ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶಾಶ್ವತವಾಗಿ ಖಾಲಿ ಉಳಿಯಲಿವೆ 11 ಸೀಟುಗಳು: ಕಾರಣ ಏನು ಗೊತ್ತೇ?

ಆ 11 ಮಂದಿ ಯುವ ಅಭಿಮಾನಿಗಳ ಸ್ಮರಣೆ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ 18 ವರ್ಷಗಳ ನಂತರ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡರೂ ಆ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ.

ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವವು ದುರಂತದಲ್ಲಿ ಕೊನೆಗೊಂಡಿತು. ಜೂನ್ 4, 2025ರಂದು ಎಂ. ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದರು. ಅವರ ನೆನಪಿಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಸೀಟುಗಳನ್ನು ಶಾಶ್ವತವಾಗಿ ಖಾಲಿ ಇಡಲು ಆರ್‌ಸಿಬಿ ಮತ್ತು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ನಿರ್ಧರಿಸಿವೆ.

ಐಪಿಎಲ್ 2026ರ ಮೊದಲ ಹೋಮ್ ಮ್ಯಾಚ್‌ಗೆ (ಮಾರ್ಚ್ 28ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ) ಮುನ್ನವೇ ಸ್ಟೇಡಿಯಂನ ಒಳ ಪ್ರವೇಶದ ಬಳಿ, ಸ್ಮಾರಕ ಫಲಕವನ್ನು ಅನಾವರಣಗೊಳಿಸಲಾಗುತ್ತದೆ. ಮ್ಯಾಚ್ ದಿನಗಳಂದು ಸ್ಟೇಡಿಯಂನ ದೊಡ್ಡ ಎಲ್‌ಇಡಿ ಪರದೆಯಲ್ಲಿ 11 ಮಂದಿ ಮೃತರ ಹೆಸರುಗಳು ಪ್ರದರ್ಶನಗೊಳ್ಳುತ್ತವೆ ಮತ್ತು ಒಂದು ನಿಮಿಷದ ಮೌನಾಚರಣೆ ಆಗಲಿದೆ. ಹೈದರಾಬಾದ್ ತಂಡವೂ ಈ ಗೌರವ ಸಲ್ಲಿಕೆಯಲ್ಲಿ ಭಾಗವಹಿಸಲಿದೆ.

ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಈ ಬಗ್ಗೆ ಮಾತನಾಡುತ್ತಾ, “ಆ ದುರಂತ ದಿನವನ್ನು ನೆನೆಸಿಕೊಳ್ಳುವುದೇ ನೋವುಂಟು ಮಾಡುತ್ತದೆ. ಆ 11 ಮಂದಿ ಯುವ ಅಭಿಮಾನಿಗಳ ಸ್ಮರಣೆಯನ್ನು ಗೌರವಿಸುವುದು ನಮ್ಮ ಪ್ರಥಮ ಕರ್ತವ್ಯ. ನಾವು ಆ ನೋವನ್ನು ಮತ್ತೆ ಅನುಭವಿಸಲು ಬಯಸುವುದಿಲ್ಲ,” ಎಂದು ಭಾವುಕರಾಗಿ ಹೇಳಿದ್ದಾರೆ.

ಹಿಲ್ಸ್‌ಬರೋ ಸ್ಮಾರಕಕ್ಕೆ ಸಮಾನ
ಈ ನಿರ್ಧಾರವು ಇಂಗ್ಲೆಂಡ್‌ನ ಲಿವರ್‌ಪೂಲ್ ಎಫ್‌ಸಿಯ ಐತಿಹಾಸಿಕ ಹಿಲ್ಸ್‌ಬರೋ ದುರಂತದಲ್ಲಿ ಮೃತಪಟ್ಟ ಅಭಿಮಾನಿಗಳಿಗೆ ಅನ್‌ಫೀಲ್ಡ್ ಸ್ಟೇಡಿಯಂನಲ್ಲಿ ಮಾಡಲಾಗಿರುವ ಸ್ಮಾರಕಕ್ಕೆ ಸಮಾನವಾಗಿದೆ. ಆ 11 ಸೀಟುಗಳು ಇನ್ನು ಮುಂದೆ ಯಾವುದೇ ಮ್ಯಾಚ್‌ಗೂ (ಐಪಿಎಲ್ ಅಥವಾ ಅಂತರರಾಷ್ಟ್ರೀಯ) ಟಿಕೆಟ್ ಮಾರಾಟಕ್ಕೆ ಇರುವುದಿಲ್ಲ. ಆ ಪ್ರದೇಶವನ್ನು ಗೌರವದಿಂದ ಖಾಲಿ ಬಿಡಲಾಗುತ್ತದೆ.

ಸುರಕ್ಷತೆಯಲ್ಲಿ ಬದಲಾವಣೆಗಳು
ದುರಂತದ ನಂತರ ಕೆಎಸ್‌ಸಿಎ ಹಲವು ಸುರಕ್ಷತಾ ಕ್ರಮಗಳನ್ನು ಜಾರಿಗೊಳಿಸಿದೆ. ಡಿಜಿಟಲ್ ಟಿಕೆಟ್ ವ್ಯವಸ್ಥೆ, ಹೆಚ್ಚುವರಿ ಎಂಟ್ರಿ ಗೇಟುಗಳು, ವಿಶಾಲಗೊಳಿಸಿದ ವಾಕ್‌ವೇಗಳು, ಮತ್ತು ಪ್ರತಿ ಟಿಕೆಟ್‌ನೊಂದಿಗೆ ಉಚಿತ ಮೆಟ್ರೋ ಪಾಸ್ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಈ ಸ್ಮಾರಕವು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪ್ರತಿ ಮ್ಯಾಚ್‌ನಲ್ಲೂ ಆ 11 ಅಭಿಮಾನಿಗಳನ್ನು ನೆನಪಿಸುತ್ತಾ ಇರುತ್ತದೆ.

More articles

Latest article

Most read