ಆನೆ-ಮಾನವ ಸಂಘರ್ಷ ಕೊನೆಯಾಗಲಿ: ಸಿದ್ಧರಾಮಯ್ಯ‌ ಆಶಯ

Most read

ಬೆಂಗಳೂರು: ವಿಶ್ವ ಆನೆ ದಿನ, ಆನೆಗಳ ನೈಸರ್ಗಿಕ ಆವಾಸಸ್ಥಾನಗಳ ಸಂರಕ್ಷಣೆಯ ಮಹತ್ವವನ್ನು ಮತ್ತು ಆ ಮೂಲಕ ಆನೆಗಳ ಉಳಿವನ್ನು ಖಚಿತಪಡಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ. ಮಾನವ-ಆನೆ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ವಿಶ್ವ ಆನೆ ದಿನ ಪೂರಕವಾಗಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.

ಮಾನವ ಆನೆ ಸಂಘರ್ಷದ ಕುರಿತ ಅಂತರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿದರು.

ಜನರು ಸಾವಿರಾರು ವರ್ಷಗಳಿಂದ ಆನೆಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಪರಸ್ಪರ ವಾಸಿಸುತ್ತಿರುವ ಗಡಿಗಳು, ಅಭಿವೃದ್ಧಿ ಚಟುವಟಿಕೆಗಳು, ಹವಾಮಾನ ಮತ್ತು ನೈಸರ್ಗಿಕ ಸಂಪನ್ಮೂಲಗಳು ಬದಲಾಗುತ್ತಿರುವ ಕಾರಣ, ಮಾನವ ಮತ್ತು ಆನೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ.

ನಗರೀಕರಣ, ಕೃಷಿ, ಅರಣ್ಯ ನಾಶ, ಹೆದ್ದಾರಿಗಳು ಅಥವಾ ಗಣಿಗಾರಿಕೆಯಂತಹ ಕೈಗಾರಿಕಾ ಬೆಳವಣಿಗೆಯಿಂದ ಆನೆಗಳು ತಮ್ಮ ಆವಾಸಸ್ಥಾನಗಳನ್ನು ಕಳೆದುಕೊಂಡಿವೆ. ಬೇಲಿಗಳು ಮತ್ತು ರೈಲು ಹಳಿಗಳಂತಹ ಅಡೆತಡೆಗಳಿಂದಾಗಿ ಆನೆಗಳು ಬಹುದೂರ ಪಯಣಿಸುವ ಆ ಮೂಲಕ ಅಪಾಯಗಳಿಗೆ ಸಿಲುಕುವ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಈ ಹಿಂದೆ ಆನೆಗಳು ವಿಹರಿಸುತ್ತಿದ್ದ ಭೂ ಪ್ರದೇಶ, ಈಗ ಮಾನವ ಕೃಷಿಯ ನೆಲೆಯಾಗಿದೆ ಮತ್ತು ಅವುಗಳು ತಮ್ಮ ನೀರನ್ನು ಅರಿಸಿ ಬರುತ್ತಿರುವುದರಿಂದ ಗ್ರಾಮಸ್ಥರಿಗೆ ಅಪಾಯ ಎದುರಾಗುವ ಸಾಧ್ಯತೆಗಳನ್ನು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಹವಾಮಾನ ಬದಲಾವಣೆಯು ತಾಪಮಾನ ಹೆಚ್ಚಳ ಮತ್ತು ಮಳೆಯ ಪ್ರಮಾಣದ ಬದಲಾವಣೆಯಿಂದಾಗಿ ಆನೆಗಳಿಗೆ ಸಂಪನ್ಮೂಲಗಳು ಇನ್ನಷ್ಟು ವಿರಳವಾಗಿವೆ. ಅವುಗಳು ಆಹಾರ ಅರಸಿ ಸಮುದಾಯ ಭೂಮಿಗಳು ಸೇರಿದಂತೆ ಹೊಸ ಪ್ರದೇಶಗಳಿಗೆ ಹೋಗಬೇಕಾಗುವ ಪರಿಸ್ಥಿತಿ ಎದುರಾಗಿದೆ. ಮಾನವರು ಸಹ ತಮ್ಮದೇ ಆದ ಅನಿವಾರ್ಯತೆಗಳಿಂದಾಗಿ, ನೀರು ಅಥವಾ ಉರುವಲು ಸಂಗ್ರಹಣೆಗಾಗಿ ಆನೆ ವಾಸ ಪ್ರದೇಶಕ್ಕೆ ಪ್ರವೇಶಿಸುತ್ತಾರೆ. ಆನೆ ಮತು ಮಾನವ ಈ ಈ ಸ್ಪರ್ಧೆಯು ಜನರು ಮತ್ತು ವನ್ಯಜೀವಿಗಳಿಗೆ ಇಬ್ಬರಿಗೂ ಜೀವಬೆದರಿಕೆಯನ್ನು ಒಡ್ಡುತ್ತಿವೆ.

ನಮ್ಮ ದೇಶದಲ್ಲಿ 2017 ರ ಜನಗಣತಿಯ ಪ್ರಕಾರ ಸುಮಾರು 30ಸಾವಿರ ಆನೆಗಳಿದ್ದು, ಇದು ಜಾಗತಿಕವಾಗಿ ಅತಿದೊಡ್ಡ ಸಂಖ್ಯೆಯಾಗಿದೆ. ಕರ್ನಾಟಕದಲ್ಲಿ 6,395ಆನೆಗಳಿದ್ದು, ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ, ಇದು ರಾಷ್ಟ್ರದ ಒಟ್ಟು ಆನೆಗಳ ಸಂಖ್ಯೆಯ ಸರಿಸುಮಾರು 25% ರಷ್ಟಿದೆ.

ಅಖಿಲ ಭಾರತ ಹುಲಿ ಅಂದಾಜು 2022 ರ ಪ್ರಕಾರ 563 ಹುಲಿಗಳನ್ನು ಕರ್ನಾಟಕ ಹೊಂದಿದ್ದು, ದೇಶದಲ್ಲೇ ಎರಡನೇ ಅತಿ ಹೆಚ್ಚು ಹುಲಿಗಳಿಗೆ ನೆಲೆಯಾಗಿರುವ ರಾಜ್ಯವಾಗಿದೆ. ಹೆಚ್ಚಿನ ಸಂಖ್ಯೆಯ ದೊಡ್ಡ ಸಸ್ತನಿಗಳು ಮತ್ತು ಬಲಿಷ್ಠ ಪರಭಕ್ಷಕಗಳನ್ನು ರಾಜ್ಯ ಹೊಂದಿದ್ದು, ಸಸ್ಯಹಾರಿ ಮತ್ತು ಇತರ ಅರಣ್ಯ ಸಂಪನ್ಮೂಲಗಳ ಆರೋಗ್ಯಕರ ಸಂಖ್ಯೆಯನ್ನು ಸೂಚಿಸುತ್ತವೆ ಎಂದು ಅವರು ಹೇಳಿದರು.

ರಾಜ್ಯದ ಶ್ರೀಮಂತ ಅರಣ್ಯ ಸಂಪತ್ತಿನ ಹಿಂದೆ, ಕಳೆದ ಕೆಲವು ದಶಕಗಳಿಂದ ಅರಣ್ಯ ಇಲಾಖೆಯು ಕೈಗೊಂಡ ಸಂರಕ್ಷಣಾ ಚಟುವಟಿಕೆಗಳು ಕಾರಣವಾಗಿದೆ.

ಕರ್ನಾಟಕವು ಮೈಸೂರು ಆನೆ ಮೀಸಲು ಪ್ರದೇಶ ಮತ್ತು ದಾಂಡೇಲಿ ಆನೆ ಮೀಸಲು ಪ್ರದೇಶ ಎಂಬ ಎರಡು ಪ್ರಮುಖ ಆನೆ ಮೀಸಲು ಪ್ರದೇಶಗಳನ್ನು ಹೊಂದಿದೆ. ಒಟ್ಟಾರೆಯಾಗಿ, 10ಸಾವಿರ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ಪ್ರದೇಶವನ್ನು ಆವರಿಸಿರುವ ಈ ಮೀಸಲು ಪ್ರದೇಶಗಳು ನಮ್ಮ ಆನೆಗಳ ಜನಸಂಖ್ಯೆ ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಅಭಿವೃದ್ಧಿಯ ಒತ್ತಡಗಳು ಮತ್ತು ಅರಣ್ಯ ಪ್ರದೇಶಗಳ ಚದುರುವಿಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳವನ್ನು ಕಂಡಿದೆ.

ಕರ್ನಾಟಕದ ಆನೆಗಳ ಸಂಖ್ಯೆ ಗಮನಾರ್ಹವಾಗಿರುವುದರಿಂದ ಮಾನವ-ಆನೆ ಸಂಘರ್ಷದ ಅನಿವಾರ್ಯ ಸವಾಲು ಎದುರಾಗುವುದು ಸಹಜ. ಕಳೆದ 10 ವರ್ಷಗಳಲ್ಲಿ, ರಾಜ್ಯವು ಮಾನವ-ಆನೆ ಸಂಘರ್ಷದ 2,500 ಕ್ಕೂ ಹೆಚ್ಚು ಘಟನೆಗಳನ್ನು ವರದಿ ಮಾಡಿದ್ದು, 350 ಕ್ಕೂ ಹೆಚ್ಚು ಜನರ ಸಾವುಗಳು ಮತ್ತು ಗಣನೀಯ ಪ್ರಮಾಣದ ಬೆಳೆ ನಷ್ಟವಾಗಿದೆ. ಈ ಸಮಸ್ಯೆಯು ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಗಣನೀಯ ಆನೆಗಳ ಜನಸಂಖ್ಯೆಯನ್ನು ಹೊಂದಿರುವ ಬಹುತೇಕ ಎಲ್ಲಾ ಪ್ರದೇಶಗಳೂ ಈ ಸಮಸ್ಯೆಯನ್ನು ಎದುರಿಸುತ್ತಿವೆ ಎಂದವರು ಹೇಳಿದರು.

ಈ ಸಮಸ್ಯೆಯ ತೀವ್ರತೆಯನ್ನು ಗುರುತಿಸಿ, ಕರ್ನಾಟಕವು ನಿರ್ದಿಷ್ಟವಾಗಿ ಮಾನವ-ವನ್ಯಜೀವಿ ಸಂಘರ್ಷಗಳನ್ನು ಪರಿಹರಿಸಲು ಮೀಸಲಾದ ಬಜೆಟ್ ಹೆಡ್ ಅನ್ನು ನಿಗದಿಪಡಿಸಿದೆ. ವಾರ್ಷಿಕವಾಗಿ, ಮಾನವ-ಆನೆ ಸಂಘರ್ಷಗಳನ್ನು ತಗ್ಗಿಸಲು ₹150 ಕೋಟಿಗೂ ಹೆಚ್ಚು ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಈ ಅನುದಾನವನ್ನು, 300 ಕಿಲೋಮೀಟರ್‌ಗಿಂತಲೂ ಹೆಚ್ಚು ರೈಲ್ವೇ ಬ್ಯಾರಿಕೇಡ್‌ಗಳು, 800 ಕಿಲೋಮೀಟರ್‌ಗಳಷ್ಟು ವ್ಯಾಪಿಸಿರುವ ಸೌರ ಬೇಲಿಗಳು, ಸೌರ ಟೆಂಟಕಲ್ ಬೇಲಿಗಳು ಮತ್ತು ಆನೆ ತಡೆ ಕಂದಕಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ.

ಕರ್ನಾಟಕದಲ್ಲಿ ರೈಲು ಬ್ಯಾರಿಕೇಡ್ ಯೋಜನೆಯನ್ನು ಪ್ರಾರಂಭಿಸಲಾಗಿದ್ದು, 2015-16 ರಿಂದ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಏಕೈಕ ರಾಜ್ಯ ಕರ್ನಾಟಕ. ರೈಲು ಬ್ಯಾರಿಕೇಡ್ ಯೋಜನೆಯು ಅರಣ್ಯದ ಹೊರವಲಯದಲ್ಲಿ ಕೃಷಿ ಮಾಡುವ ರೈತರ ಆದಾಯವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ಸಿದ್ಧರಾಮಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕದ ರೈತರು ಎಂದಿಗೂ ಅರಣ್ಯ ಹಾಗೂ ವನ್ಯಜೀವಿಗಳ ಪರ ನಿಲುವನ್ನು ಹೊಂದಿದ್ದಾರೆ. ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸುವ ಉತ್ತಮ ಉದಾಹರಣೆ ನೀಡಿದ್ದು, ಘರ್ಷಣೆಗಳ ಹೊರತಾಗಿಯೂ ರೈತರು ಅಪಾರ ಸಹಿಷ್ಣುತೆಯನ್ನು ಮೆರೆದಿದ್ದಾರೆ. ಅವರ ನಮ್ಮ ರೈತರನ್ನು ವನ್ಯಜೀವಿಗಳ ನಿಜವಾದ ಸಂರಕ್ಷಕರು.

ಸೌರ ಬೇಲಿಗಳನ್ನು ನಿರ್ಮಿಸಲು ಸಂಪನ್ಮೂಲಗಳು ಮತ್ತು ಸಬ್ಸಿಡಿಗಳನ್ನು ಒದಗಿಸುವ ಮೂಲಕ ರೈತರನ್ನು ಸಬಲೀಕರಣಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಯೋಜನೆಗಳು 50,000 ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿಭೂಮಿಯನ್ನು ಸಂರಕ್ಷಣೆ, ರೈತರ ಜೀವನೋಪಾಯದ ರಕ್ಷಣೆ ಮತ್ತು ಮಾನವಮತ್ತು ವನ್ಯಜೀವಿಗಳ ನಡುವೆ ಸಹಬಾಳ್ವೆಯನ್ನು ಪ್ರೋತ್ಸಾಹಿಸಲು ಸಹಾಯ ಮಾಡಿದೆ.

ನಮ್ಮ ಸರ್ಕಾರವು ಮಾನವ-ಆನೆ ಸಂಘರ್ಷಗಳೊಂದಿಗೆ ಭವಿಷ್ಯವನ್ನು ರೂಪಿಸಲು ಯತ್ನಿಸುತ್ತಿದೆ. ಹೆಚ್ಚಿದ ಅನುದಾನ, ತಾಂತ್ರಿಕ ಆವಿಷ್ಕಾರಗಳು ಅಥವಾ ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಈ ದಿಸೆಯತ್ತ ನಮ್ಮ ಪ್ರಯತ್ನಗಳನ್ನು ಹೆಚ್ಚಿಸಲು ಬದ್ಧವಾಗಿದ್ದೇವೆ ಎಂದು ಅವರು ಘೋಷಿಸಿದರು.

ಕರ್ನಾಟಕ ಅರಣ್ಯ ಇಲಾಖೆಯು ಘರ್ಷಣೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಗ್ಗಿಸಲು ಅಗತ್ಯವಾದ ಮಾನವಶಕ್ತಿ ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದೆ.

ನಾವು 8 ವಿಶೇಷ ಗಜ ಕಾರ್ಯಪಡೆಗಳನ್ನು ಸ್ಥಾಪಿಸಿದ್ದು, ಪ್ರತಿಯೊಂದೂ ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಶ್ರೇಣಿಯ ಅಧಿಕಾರಿಗಳ ನೇತೃತ್ವದಲ್ಲಿ, ಎಲ್ಲಾ ಪ್ರಮುಖ ಸಂಘರ್ಷ ವಲಯಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ.

ಹೆಚ್ಚಿದ ಆನೆ ದಾಳಿಯನ್ನು ನಿಭಾಯಿಸಲು, ಕರ್ನಾಟಕ ಒಂಬತ್ತು ಗಜ ಕಾರ್ಯಪಡೆ ತಂಡಗಳನ್ನು ಸ್ಥಾಪಿಸಿದೆ. ನಿಯಂತ್ರಣ ಕೊಠಡಿಗಳ ಸಹಕಾರದೊಂದಿಗೆ ಈ ಕಾರ್ಯಪಡೆಗಳು , ಸಾರ್ವಜನಿಕ ಮತ್ತು ರೈತರ ರಕ್ಷಣೆಗೆ ತ್ವರಿತ ಪ್ರತಿಕ್ರಿಗಳನ್ನು ನೀಡುವ, ಆನೆಗಳ ಮುಖಾಮುಖಿಯಿಂದ ಸಮುದಾಯಗಳನ್ನು ರಕ್ಷಿಸುವ ಮತ್ತು ಆನೆಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನಗಳಿಗೆ ಸುರಕ್ಷಿತವಾಗಿ ಹಿಂದಿರುಗಿಸಲು ಅನುಕೂಲ ಕಲ್ಪಿಸುತ್ತದೆ ಎಂದು ಅವರು ಹೇಳಿದರು.

ಈ ಕಾರ್ಯಪಡೆಗಳು ಕಳೆದ ವರ್ಷವೊಂದರಲ್ಲಿ 1,200 ಕ್ಕೂ ಹೆಚ್ಚು ಆನೆ ದಾಳಿ ಘಟನೆಗಳಿಗೆ ಪ್ರತಿಕ್ರಿಯಿಸಿದ್ದು, ಆನೆಗಳನ್ನು ಸುರಕ್ಷಿತ ಆವಾಸಸ್ಥಾನಗಳಿಗೆ ಓಡಿಸುವಲ್ಲಿ ಯಶಸ್ವಿಯಾಗಿದೆ.

ಕರ್ನಾಟಕ ಅರಣ್ಯ ಸಾಮರಸ್ಯ ಯೋಜನೆಯು ಕರ್ನಾಟಕದ ಉದ್ದೇಶಿತ ಅರಣ್ಯ ಪ್ರದೇಶಗಳಲ್ಲಿ ಶೂನ್ಯ ಮಾನವ-ಪ್ರಾಣಿ ಸಂಘರ್ಷ ವಲಯಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಈ ಸಮಗ್ರ ಯೋಜನೆಯು ಪ್ರಾಣಿಗಳಿಗೆ ನೀರಿನ ಭದ್ರತೆ, ಆವಾಸಸ್ಥಾನದ ಸುಧಾರಣೆ ಮತ್ತು ಸಮುದಾಯಗಳ ಸಕ್ರಿಯ ಭಾಗವಹಿಸುವಿಕೆಯನ್ನು ಒಳಗೊಂಡಿರುತ್ತದೆ.

ಆವಾಸಸ್ಥಾನ ಸುಧಾರಣೆ ಚಟುವಟಿಕೆಗಳಾದ ಜನರ ಪ್ರದೇಶಗಳಿಗೆ ಕಾಡು ಪ್ರಾಣಿಗಳು ದಾರಿ ತಪ್ಪಿ ಬರುವಿಕೆಯನ್ನು ತಪ್ಪಿಸಲು, ಹುಲ್ಲುಗಾವಲು ಅಭಿವೃದ್ಧಿ, ಬಿದಿರಿನ ಪುನರುತ್ಪಾದನೆ ಮತ್ತು ಸೌರ ನೀರಿನ ಪಂಪ್ ಸೌಲಭ್ಯಗಳೊಂದಿಗೆ ನೀರಿನ ರಂಧ್ರಗಳ ರಚನೆಗಳಂತಹ ಆವಾಸಸ್ಥಾನದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕರ್ನಾಟಕ ಅರಣ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಸ್ಥಳೀಯ ಸಮುದಾಯಗಳ ಸಹಕಾರದೊಂದಿನ ಪ್ರಯತ್ನಗಳು ಪ್ರಮುಖವಾಗಿವೆ.

ಮಾನವರು ಮತ್ತು ಆನೆಗಳ ನಡುವೆ ಸಾಮರಸ್ಯದ ಸಹಬಾಳ್ವೆಗೆ ದಾರಿ ಮಾಡಿಕೊಡಲು ಪ್ರಮುಖ ಒಳನೋಟಗಳು ಮತ್ತು ಶಿಫಾರಸುಗಳನ್ನು ಈ ಸಮ್ಮೇಳನದಲ್ಲಿ ಭಾಗವಹಿಸಿರುವ ವಿಷಯ ತಜ್ಞರು ನೀಡುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.

More articles

Latest article