“ನನ್ನ ಸತ್ಯಾನ್ವೇಷಣೆ” ಆತ್ಮಕಥನಕ್ಕೆ 100 ವರ್ಷ;ಮಹಾತ್ಮ ಗಾಂಧಿ ನೈಜ ಹಿಂದೂ; ಆದರೆ ಉಗ್ರ ಹಿಂದುತ್ವವಾದಿ ಆಗಿರಲಿಲ್ಲ: ಮೀನಾಕ್ಷಿ ಬಾಳಿ

ಬೆಂಗಳೂರು: ಜಗತ್ತಿನಲ್ಲಿ ನಾವು ಕಾಣಬಹುದಾದ ಅತ್ಯಂತ ದಿಟ್ಟ ಮತ್ತು ಶ್ರೇಷ್ಠ ಆತ್ಮಕಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಒಂದಾಗಿದೆ. ಗಾಂಧೀಜಿಯವರಷ್ಟು ಪ್ರಮಾಣಿಕವಾದ ಮತ್ತು ಪಾರದರ್ಶಕವಾದ ಸತ್ಯ ನಿಷ್ಠೆಯ ದಿಟ್ಟ ಆತ್ಮಕಥೆ ಅತ್ಯಂತ ವಿರಳ. ಇದು ಇಂದಿನ ಪೀಳಿಗೆಯ ಯುವಜನತೆ ಓದಲೇಬೇಕಾದ ಹಾಗೂ ಚರಿತ್ರೆಯ ನೈಜತೆಯನ್ನು ತಿಳಿದುಕೊಳ್ಳಬೇಕಾದರೆ ಅಧ್ಯಯನ ಮಾಡಬೇಕಾದ ಅತ್ಯುತ್ತಮ ಕೃತಿಯಾಗಿದೆ. ಜೀವನ ಚರಿತ್ರೆ ಮತ್ತು ಆತ್ಮಕಥೆಗಳ ನಡುವಿನ ವ್ಯತ್ಯಾಸವನ್ನು ತಿಳಿಯಬೇಕಾದರೆ ಅದಕ್ಕೆ ಅತ್ಯುತ್ತಮ ಮಾದರಿ ಗಾಂಧಿಯವರ ಆತ್ಮಕಥೆಯಾಗಿದೆ ಎಂದು ಖ್ಯಾತ ಲೇಖಕಿ ಡಾ. ಮೀನಾಕ್ಷಿ ಬಾಳಿ ಹೇಳಿದ್ದಾರೆ.

ಅವರು ಇಂದು ಬಸವನಗುಡಿಯಲ್ಲಿನ ನ್ಯಾಷನಲ್ ಕಾಲೇಜಿನ ಡಾ. ಹೆಚ್.ಎನ್ ಸಭಾಂಗಣದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಎನ್.ಇ.ಎಸ್.ಆಫ್ ಕರ್ನಾಟಕ (ರಿ.) ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಗಾಂಧೀಜಿಯವರ ನನ್ನ ಸತ್ಯಾನ್ವೇಷಣೆ ಕೃತಿ ಪ್ರಕಟವಾಗಿ 100 ವರ್ಷ ತುಂಬಿರುವ ಪ್ರಯುಕ್ತ ಆಯೋಜಿಸಿದ್ದ “ಅಂಗಳದಲ್ಲಿ ತಿಂಗಳ ಪುಸ್ತಕ” ಕಾರ್ಯಕ್ರಮದಡಿ ಆತ್ಮಕಥೆ ಅಥವಾ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಕುರಿತು ಮಾತನಾಡುತಿದ್ದರು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕಿಂತ ಅಂಕ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಇದರಿಂದ ಯುವಜನತೆ ನೈಜ ಚರಿತ್ರೆ ಹಾಗೂ ಓದಿನಿಂದ ವಂಚಿತರಾಗುತ್ತಿದ್ದಾರೆ. ಗಾಂಧೀಜಿ ತಮ್ಮ ಬದುಕಿನಲ್ಲಿ ಸತ್ಯದೊಂದಿಗೆ ಮಾಡಿದ ಪ್ರಯೋಗಗಳು ಹಾಗೂ ಸತ್ಯಾಗ್ರಹ ಮತ್ತು ಅಹಿಂಸೆಯ ಅಸ್ತ್ರವನ್ನು ಹಿಡಿದು ಮಾಡಿದ ಹೋರಾಟಗಳ ಕಥನವನ್ನು ತಮ್ಮ ಆತ್ಮಕಥೆಯಲ್ಲಿ ಬಿಚ್ಚಿಡುತ್ತಾರೆ. ಅದರ ಜೊತೆ ಜೊತೆಗೆ ಅವರು ತಮ್ಮ ವ್ಯಕ್ತಿತ್ವದಲ್ಲಿರುವ ಲೋಪಗಳನ್ನು, ಕೆಟ್ಟತನವನ್ನು ದಿಟ್ಟವಾಗಿ ಬರೆಯುತ್ತಾರೆ. ತಮ್ಮ ಬದುಕಿನ ಎಲ್ಲ ಮುಖಗಳನ್ನು ಗಾಂಧೀಜಿಯವರಷ್ಟು ಪ್ರಾಮಾಣಿಕವಾಗಿ ಬಿಚ್ಚಿಟ್ಟವರು ಮತ್ತೊಬ್ಬರಿಲ್ಲ ಎಂದು ಅವರು ಹೇಳಿದರು.

ಆದರೆ ನಾವು ಇಂದು ಕೊಡುತ್ತಿರುವ ಗಾಂಧೀಜಿಯ ಚಿತ್ರ ಸಂಪೂರ್ಣವಾಗಿ ನೈಜತೆಗೆ, ಸತ್ಯಕ್ಕೆ ವಿರುದ್ಧವಾಗಿದೆ. ಗಾಂಧೀಜಿಯನ್ನು ದೇಶ ವಿಭಜಕ ಎಂದು ಕರೆಯಲಾಗುತ್ತಿದೆ. ಆದರೆ ವಾಸ್ತವ ಏನೆಂದರೆ ಗಾಂಧೀಜಿ ಎಂದಿಗೂ ದೇಶ ಹೊಡೆಯುವ ಕೆಲಸ ಮಾಡಲೇ ಇಲ್ಲ. ಗಾಂಧೀಜಿಯನ್ನ ನಾನಾ ವಿಧವಾಗಿ ಕೀಳೀಕರಣ ಮಾಡುವ ಇಂದಿನ ಸಂದರ್ಭ ನಿಜಕ್ಕೂ ದೊಡ್ಡ ದುರಂತ ಎಂದರು.

ದಲಿತರಿಗೆ, ಮಹಿಳೆಯರಿಗೆ ದೇಗುಲ ಪ್ರವೇಶ ನಿಷಿದ್ಧ ಎಂಬ ಉದಾಹರಣೆ ಇಂದಿಗೂ ಸಿಗುತ್ತದೆ. ಮಹಿಳೆಯರನ್ನು ಕೀಳಾಗಿ ನೋಡುವ, ಸಮಾಜದ ನಡವಳಿಕೆಯನ್ನು ಇದು ತಪ್ಪು ಎಂದು ದಿಟ್ಟವಾಗಿ ಹೇಳಿದವರು ಮಹಾತ್ಮ ಗಾಂಧಿ. ಇಂತಹ ಧೈರ್ಯ ಎಲ್ಲರಿಗೂ ಬರುವುದಿಲ್ಲ. ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಜೀವನದುದ್ದಕ್ಕೂ ಪ್ರತಿಪಾದಿಸಿದ ಮಹಾತ್ಮ ಗಾಂಧೀಜಿ ಗುಂಡಿನ ದಾಳಿಯಿಂದ ಹಿಂಸಾತ್ಮಕವಾಗಿ ಸಾವನ್ನಪ್ಪಿದ್ದು ಇತಿಹಾಸದ ದೊಡ್ಡ ದುರಂತ. ಗಾಂಧೀಜಿ ಒಬ್ಬ ರಾಜಕೀಯ ಸಂತ. ಅವರ ಆತ್ಮಕಥೆ ಇಟ್ಟುಕೊಂಡು ಇಂದು ನಡೆಯುತ್ತಿರುವ ನಾನಾ ರೀತಿಯ ವಿದ್ಯಮಾನಗಳು ನಿಜಕ್ಕೂ ನೋವನ್ನುಂಟು ಮಾಡಿವೆ ಎಂದು ಅವರು ಹೇಳಿದರು. ಗಾಂಧೀಜಿಯವರ ಚರಿತ್ರೆಯನ್ನು ತಿರುಚಲಾಗಿದೆ. ಗೋಸಂರಕ್ಷಣೆ ಹಾಗೂ ಹಿಂದುತ್ವದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಯಾರೂ ಪ್ರಶ್ನಿಸಲಾಗದು. ಅವರು ನಿಜವಾದ ಹಿಂದೂ ಆಗಿದ್ದರು. ಆದರೆ ಉಗ್ರ ಹಿಂದುತ್ವವಾದಿ ಆಗಿರಲಿಲ್ಲ ಎಂದು ಮೀನಾಕ್ಷಿ ಬಾಳಿ ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಮಾನಸ ಅವರು ಇಂದಿನ ವಿದ್ಯಾರ್ಥಿಗಳು ಕುತೂಹಲಕ್ಕಾದರೂ ಒಮ್ಮೆ ಗಾಂಧೀಜಿಯವರ ಆತ್ಮಕಥನವನ್ನು ಓದಲೇಬೇಕು. ಗಾಂಧೀಜಿಯವರ ಜೀವನ ಇಂದಿನ ಯುವ ಪೀಳಿಗೆಗೆ ಮಾದರಿ ಆಗುವಂತಹದು. ಅದರ ಜೊತೆಗೆ ಗಾಂಧೀಜಿವಯರ ನೈಜ ಇತಿಹಾಸ ತಿಳಿದುಕೊಳ್ಳಬೇಕಾದರೆ ಅವರ ಆತ್ಮಕಥನ ಓದಿದರೆ ಮಾತ್ರ ಸಾಧ್ಯ ಎಂದರು.

ಸಮಾರಂಭವನ್ನು ಎನ್.ಇ.ಎಸ್.ಆಫ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಹೆಚ್.ಎನ್. ಸುಬ್ರಹ್ಮಣ್ಯ ಅವರು ಉದ್ಘಾಟಿಸಿದರು. ಪ್ರಾಂಶುಪಾಲರದ ಡಾ. ಪಿ.ಎಲ್. ರಮೇಶ್, ಉಪ ಪ್ರಾಂಶುಪಾಲರಾದ ಪ್ರೊ. ಅಲಕಾನಂದ ಭಾಗವಹಿಸಿದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ. ಪಾಪಣ್ಣ ಸ್ವಾಗತಿಸಿದರು.

More articles

Latest article

Most read