. ತಮಗೆ ಚಿತ್ರಹಿಂಸೆ ನೀಡಲಾಗಿದೆ ಎನ್ನುವುದನ್ನು ಆರೋಪಿಗಳು ಸಾಬೀತು ಪಡಿಸಿದ್ದಾರೆ ಎಂದು ಕೋರ್ಟ್ ತಿಳಿಸಿದೆ.

12 ಮಂದಿ ಪೈಕಿ ವಿಶೇಷ ನ್ಯಾಯಾಲಯ 5 ಮಂದಿಗೆ ಗಲ್ಲು ಶಿಕ್ಷೆ ಹಾಗೂ 7 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. 2015ರಲ್ಲಿ ವಿಶೇಷ ನ್ಯಾಯಾಲಯದ ತೀರ್ಪನ್ನು ಒಪ್ಪಿಕೊಳ್ಳಲು ಹೈಕೋರ್ಟ್ ನಿರಾಕರಿಸಿತು. ಅಲ್ಲದೆ ಬೇರೆ ಯಾವುದೇ ಪ್ರಕರಣಗಳಲ್ಲಿ ಅವರು ಇಲ್ಲದಿದ್ದರೆ ತಕ್ಷಣವೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕು ಎಂದೂ ನಿರ್ದೇಶನ ನೀಡಿದೆ.

2006 ಜುಲೈ 11ರಂದು ಮುಂಬೈನ ಉಪನಗರ ರೈಲಿನ ಹಲವು ಭಾಗಗಳಲ್ಲಿ ಬಾಂಬ್ ಸ್ಫೋಟ ನಡೆದಿತ್ತು. 180ಕ್ಕೂ ಅಧಿಕ ಮಂದಿ ಸಾವಿಗೀಡಾಗಿ, ನೂರಾರು ಮಂದಿ ಗಾಯಗೊಂಡಿದ್ದರು.

More articles

Latest article