ದಾವಣಗೆರೆ: ಜಾತಿ ಜಾತಿವಾದವಾಗಬಾರದು, ಧರ್ಮ ಧಾರ್ಮಿಕ ಮೂಲಭೂತವಾಗಬಾರದು. ಇಡೀ ಬೌದ್ಧಿಕ ವಲಯವೇ ವಿಭಜಿತಗೊಂಡಿದೆ. ಯಾರು ದೇಶ ಪ್ರೇಮಿ ಎನ್ನುವುದನ್ನು ಧರ್ಮದ ಮಾನದಂಡದಲ್ಲಿ ಗುರುತಿಸುವುದು ವಿಷಾದನಿಯ ಎಂದು ಹಿರಿಯ ಸಾಹಿತಿ, ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು. ದಾವಣಗೆರೆಯಲ್ಲಿ ನಡೆಯುತ್ತಿರುವ ಸಂವಿಧಾನ ಸಂರಕ್ಷಕರ ಸಮಾವೇಶದಲ್ಲಿ ಅವರು ಮಾತನಾಡಿದರು.
20ನೆ ಶತಮಾನದಲ್ಲಿ ರಾಷ್ಟ್ರೀಯ ವಾದ ಕಾರಣವಾದರೆ, ಇಂದು 21 ಶತಮಾನದಲ್ಲಿ ಖಾಸಗಿ ಕಾರಣ ಹೆಚ್ಚಾಗಿದೆ ಜೊತೆಗೆ ಸೌಹಾರ್ದತೆಯನ್ನು ಕುರಿತು ಮಾತನಾಡುವ ಸಂದರ್ಭ ಒದಗಿ ಬಂದಿದೆ. ಧಾರ್ಮಿಕ ಜಾತಿಯ ಉನ್ಮಾದ ಜಾಸ್ತಿಯಾಗಿದೆ ಮತ್ತು ಜನಸಾಮಾನ್ಯರನ್ನು ಪರಂಪರೆಯ ಮೂಲಕ ತಲುಪಬೇಕು ಎಂದು ಹೇಳಿದರು.
ಎಸ್ ರಾಧಾಕೃಷ್ಣನ್, ಮತ್ತು ಅಂಬೇಡ್ಕರ್ ಅವರಿಗೆ ಬೇರೆ ಬೇರೆ ವಿಚಾರಧಾರೆಗಳಿದ್ದರು, ಇಬ್ಬರು ಧಾರ್ಮಿಕ ಸಮಾನತೆಯನ್ನು ಒತ್ತಿ ಹೇಳುತ್ತಾರೆ. ನಮ್ಮ ಭಾರತ ಅಂದರೆ, ಮಹಿಳೆಯೆಯರಿಗೆ ವಿದ್ಯೆಕೊಡಲು ಸಾವಿತ್ರಿ ಬಾ ಫುಲೆ ಮುಂದೆ ಬಂದರೆ, ಪ್ರತಿಯೊಬ್ಬರನ್ನು ಶಾಲೆಗೆ ಸೇರಿಸಿದ್ದು ಫಾತಿಮ ಷೇಕ್. ಕರೋನ ಕಾಲದಲ್ಲಿ ಯಾರು ಯಾವ ಜಾತಿ ಕೇಳಲಿಲ್ಲ. ಎಲ್ಲರೂ ಬದುಕುವುದಕ್ಕಾಗಿ ಧರ್ಮ ನೋಡದೆ ಚಿಕಿತ್ಸೆ ನೀಡಿದ್ದಾರೆ ಇದು ನಮ್ಮ ಭಾರತ ಎಂದರು.
ಇದೇ ತಿಂಗಳ 22ನೇ ತಾರಿಕೂ ಪಹಲ್ಗಾಮ್ ಹತ್ಯಾಕಾಂಡ ನಡೆಯಿತು. ಅದನ್ನು ನಾವು ಖಂಡಿಸಲೆಬೇಕು. ಪಹಲ್ಗಾಮ್ ದಾಳಿಯನ್ನು ತಮ್ಮ ಗಂಡ ಮಂಜುನಾಥ್ ರಾವ್ ಅವರನ್ನು ಕಳೆದುಕೊಂಡ ಪಲ್ಲವಿಯವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುವಾಗ ‘ಉಗ್ರರು ನನ್ನ ಪತಿಗೆ ಗುಂಡುಟ್ಟು ಕೊಂದರು. ಅದೇ ಸಮಯದಲ್ಲಿ ಮೂರು ಜನ ಮುಸ್ಲಿಂರು ನನ್ನನ್ನು ಮತ್ತು ನನ್ನ ಮಗನನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟರು, ಇದು ನನ್ನ ಭಾರತ ಎಂದರು.
ಪಹಲ್ಗಾಮ್ ನಲ್ಲಿ ನಡೆದ ಹತ್ಯಾಕಾಂಡದಲ್ಲಿ ಎರಡು ದೃಶ್ಯಗಳು ವೈರಲ್ ಆದವು. ಅದರಲ್ಲಿ ಒಬ್ಬ ಮನುಷ್ಯ ಸತ್ತಿರುವ ಪಕ್ಕದಲ್ಲಿ ಒಂದು ಹೆಣ್ಣು ಮಗಳು ರೋಧನೆಪಡುತ್ತಿರುತ್ತಾಳೆ. ಇನ್ನೊಂದು ಕಡೆ ಒಬ್ಬ ವ್ಯಕ್ತಿ ತನ್ನ ಬೆನ್ನು ಮೇಲೆ ಒಂದು ಹುಡುಗನನ್ನು ಎತ್ತಿಕೊಂಡು ಹೋಗುತ್ತಿರುವ ಸಂಕೇತ ಇದೆ. ಈ ಎರಡು ಸಂಕೇತಗಳನ್ನು ಗಮನಿಸಬೇಕು. ಯಾರಾದರೂ ವ್ಯಕ್ತಿಗಳು ಜಾತಿಯೊಳಗಿದ್ದು, ಧರ್ಮದೊಳಗಿದ್ದು, ಪಕ್ಷದೊಳಗಿದ್ದು ಇವೆಲ್ಲವನ್ನೂ ಬಿಟ್ಟು ಅದರ ಆಚೆಗೆ ನಿಂತು ಭಾರತವನ್ನು ನೋಡುವ ಸಾಮಾಜಿಕ, ರಾಜಕೀಯ, ಧಾರ್ಮಿಕ ನಾಯಕತ್ವ ಬೇಕು. ಇವೆಲ್ಲವೂ ಇದ್ದರೆ ಭಾರತದಲ್ಲಿ ಸಮಾನತೆಯನ್ನು ಕಾಣಬಹುದು. ಮತ್ತು ಸಂವಿಧಾನ ಪೂಜೆ ಮಾಡುವವರಿಗೆ ಅಂತರಂಗದಲ್ಲಿ ಯಾವ ಭಕ್ತಿಯಿದೆ ಎಂದು ನೋಡಬೇಕು ಎಂದರು.
ಪ್ರಸ್ತುತ ಭಾರತದಲ್ಲಿ 1 ಕೋಟಿ 87 ಲಕ್ಷ ಜನ ಕೈಯಲ್ಲಿ ಮಲವನ್ನು ಎತ್ತುತ್ತಿದ್ದಾರೆ. ಇಲ್ಲಿಯವರೆಗೂ 1 ಲಕ್ಷದ 89 ಸಾವಿರ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳ ದಾಖಲಾಗುತ್ತಿದ್ದಾವೆ. ಆದರೆ ಇತ್ಯಾರ್ಥ ಆದದ್ದು 27 ಸಾವಿರ ಪ್ರಕರಣಗಳು ಅಂದರೆ ಶೇ 15ಕ್ಕಿಂತ ಕಡಿಮೆ. ದಲಿತರು ಮತ್ತು ಮಹಿಳೆಯರ ಸಮಾನತೆ ಬರದೇ ದೇಶವನ್ನು ಕಟ್ಟಲು ಸಾಧ್ಯವಿದೆ ಎಂದರು.
ಜೊತೆವೆ ದೇಶದಲ್ಲಿ ಶೇ 8.6ರಷ್ಟು ಬುಡಕಟ್ಟು, ಅಲೆಮಾರಿ ಜನಸಂಖ್ಯೆ ಇದೆ. ಸುಮಾರು 74 ಚದರ ಮೈಲಿಗಳಲ್ಲಿ ಅಲೆಮಾರಿಗಳು ಬದುಕುತ್ತಿದ್ದಾರೆ. ಅವರ ಬಗ್ಗೆ ಧ್ವನಿ ಎತ್ತುತ್ತಿರುವವರಾರು ಎಂದು ಪ್ರಶ್ನಿಸಿದರು. ಸೈದ್ಧಾಂತಿಕ ಬದ್ದತೆಯನ್ನು ಬಿಟ್ಟುಕೊಡದೆ ಸೈದ್ದಾಂತಿಕ ಸಂಕುಚಿತತೆಯನ್ನು ಮೀರಬೇಕು. ಕೆಂಪು, ನೀಲಿ, ಹಸಿರು ಒಂದಾಗಿ ಒಂದೇ ವೇದಿಕೆಗೆ ಬಂದರೆ ಯಶಸ್ಸು ಕಂಡಿತ ಎಂದರು.
ವೇದಿಕೆಯ ಮೇಲೆ ಗುಜರಾತ್ ನ ಕಾಂಗ್ರೆಸ್ ಶಾಸಕರದ ಜಿಗ್ನೇಶ್ ಮೇವಾನಿ, ಆರ್ಥಿಕ ತಜ್ಞರಾದ ಪರಕಾಲ ಪ್ರಭಾಕರ್, ರೈತ ಸಂಘದ ಮುಂಖಡರು, ದಲಿತ ಸಂಘಟನೆಯ ಮುಖಂಡರು, ಸಂಘಟಕರಾದ ನೂರ್ ಶ್ರೀಧರ್ ಹಾಗೂ ಹಲವರು ಉಪಸ್ಥಿತರಿದ್ದರು.