ಹೊಸಕೋಟೆ ಬಳಿ ಭೀಕರ ಅಪಘಾತ : ಏಳು ಮಂದಿ ಸಾವು

ಅತಿವೇಗವೇ ಅಪಘಾತಕ್ಕೆ ಕಾರಣ

ಹೊಸಕೋಟೆ :   ತಾಲೂಕಿನ ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಎಂ.ಸತ್ಯವಾರ ಬಳಿ ಶುಕ್ರವಾರ ಬೆಳಗಿನ ಜಾವ ಸರಣಿ ಅಪಘಾತ ನಡೆದಿದೆ. 

ಘಟನೆಯಲ್ಲಿ ಬೈಕ್ ಸವಾರ ಸೇರಿದಂತೆ ಕಾರಿನಲ್ಲಿ ಆರು ಮಂದಿ ಸೇರಿ ಒಟ್ಟು ಏಳು ಜನರು ಸಾವನ್ನಪ್ಪಿದ್ದಾರೆ.ಎಸ್ ಯುವಿ ಕಾರಿನಲ್ಲಿದ್ದ ಆರ್ಹಾನ್ ಶರೀಪ್ (16), ಅಯಾನ್ ಆಲಿ(17), ಅಶ್ವಿನ್ ನಾಯರ್(17), ಭರತ್ (18), ಈತನ್ ಜಾರ್ಜ್ (17), ಫರಾನ್ ಶೇಖ್ (17) ಸಾವನ್ನಪ್ಪಿದ್ದಾರೆ.
ಕ್ಯಾಂಟರ್ ಲಾರಿ ಚಾಲಕ ಬಾಲಸುಬ್ರಮಣ್ಯ,ಕ್ಯಾಂಟರ್ ಲಾರಿ ಚಕ್ರ ಕಳಚಿ ಅಪ್ಪಳಿಸಿದ ಕಾರಿನಲ್ಲಿದ್ದ ಬಾಲಾಜಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಕರ ಅಪಘಾತ : ಸೂಲಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಎಂ.ಸತ್ಯವಾರ ಬಳಿ ಹಾದು ಹೋಗಿರುವ ಹೆದ್ದಾರಿಯಲ್ಲಿ ಎಸ್‌ಯುವಿ 700 ಕಾರು ಚಲಿಸುತ್ತಿತ್ತು. ಈ ಕಾರು ದೇವನಹಳ್ಳಿ ತಾಲೂಕು ದೇವನಾಯಕನಹಳ್ಳಿ ಗ್ರಾಮದ ಗಗನ್(26) ಎಂಬಾತ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರ ಸರ್ವೀಸ್ ರಸ್ತೆಗೆ ಹೋಗಿ ಬಿದ್ದು ಸಾವನ್ನಪ್ಪಿದ್ದಾನೆ

.ನಂತರ ಕಾರು ಕ್ಯಾಂಟರ್ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ಲಾರಿ ಹಿಂಬದಿ ಚಕ್ರಗಳು ಕಳಚಿ ಬಿದ್ದು,ಮತ್ತೊಂದು ಕಾರಿಗೆ ಅಪ್ಪಳಿಸಿವೆ. ಈಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್ಸೆಸ್ಸೆಲ್ಸಿ,ಪಿಯುಸಿ ವಿದ್ಯಾರ್ಥಿಗಳು : ಮೃತ ಆಶ್ವಿನ್ ನಾಯರ್ ಹಾಗೂ ಈತನ್ ಜಾರ್ಜ್ ಯಲಹಂಕ ಖಾಸಾಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿದ್ದನು. ಅರ್ಹನ್ ಶರೀಪ್,ಆಯನ್ ಆಲಿ,ಭರತ್  ಇವರು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು. ಇನ್ನೂ ಬೈಕ್ ಸವಾರ ಗಗನ್ ಸಫಲ್ ಮಾರುಕಟ್ಟೆಯಲ್ಲಿ ಸೂಪರ್ ವೈಸರ್ ಕೆಲಸ ಮಾಡುತ್ತಿದ್ದರು .

ಅಪಘಾತಕ್ಕೆ ಕಾರಿನ ಅತಿವೇಗವೇ ಕಾರಣ ಎನ್ನಲಾಗುತ್ತಿದೆ. ಈ ವಿದ್ಯಾರ್ಥಿಗಳು ಪೋಷಕರ ಕಣ್ತಪ್ಪಿಸಿ ಕಾರಿನಲ್ಲಿ ಬಂದಿದ್ದರೂ ಎನ್ನಲಾಗಿದ್ದು,ಇವರೆಲ್ಲ ಯಾಕೆ ಹೊಸಕೋಟೆಕ್ಕೆ ಪ್ರಯಾಣಿಸುತ್ತಿದ್ದರು ಎಂಬುದರ ಬಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಘಟನೆಯಿಂದ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಿಷಯ ತಿಳಿದ ಸ್ಥಳಕ್ಕೆ ಬಂದ ಸೂಲಬೆಲೆ ಪೊಲೀಸರು ವಾಹನಗಳನ್ನು ತೆರೆವು ಮಾಡಿ ಸಂಚಾರಕ್ಕೆ ಅನುವು ಮಾಡಿದರು. ಘಟನೆ ಸ್ಥಳಕ್ಕೆ ಐಜಿ ಲಾಭೂರಾಮ್, ಎಸ್ಪಿ ಚಂದ್ರಕಾಂತ್ ಡಿವೈಎಸ್ಪಿ ಮಲ್ಲೇಶ್,ಸಿಪಿಐ ರವಿಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More articles

Latest article

Most read