ಒಲಿಂಪಿಕ್ಸ್ ಸಿದ್ಧತೆಗೆ ನನಗೆ ₹1.5 ಕೋಟಿ ಕೊಟ್ಟಿಲ್ಲ, ಕೇಂದ್ರ ಸುಳ್ಳು ಹೇಳುತ್ತಿದೆ : ಅಶ್ವಿನಿ ಪೊನ್ನಪ್ಪ ಕಿಡಿ

Most read

ಪ್ಯಾರಿಸ್ ಒಲಿಂಪಿಕ್ಸ್‌ ತಯಾರಿಗೆ ಭಾರತೀಯ ಕ್ರೀಡಾಪಟುಗಳಿಗೆ ನೀಡಿದ ಆರ್ಥಿಕ ನೆರವಿನ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ಶಟ್ಲರ್ ಅಶ್ವಿನಿ ಪೊನ್ನಪ್ಪಗೆ 1.5 ಕೋಟಿ ರೂ. ಕೊಟ್ಟಿರುವುದಾಗಿ ತಿಳಿಸಲಾಗಿತ್ತು. ಆದರೆ ಇದು ಸುಳ್ಳು ಎಂದು ಅಶ್ವಿನಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಸುದ್ದಿ ನೋಡಿ ನನಗೆ ಆಘಾತವಾಗಿದೆ. ಇಷ್ಟೊಂದು ಪ್ರಮಾಣದ ಹಣವನ್ನು ನನಗೆ ನೀಡಿರುವುದಾಗಿ ದೇಶಕ್ಕೆ ತಿಳಿಸುವುದು ಹಾಸ್ಯಸ್ಪದ. ಕೇಂದ್ರ ಕ್ರೀಡಾ ಇಲಾಖೆ ಒಲಿಂಪಿಕ್ಸ್‌ ವೇಳೆ ನನಗೆ ಸೂಕ್ತ ಕೋಚ್ ಸಹ ಒದಗಿಸಲಿಲ್ಲ. ನನ್ನ ಟ್ರೈನರ್‌ಗೆ ನನ್ನ ಸ್ವಂತ ಹಣದಲ್ಲಿ ವೇತನ ನೀಡುತ್ತಿದ್ದೇನೆ’ ಎಂದು ಅಶ್ವಿನಿ ತಿಳಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಗಳನ್ನು ಪೂರ್ಣಗೊಳಿಸಿದ ನಂತರವೇ ನಮ್ಮನ್ನು ಒಲಿಂಪಿಕ್ಸ್​ಗಾಗಿ ಕಳುಹಿಸಿಕೊಡಲಾಗಿದೆ. ಈ ವೇಳೆ ನಮ್ಮ ಡಬಲ್ಸ್ ತಂಡದ ಭಾಗವಾಗಿರುವ ತರಬೇತುದಾರರನ್ನು ನಮ್ಮೊಂದಿಗೆ ಕಳುಹಿಸಲು ನಾವು ಕೇಳಿದ್ದೇವು, ಆದರೆ ಅದನ್ನೂ ತಿರಸ್ಕರಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ.

More articles

Latest article