ಬೆಂಗಳೂರು: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ. 19 ಕೆಜಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ 111 ರೂಗಳಷ್ಟು ಏರಿಕೆಯಾಗಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಇದರಿಂದ ಹೋಟೆಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನು ಹೆಚ್ಚಳ ಮಾಡುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ.
ಈ ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್, ಢಾಬಾ ಮತ್ತು ಕೇಟರಿಂಗ್ ಉದ್ಯಮಗಳ ಮೇಲೆ ದುಷ್ಪಪರಿಣಾಮ ಬೀರಲಿದೆ ಎಂದು ಉದ್ಯಮಿಗಳು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ದರ ರೂ.1,787 ಗೆ ಏರಿಕೆಯಾಗಿದೆ
ಕಳೆದ ವರ್ಷ ಡಿಸೆಂಬರ್‌ನಲ್ಲಿ ರೂ.10 ಮತ್ತು ನವಂಬರ್‌ನಲ್ಲಿ ರೂ. 5ಗಳಷ್ಟು ಕಡಿಮೆ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಆಧರಿಸಿ ತೈಲ ಕಂಪನಿಗಳು ಸಿಲಿಂಡರ್ ಬೆಲೆಯನ್ನು ನಿಧರಿಸುತ್ತವೆ. ಹಾಗೆಯೇ ತೆರಿಗೆ ಮತ್ತು ಸಾಗಣೆ ವೆಚ್ಚ ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಸಿಲಿಂಡರ್ ಬೆಲೆ ನಿರ್ಧಾರವಾಗುತ್ತದೆ.

