ವಿಶ್ವ ಶಾಂತಿಗಾಗಿ ಬುದ್ಧನ ಮಾನವೀಯ ಸಂದೇಶಗಳು

Most read

“ಮಹಾಕಾರುಣಿಕ ತಥಾಗತ ಗೌತಮ ಬುದ್ಧನ ಭೋಧನೆಗಳ ಬಗ್ಗೆ ಬರೆಯುವುದು ಸಹಜ ಹಾಗೂ ಸುಲಭವಾದ ಕಾರ್ಯವಲ್ಲ, ಆದರೂ ಬುದ್ಧನ ಭೋಧನೆಗಳು ಹಿಂದಿನ ಕಾಲಕ್ಕಿಂತಲೂ ಪ್ರಸ್ತುತ ಮತ್ತು ನಾಳೆಗಾಗಿ, ಮುಂಬರುವ ತಲೆಮಾರಿಗೆ ಬುದ್ಧ ಪ್ರಜ್ಞೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಅನಿಸುತ್ತದೆ. ‘ಬುದ್ಧ’ ಎಂದರೆ ಸ್ವಯಂ ಬೆಳಕು. ಸ್ವಯಂ ಜಾಗೃತಿ, ಸ್ವಯಂ ಅರಿವು, ಪ್ರಜ್ಞೆ, ಶೀಲ, ಕರುಣೆ, ಪಂಚಶೀಲ, ಅಸ್ಟಾಂಗ ಮಾರ್ಗ, ಆರ್ಯಸತ್ಯಗಳು ಕಾರಣ-ಪರಿಣಾಮ ಸಿದ್ದಾಂತದ ಜನಕ, ಮನೋವೈಜ್ಞಾನಿಕ ಹಾಗೂ ಲೋಕ ಕಲ್ಯಾಣಕ್ಕಾಗಿ ಸತ್ಯವನ್ನು ಸತ್ಯವೆಂದು, ಸುಳ್ಳನ್ನು ಸುಳ್ಳೆಂದು ತಿಳಿಸಿದ ಮಹಾನ್ ತತ್ವಜ್ಞಾನಿ, ಸಮಾಜ ವಿಜ್ಞಾನಿ, ಸಮ ಸಮಾಜದ ಪ್ರತಿಪಾದಕ ಬುದ್ಧ.


ಬುದ್ಧ ವೈಶಾಖ ಪೂರ್ಣಿಮೆಯ ದಿನ ಶಾಕ್ಯ ವಂಶದ ರಾಜ ಶುಧ್ದೋಧನ ಮಹಾ ಮಾಯೆಯ ಉದರದಲ್ಲಿ ಲುಂಬಿಣಿಯಲ್ಲಿ ವನದಲ್ಲಿ ಜನಿಸಿದ. ಬುದ್ಧನ ವಿಶಿಷ್ಟವಾದ ದಿನವೆಂದರೆ ಜನಿಸಿದ್ದು, ಜ್ಞಾನೋದಯವಾದದ್ದು ಹಾಗೂ ನಿಬ್ಬಾಣ (ಮರಣ) ಹೊಂದಿದ್ದು ವೈಶಾಖ ಪೂರ್ಣಿಮೆಯ ದಿನದಂದು. ಹೀಗಾಗಿ ಈ ದಿನವನ್ನು ಇತಿಹಾಸದಲ್ಲಿ ವಿಶಿಷ್ಟವಾಗಿದೆ. ಬುದ್ದನು ಬೋಧಿಸಿದ ಸಂದೇಶಗಳ ನ್ನೊಳಗೊಂಡ ತ್ರಿಪಿಠಕಗಳು ಪಾಲಿ ಭಾಷೆಯಲ್ಲಿ ರಚನೆಗೊಂಡವು. ಬುದ್ಧನ ನಂತರ ನಡೆದ ಸುಮಾರು ಆರು ಧಮ್ಮ ಸಮ್ಮೇಳನಗಳು ನಡೆಸಲಾಯಿತು. ಆರನೆಯ ಸಂಘಯಾನವನ್ನು ೧೯೫೪ ರಲ್ಲಿ ಬರ್ಮಾದ ದೇಶದ ರಾಜಧಾನಿ ರಂಗೋನನಲ್ಲಿ ನಡೆದ ಸಮ್ಮೇಳನದಲ್ಲಿ ಭಾರತದಿಂದ ಡಾ.ಬಿ.ಆರ್.ಅಂಬೇಡ್ಕರ್ ಭಾಗವಹಿಸಿದರು. ನಂತರ ೧೯೫೬ ಅಕ್ಟೋಬರ್ ೧೪ ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ಐದು ಲಕ್ಷ ಅನುಯಾಯಿಗಳೊಂದಿಗೆ ಭಾರತದ ಮೂಲ ಧಮ್ಮಕ್ಕೆ ಮರಳುವುದರ ಮೂಲಕ ಐತಿಹಾಸಿಕ ಚರಿತ್ರೆಯ ಸೃಷ್ಟಿಸಿದರು. ಇವತ್ತು ಬುದ್ಧನು ನಮಗೆ ಪರಿಚಯವಾದದ್ದು ಡಾ. ಬಿ.ಆರ್.ಅಂಬೇಡ್ಕರ್‌ರವರ ಬುದ್ಧ ಮತ್ತು ಆತನ ಧಮ್ಮ ಕೃತಿಯ ಮೂಲಕವಾಗಿ. ಬುದ್ಧ ಬೋಧಿಸಿದ ವಿಚಾರಧಾರೆಗಳು ಆಧುನಿಕ ಜಗತ್ತಿಗೆ ಅಗತ್ಯ ಮತ್ತು ಅನಿವಾರ್ಯವಾಗಿವೆ. ವೈಜ್ಞಾನಿಕ, ವೈಚಾರಿಕ ಚಿಂತನೆಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳುವುದು ಬುದ್ಧನ ಬೋಧನೆಗಳಿಂದ ಆಗುವ ಲಾಭಗಳು. ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಬೆಳಕು ಚೆಲ್ಲುವುದು ಅಗತ್ಯವೆನಿಸುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಬುದ್ಧ ಒಬ್ಬ ಮನೋವೈದ್ಯನಾಗಿ ಕಾಣುತ್ತಾನೆ. ಪ್ರಪಂಚದಲ್ಲಿ ಅಥವಾ ಜಗತ್ತಿನಲ್ಲಿ ದುಃಖವನ್ನು ಪತ್ತೆ ಹಚ್ಚುವ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ವೈದ್ಯನು ಹೌದು. ಪ್ರತಿಯೊಬ್ಬ ಮನುಷ್ಯನ ಸಮಸ್ಯೆ ಮತ್ತು ಸವಾಲುಗಳಿಗೆ ಕಾರಣಗಳಿವೆ. ಇವೆಲ್ಲವೂಗಳಿಂದ ಹೊರಬರಲು ಪರಿಹಾರೋಪಾಯಗಳನ್ನು ಕಂಡು ಹಿಡಿದಿದ್ದು ಒಬ್ಬ ಮಹಾನ್ ವೈದ್ಯ ತಥಾಗತ ಗೌತಮ ಬುದ್ಧ.


ಹೀಗಾಗಿ ಅವರು “ನಾನು ಏನೂ ಹೇಳಿದೆನೆಂದು ನಂಬಬೇಡ; ನಿಮ್ಮ ತಂದೆ-ತಾಯಿ ಹೇಳಿದ್ದಾರೆಂದು ನಂಬಬೇಡ, ನಿನ್ನ ಗುರು ಹಿರಿಯರು ಹೇಳಿದ್ದಾರೆಂದು ನಂಬಬೇಡ, ನಿನ್ನ ಹಿತೈಸಿ ಸ್ನೇಹಿತರು ಬಂಧುಗಳು ಹೇಳಿದ್ದಾರೆಂದು ನಂಬಬೇಡ, ಸಾಧು ಸಚಿತರು ಅಥವಾ ಧರ್ಮ ಪ್ರಚಾರಕರು ಹೇಳಿದ್ದಾರೆಂದು ನಂಬಬೇಡ, ನಾನು ಹೇಳುವ ಪ್ರತಿಯೊಂದು ಮಾತುಗಳು ಸತ್ಯವೆನಿಸಿದರೆ ಅದು ನಿಮ್ಮ ಅನುಭವಕ್ಕೆ ಬಂದರೆ, ಅದು ವೈಜ್ಞಾನಿಕವಾಗಿದ್ದರೆ ಅದು ನಿನಗೂ ಒಳ್ಳೆಯದಾಗಿ ಸಮಾಜಕ್ಕೂ ಒಳ್ಳೆಯದಾಗುವಂತಿದ್ದರೆ ಹಾಗೂ ಲೋಕ ಕಲ್ಯಾಣವಾಗುವಂತಿದ್ದರೆ ಅದನ್ನು ಪುರಸ್ಕರಿಸು ಇಲ್ಲದಿದ್ದರೆ ಅದನ್ನು ತಿರಸ್ಕರಿಸು” ಎಂಬ ಸಿದ್ಧಾಂತ ಮಹತ್ವದ್ದಾಗಿದೆ.


ಬುದ್ಧನ ಪ್ರತಿಯೊಂದು ಬೋಧನೆಗಳು ವೈಜ್ಞಾನಿಕ ತಳಹದಿ ಮತ್ತು ಅನುಭವ ಆಧಾರದ ಮೇಲೆ ನಿಂತಿವೆ. ಹೀಗಾಗಿ ಬುದ್ಧ ಭಾರತದಲ್ಲಿ ಜನಿಸಿದರು, ಇಡೀ ಪ್ರಪಂಚದಾದ್ಯಂತ ಪ್ರಭಾವ ಬೀರುತ್ತಿರುವ ಮಹಾನ್ ದಾರ್ಶನಿಕ, ತತ್ವಜ್ಞಾನಿ, ಸಮಾಜ ವಿಜ್ಞಾನಿಯಾಗಿ ಇವರ ಸಂದೇಶಗಳು ತೋರುತ್ತವೆ. ಜಗತ್ತಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ತಳಹದಿಯಾಗಿವೆ ಅಂದರೆ ಅತಿಶೋಯಕ್ತಿಯಲ್ಲ. ಇವರು ಬೋಧಿಸಿರುವ ಹಲವಾರು ಸಂಶೋಧನೆಗಳಲ್ಲಿ “ಕಾರಣ ಮತ್ತು ಪರಿಣಾಮ” (Cause and Effect Theory) ಸಿದ್ಧಾಂತವು ೧೭ ಮತ್ತು ೧೮ ನೇ ಶತಮಾನದಲ್ಲಿ ಪಾಶ್ಚಿಮಾತ್ಯ ದೇಶಗಳ ಮೇಲೆ ಪ್ರಭಾವ ಬೀರುವುದರಿಂದ ಹಲವಾರು ವಿಜ್ಞಾನಿಗಳು ಮತ್ತು ತತ್ವಜ್ಞಾನಿಗಳು ಬುದ್ಧ ಬೋಧಿಸಿದ ಕಾರಣ-ಪರಿಣಾಮ ತತ್ವಗಳಿಂದ ಪ್ರಭಾವಕ್ಕೆ ಒಳಗಾದ ಗೆಲೆಲಿಯೊ, ಆರ್ಕೆಮೆಡಿಸ್, ಐನ್‌ಸ್ಟಿನ್, ನ್ಯೂಟನ್, ಡಾರ್ವಿನ್‌ನಂತಹ ಹಲವಾರು ವಿಜ್ಞಾನಗಳಿಗೆ ತಳಹದಿಯಾಗಿದೆ. ಇವು ಕೇವಲ ವಿಜ್ಞಾನ ಕ್ಷೇತ್ರಕ್ಕೆ ಅಷ್ಟೇ ಸೀಮಿತವಾಗಿಲ್ಲ. ಸಮಾಜ ವಿಜ್ಞಾನ, ಮಾನವೀಯ ವಿಜ್ಞಾನ, ಜೀವ ವಿಜ್ಞಾನ, ರಸಾಯನ ವಿಜ್ಞಾನ, ನರರೋಗ ಶಾಸ್ತç, ಆರ್ಯುವೇದ, ಯೂನಾನಿ ಶಾಸ್ತç, ಸಿದ್ಧಿಗಳ ಮೇಲೂ ಬುದ್ಧನ ವೈಜ್ಞಾನಿಕ ಬೋಧನೆಗಳ ಛಾಪು ಮೂಡಿಸಿದೆ. ಹೀಗಾಗಿ ಖ್ಯಾತ ಮನೋವಿಜ್ಞಾನಿ ಡೇನಿಯಲ್ ಗೋಲ್‌ಮನ್ ಬರೆಯುತ್ತಾರೆ. (Increasing use of Buddha Teachings in Psychopherapy) ಅಮೇರಿಕಾ ವಿಜ್ಞಾನ ಪತ್ರಿಕೆಯಲ್ಲಿ ಮಾನಸಿಕ ಚಿಕಿತ್ಸೆಯಲ್ಲಿ ಬುದ್ಧನ ಬೋಧನೆಗಳು ಹೆಚ್ಚು ಬಳಕೆ ಮತ್ತು ಪ್ರಯೋಜಕವಾಗಿವೆ. ಮಕ್ಕಳು ಮತ್ತು ಜನ ಸಾಮಾನ್ಯರಿಗೆ ಭಾವನಾತ್ಮಕ ಬುದ್ಧಿಮತ್ತೆ (Emotional Intelligence) ವೃದ್ಧಿಯು ಬುದ್ಧನ ಬೋಧನೆಗಳಿಂದ ಮಾತ್ರ ಸಾಧ್ಯವೆಂದಿದ್ದಾರೆ.


ಬುದ್ದನ ಜಾತಕ ಕಥೆಗಳಲ್ಲಿನ ಕಿಸಾಗೌತಮಿ ತನ್ನ ಪ್ರೀತಿಯ, ಮುದ್ದಿನ ಮಗು ಸಾವನಪ್ಪಿದಾಗ ಬುದ್ದನ ಹತ್ತಿರ ರೋಧಿಸುತ್ತಾ ಹೋಗುತ್ತಾಳೆ. ನನ್ನ ಮಗುವನ್ನು ಬದುಕಿಸಿಕೊಡಿ ಎಂದು. ಆಗ ಬುದ್ಧ ಆಯಿತು ಬದುಕಿಸಿಕೊಡುತ್ತೆನೆ; ಆದರೆ ಒಂದು ಷರತ್ತು ಇದೆ ಅದನ್ನು ನೀನು ಪೂರೈಸಬೇಕು. ಆಗಲ್ಲಿ ಯಾವ ಷರತ್ತು ಹೇಳಿ ಎಂದು ಕಿಸಾಗೌತಮಿ ಕೇಳಿದಾಗ, ಬುದ್ದ ಹೇಳಿದ್ದು, ಸಾವು ಸಂಭವಿಸದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು. ಕಿಸಾಗೌತಮಿ ಸುಮಾರು ಮನೆಗಳನ್ನು ತಿರುಗಾಡಿ, ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಅಸಾಧ್ಯವಾಗುತ್ತದೆ. ಮನನೊಂದು ಮತ್ತೆ ಬುದ್ಧನ ಹತ್ತಿರ ಬರುವಾಗ ಅವಳಿಗೆ ಸ್ವಯಂ ಅರಿವಾಗಿರುತ್ತದೆ. ಆಗ ಬುದ್ಧ ಕಿಸಾಗೌತಮಿಗೆ ಹುಟ್ಟು-ಸಾವು ಸ್ವಾಭಾವಿಕ ಇಲ್ಲಿ ಯಾರು ಶಾಶ್ವತವಲ್ಲ ಸ್ವಯಂ ಅನುಭವದ ಮೂಲಕ ಅವಳಿಗೆ ಜ್ಞಾನೋದಯಗೊಳಿಸುತ್ತಾರೆ. ಬುದ್ಧ ಬೋಧಿಸಿದ ಹಲವಾರು ವಿಚಾರಗಳು, ಸಂಶೋಧನೆಗಳು, ಆವಿಷ್ಕಾರಗಳು ಪಾಲಿ ಭಾಷೆಯ ತ್ರಿಪಿಠಕಗಳಲ್ಲಿವೆ.


೧) ವಿನಯ ಪೀಠಕ ಇದು ಬೌದ್ಧ ಬಿಕ್ಖುಗಳ ನಿಯಮಗಳು ಮತ್ತು ನಿಯಂತ್ರಣದ ಬಗ್ಗೆ ವಿವರಣೆಯನ್ನು ನೀಡುತ್ತದೆ.


೨) ಸುತ್ತ ಪೀಠಕ ಇದು ಆರ್ಯಸತ್ಯ, ಉಪದೇಶಗಳು, ಸೂತ್ರಗಳು, ಕಥೆಗಳನ್ನೊಳಗೊಂಡಿವೆ. ಇದನ್ನು ಐದು ನಿಕಾಯಗಳಲ್ಲಿ ವಿಂಗಡಿಸಲಾಗಿದೆ. ದಿಗ್ಗ ನಿಕಾಯ ೩೮ ಸೂತ್ರಗಳು, ಮಜ್ಜಮ ನಿಕಾಯ ೧೫೨ ಸೂತ್ರಗಳು, ಸಂಯುಕ್ತ ನಿಕಾಯ ೨೮೮೯ ಸೂತ್ರಗಳು, ಅಂಗುತ್ತರ ನಿಕಾಯ ೩೦೮ ಸೂತ್ರಗಳು ಖುದ್ದಕ ನಿಕಾಯ ೧೫ ಸೂತ್ರಗಳು ಇವು ಪಾಲಿ ಭಾಷೆಯಲ್ಲಿವೆ. ಇವುಗಳು ಜನ ಸಾಮಾನ್ಯರ ನೀತಿಸಂಹಿತೆಗಳಾಗಿವೆ.


೩) ಅಭಿಧಮ್ಮ ಪೀಠಕ ಅಭಿ ಎಂದರೆ, ಉನ್ನತ ಧಮ್ಮ ಎಂದರೆ ಬುದ್ಧನ ಬೋಧನೆ. ಇದನ್ನು ಬುದ್ಧನ ಉನ್ನತ ಬೋಧನೆಗಳಾಗಿವೆ. ಮನಸ್ಸು ಮತ್ತು ಶಾರೀರಿಕ ಸಂಬAಧಗಳನ್ನು ವೈಜಾನಿಕವಾಗಿ ವಿಶ್ಲೇಷಿಸಲಾಗಿದೆ. ಹೀಗಾಗಿ ಬುದ್ಧ ಪ್ರಥಮ ಮನೋವಿಜ್ಞಾನಿಯು ಹೌದು. ಬುದ್ಧ ಮನಸ್ಸು ಮತ್ತು ದೇಹದ ಸಂಬಧಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮತ್ತು ಸಂಶೋಧನೆ ಮಾಡಿ ‘ಆಸೆ ದುಃಖಕ್ಕೆ ಮೂಲ’ಎಂದು ಸಾರಿದ. ಇದರ ಅರ್ಥ ಅತಿಯಾದ ಆಸೆ ಮಾಡುವುದರಿಂದ ದುಃಖ ಉಂಟಾಗುತ್ತದೆ. ಈ ಕಾರಣದಿಂದ ಮಾನಸಿಕ ಆರೋಗ್ಯದಲ್ಲಿ ಅಸಮತೋಲನ ಕಂಡುಬರುತ್ತದೆ. ಮಾನಸಿಕ ಆರೋಗ್ಯ ಸಮಾನ ಸ್ಥಿತಿಯಲ್ಲಿಡಲು ಪಂಚಶೀಲ ಮತ್ತು ಅಷ್ಟಾಂಗ ಮಾರ್ಗ ಬೋಧಿಸಿ ಪ್ರಜ್ಞೆ, ಶೀಲ, ಕರುಣೆಯ ಮಧ್ಯಮ ಮಾರ್ಗದ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.

ಪಂಚಶೀಲಗಳು


೧) ಪಾಣಾತಿಪಾತಾ ವೇರಮಣಿ ಸಿಕ್ಕಾಪದಂಗ ಸಮಾಧಿಯಾಮಿ ಎಂದರೆ ಪಶು-ಪ್ರಾಣಿ, ಪಕ್ಷಿಗಳು ಹಾಗೂ ಜೀವಿಗಳನ್ನು ಕೋಲ್ಲದಿರುವದು ಮತ್ತು ತೊಂದರೆ ಕೊಡದಿರುವದು.


೨) ಆದಿನ್ಯ ಧಾನಾ ವೇರಮಣಿ ಸಕ್ಕಾಪದಂಗ ಸಮಾಧಿಯಾಮಿ ಎಂದರೆ ಕಳ್ಳತನ ಅಥವಾ ಅನ್ಯರ ಆಸ್ತಿ ಪಾಸ್ತಿ ತೆಗೆದುಕೊಳ್ಳುವದಿಲ್ಲ.


೩) ಕಾಮೇಶು ಮಿಚ್ಛಚಾರ ವೇರಮಣಿ ಸಿಕ್ಕಾಪದಂಗ ಸಮಾಧಿಯಾಮಿ ಎಂದರೆ ವ್ಯಭಿಚಾರ ಹಾಗೂ ಲೈಂಗಿಕ ಶೋಷಣೆ ಮಾಡುವಂತಿಲ್ಲ.


೪) ಮೋಸಾವಾದ ವೇರಮಣಿ ಸಕ್ಕಾಪದಂಗ ಸಮಾಧಿಯಾಮಿ ಎಂದರೆ ನಾನು ಯಾರನ್ನು ಮೋಸ, ವಂಚನೆ ಮಾಡುವದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ.


೫) ಸೂರಮೇರಯ ಮಜ್ಜಪ ಮಾದಠಾಣಾ ವೇರಮಣಿ ಸಿಕ್ಕಾಪದಂಗ ಸಮಾಧಿಯಾಮಿ ನಾನು ಮಧ್ಯಪಾನ ಮತ್ತು ಮತ್ತೇರುವ ವಸ್ತುಗಳನ್ನು ಸೇವಿಸುವುದಿಲ್ಲ.


ಇವುಗಳು ಪ್ರತಿಯೊಬ್ಬರು ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಲು ದೇಹ ಮತ್ತು ಮನಸ್ಸನ್ನು ಪರಿಶುದ್ಧಗೊಳಿಸಲು ಪಂಚಶೀಲವು “ಒiಟಿಜ-ಃoಜಥಿ Puಡಿiಠಿiಛಿಚಿಣioಟಿ ಅಟeಚಿಟಿeಡಿs”ಗಳಾಗಿ ಎಲ್ಲರು ಅನುಸರಿಸಬೇಕು ಮತ್ತು ಮೈಗೂಡಿಸಿಕೊಳ್ಳಬೇಕು. ಇವು ಮಾನವನ ಮುಕ್ತಿಯ ಮಾರ್ಗಕ್ಕೆ ಅಡಿಪಾಯಗಳಾಗಿವೆ.


ಅಷ್ಟಾಂಗಿಕ ಮಾರ್ಗಗಳು :-

೧) ಸರಿಯಾದ ನೋಟ Right view
೨) ಸರಿಯಾದ ಉದ್ದೇಶ Right Intenation
೩) ಸರಿಯಾದ ಮಾತು Right Speech
೪) ಸರಿಯಾದ ಕ್ರಿಯೆ Right Action
೫) ಸರಿಯಾದ ಜೀವನೋಪಾಯ Right lovelyhood
೬) ಸರಿಯಾದ ಪ್ರಯತ್ನ Right effort
೭) ಸರಿಯಾದ ಮನಸ್ಸು Right Mindfulness
೮) ಸರಿಯಾದ ಏಕಾಗ್ರತೆ Right concentration

ಇವು ಅಷ್ಟಾಂಗ ಮಾರ್ಗವು ನಮ್ಮ ದಿನನಿತ್ಯ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರೋಪಾಯ ಗಳಾಗಿ ಹಾಗೂ ಜೀವನದ ಕೌಶಲ್ಯಗಳಾಗಿ ಅಳವಡಿಸಿಕೊಳ್ಳಬೇಕಾಗಿರುವುದು ಇಂದಿನ ಜರೂರಿಯಾಗಿದೆ.


ಬುದ್ಧನ ಇನ್ನೊಂದು ಅಂಗುಲಿಮಾಲ ಸುತ್ತ ಕಥೆ ಸ್ಮರಿಸಿಕೊಳ್ಳಬಹುದು. ವಿಕೃತ ಮನಸ್ಥಿಯ ಅಂಗುಲಿಮಾಲ, ಸಾವಿರ ಮನುಷ್ಯರನ್ನು ಕೊಲ್ಲಲು ಪ್ರತಿಜ್ಞೆ ಮಾಡಿದ. ಕೊಲ್ಲಿದ ಪ್ರತಿಯೊಬ್ಬರಿಂದಲೂ ಒಂದು ಬೆರಳನ್ನು ಕತ್ತರಿಸಿ ತನ್ನ ಕುತ್ತಿಗೆ ದಾರಕ್ಕೆ ಸೇರಿಸಿಕೊಳ್ಳುತ್ತಿದ್ದ. ಹೀಗಾಗಿಯೇ ಅವನಿಗೆ ಅಂಗುಲಿಮಾಲ್ ಎಂದು ಕರೆಯಲ್ಪಡುತ್ತಿದ್ದ. ಒಂದು ದಿನ ಬುದ್ಧ ಭಿಕ್ಷೆಗಾಗಿ ಪಟ್ಟಣಕ್ಕೆ ಹೋದನು. ತನ್ನ ಊಟವನ್ನು ಮುಗಿಸಿದ ನಂತರ ತನ್ನ ಬಟ್ಟಲನ್ನು ತೆಗೆದುಕೊಂಡು ಅಂಗುಲಿಮಾಲಾ ತಂಗಿದ್ದ ರಸ್ತೆಯ ಕಡೆಗೆ ಹೋರಟಿದ್ದರು. ಸ್ಥಳೀಯ ಜನರು ಬುದ್ಧನಿಗೆ; ಅಲ್ಲಿ ಅಂಗುಲಿಮಾಲಾನಿದ್ದಾನೆ ಆ ಕಡೆಗೆ ಹೋಗಬೇಡಿ ಎಂದು ಹಲವಾರು ಜನರು ಹಲವಾರು ಬಾರಿ ಬೇಡಿಕೊಂಡರು. ಹಿಂತಿರುಗುವಂತೆ ಒತ್ತಾಯಿಸಿದರು, ಆದರೆ ಬುದ್ಧ ಯಾರ ಮಾತು ಕೇಳದೆ ಕೊಲೆಗಾರ ಅಂಗುಲಿಮಾಲಾ ಇರುವ ಸ್ಥಳದ ದಿಕ್ಕಿನಲ್ಲಿ ನಡೆದರು. ಅಂಗುಲಿಮಾಲಾ ಏಕಾಂಗಿ ಸನ್ಯಾಸಿಯನ್ನು ನೋಡಿದನು ಮತ್ತು ಸಂತೋಷದಿಂದ ಬುದ್ಧನನ್ನು ಕೊಲ್ಲಲು ನಿರ್ಧರಿಸಿದನು. ಬುದ್ದನ ಕಡೆಗೆ ಓಡುತ್ತಿದ್ದಂತೆ, ಬುದ್ಧನು ಶಾಂತಿ, ಪ್ರೀತಿ, ಕರುಣೆ, ಮೈತ್ರಿಯ ಶಕ್ತಿಯಿಂದ ಕೊಲ್ಲಲು ಓಡಿ ಬರುತಿರುವದನ್ನು ನಿಧಾನವಾಗಿ ನೋಡಿದ. ಆಶ್ಚರ್ಯಚಕಿತನಾಗಿ, ನಿಲ್ಲು ಎಂದು ಬುದ್ಧನಿಗೆ ಹೇಳುತ್ತಾನೆ. ಆಗ ಬುದ್ಧ ಮುಗಳ್ನಗುತ್ತಾ ಹೇಳುತ್ತಾರೆ; ನಾನು ನಿಂತಿದ್ದಿನಿ, ನೀನು ನಿಲ್ಲಬೇಕಾಗಿದೆ. ಆಗ ಅಂಗುಲಿಮಾಲಾಗೆ ಅರ್ಥವಾಗುವುದಿಲ್ಲ, ಆ ಇಲ್ಲಿರುವ ಮರದ ಕೊಂಬೆಯನ್ನು ಕಡಿದು ತೋರಿಸು, ಅಂಗುಲಿಮಾಲಾ ಖಡ್ಗದಿಂದ ಕತ್ತರಿಸಿ ತೋರಿಸುತ್ತಾನೆ. ಆಗ ಬುದ್ಧ ಆ ಕೊಂಬೆ ಪುನಃ ಜೊಡಿಸಲ್ಲು ಹೇಳುತ್ತಾರೆ ಅದು ಸಾದ್ಯವಾಗುವುದಿಲ್ಲ, ಆಗ ಬುದ್ಧ ಯಾವ ಜೀವವನ್ನು ಕೊಡುವ ಹಕ್ಕು ನಿನಗಿಲ್ಲವೊ, ಹಾಗೆ ನಿನಗೆ ಜೀವ ತೆಗೆಯುವ ಹಕ್ಕು ಇಲ್ಲ. ಈ ಘಟನೆಯಿಂದ ಅವನ ತನ್ನ ಮನ ಪರಿವರ್ತನೆ ಮಾಡಿಕೊಂಡು ಮಹಾನ್ ಮಾನವತ ವಾದಿಯಾಗಿ ಬುದ್ಧನ ಮಾರ್ಗದಲ್ಲಿ ನಡೆಯತ್ತಾನೆ. ಪ್ರಸ್ತುತ ದಿನಮಾನದಲ್ಲಿ ನಾವುಗಳು ಅರ್ಥಮಾಡಿಕೊಳ್ಳಬೇಕು ನಮ್ಮ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಮೋಸ-ವಂಚನೆ ಗುಣಗಳು ಬಿಟ್ಟು, ಶಾಂತಿ, ಪ್ರೀತಿ, ಕರುಣೆ, ಮೈತ್ರಿ ಗುಣಗಳನ್ನು ಮೈಗೂಡಿಸಿಕೊಂಡು ಸಾಗಬೇಕಿದೆ.


ಬುದ್ಧ ವಿಶ್ವಶಾಂತಿಗಾಗಿ ಪ್ರೀತಿ, ಕರುಣೆ, ಮೈತ್ರಿಗಳ ಮೂಲಕ ಪ್ರತಿಯೊಂದು ಜೀವಿಯು ತನ್ನದೆಯಾದ ಸ್ವಾಭಾವಿಕ ಮತ್ತು ನೈಸರ್ಗಿಕವಾದ ಜೀವನ ಕ್ರಿಯೆಯನ್ನು ನಡೆಸುವದರ ಮೂಲಕ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ, ನೆಮ್ಮದಿ, ತೃಪ್ತಿ ವೃದ್ಧಿಗೊಳಿಸಲು ನಮ್ಮ ನಮ್ಮಲ್ಲಿರುವ ಭೇದಭಾವ ಮೇಲೂ ಕೀಳು, ಕನಿಷ್ಠ- ಬಲಿಷ್ಠ, ಮಾನವ ಮಾನವೀಯತೆ ಸಂಬಂಧಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ನಮ್ಮ ಮನಸ್ಸು ದೇಹ ಹಾಗೂ ಮಾತುಗಳು ಮನೆಯಲ್ಲಿ, ಸಮಾಜದಲ್ಲಿ ಮತ್ತು ಪ್ರತಿಯೊಂದು ಜೀವನರಂಗದಲ್ಲಿ ನಾವಾಡುವ ಮಾತು ನಾವು ಮಾಡುವ ಯೋಚನೆ ಮೊದಲು ನಮ್ಮ ಮನಸ್ಸು ಮತ್ತು ದೇಹದ ಮೇಲೆ ಪ್ರಭಾವ ಬೀರುವದರಿಂದ ನಮ್ಮ ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿರುವುದರಿಂದ ನಮ್ಮ ಬದುಕು, ಒತ್ತಡ, ಆತಂಕ, ಅಭದ್ರತೆ, ಪರಸ್ಪರ ದ್ವೇಷ, ಅಸೂಯೆಗಳು ಸಮಾಜ ಹಾಗೂ ವ್ಯಕ್ತಿತ್ವದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದರ ಜೊತೆಗೆ ಶಾಂತಿಯ ಕೊರತೆ ಎದ್ದು ಕಾಣುತ್ತಿದೆ.


ಹೀಗಾಗಿ ಇದಕ್ಕೆ ಸೂಕ್ತವಾದ ಮಾರ್ಗ ನಮ್ಮಲ್ಲೆ ಇದೆ. ನಮ್ಮ ಮನೆ ದಿನಾಲೂ ಹೇಗೆ ಸ್ವಚ್ಚಗೊಳಿಸುತ್ತೇವೊ? ಹಾಗೆ ನಮ್ಮ ಮನಸ್ಸು ಮತ್ತು ದೇಹ, ನಾವಾಡುವ ಮಾತುಗಳು ಸ್ವಚ್ಚಗೊಳಿಸುವುದರ ಮೂಲಕ ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಸಹ ಸಂಬಂಧಗಳನ್ನು ಹಾಗೂ ಸ್ವಯಂ ಅರಿವು ಸಮಾಜದಲ್ಲಿ ಸ್ವಾತಂತ್ರö್ಯ, ಸಮಾನತೆ, ಭಾತೃತ್ವ, ಸಹೋದರತ್ವ ಭಾವನೆಯನ್ನು ಅಳವಡಿಸಿಕೊಂಡು ಪ್ರಭುದ್ಧ ಭಾರತ ನಿರ್ಮಾಣಕ್ಕಾಗಿ ನಾವು ನೀವು ಸ್ವಯಂ ಪ್ರೇರಿತರಾಗಿ ಬುದ್ಧನ ಬೋಧನೆಗಳಲ್ಲಿನ ವೈಜ್ಞಾನಿಕ ಸತ್ಯ ಹಾಗೂ ವೈಚಾರಿಕ ಚಿಂತನೆಗಳನ್ನು ಅರಿತು, ನಮಗೆ ಇವತ್ತು ಬೇಕಾಗಿರುವುದು ಯುದ್ಧವಲ್ಲ ಬುದ್ಧ ಎಂಬ ವಾಸ್ತವಿಕ ಸತ್ಯದ ಅಗತ್ಯವೆನಿಸುತ್ತದೆ.

More articles

Latest article