Wednesday, December 10, 2025

ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಮಂದಿ ಹಿರಿಯ ನಕ್ಸಲರು ಪೊಲೀಸರಿಗೆ ಶರಣು

Most read

ಗಡಿಚಿರೋಲಿ: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಮಂದಿ ಹಿರಿಯ ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಇವರ ಸುಳಿವು ನೀಡಿದವರಿಗೆ ರೂ. 82 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಸುಕ್ಮಾ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ಅವರ ಮುಂದೆ ನಕ್ಸಲೀಯರು ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ತ್ಯಜಿಸಿ ಶರಣಾದವರಲ್ಲಿ ನಾಲ್ವರು ಸಮವಸ್ತ್ರದಲ್ಲಿದ್ದರು. ಇವರ ಪತ್ತೆಗಾಗಿಯೇ ಬಹುಮಾನ ಘೋಷಿಸಲಾಗಿತ್ತು. ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಗಳ ಜಂಟಿ ಪ್ರಯತ್ನದ ಫಲವಾಗಿ ಜಿಲ್ಲೆಯಲ್ಲಿ ಈ ವರ್ಷ 112 ನಕ್ಸಲೀಯರು ಶರಣಾಗಿದ್ದಾರೆ.

ಗಡಿಚಿರೋಲಿ ಜಿಲ್ಲೆಯಲ್ಲಿ ಈ ವರ್ಷ 100ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ. ಇಲ್ಲಿ ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರು ಮಾತ್ರ  ಸಕ್ರಿಯರಾಗಿರಬಹುದು. 2026ರ ಮಾರ್ಚ್‌ 31ರೊಳಗೆ ಮಹಾರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುವ ಗುರಿ ತಲುಪುವುದಾಗಿ ಅವರು ತಿಳಿಸಿದ್ದಾರೆ.

More articles

Latest article