ಬೆಂಗಳೂರು: ಚಿತ್ರನಟಿ ಭಾವನಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಜನಿಸಿದ ಒಂದು ಮಗು ಮೃತಪಟ್ಟಿದ್ದು ಮತ್ತೊಂದು ಮಗು ತಾಯಿ ಆರೋಗ್ಯವಾಗಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಭಾವನಾ ರಾಮಣ್ಣ ಅವರಿಗೆ ಎರಡು ವಾರಗಳ ಹಿಂದೆಯೇ ಮಗು ಜನನವಾಗಿದೆ. ಈ ಮಾಹಿತಿ ತಡವಾಗಿ ಹೊರಬಿದ್ದಿದೆ.
ಭಾವನಾ ಅವರು ಗರ್ಭಿಣಿಯಾಗಿ ಏಳು ತಿಂಗಳಾಗುತ್ತಿದ್ದಂತೆ ಒಂದು ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ವೈದ್ಯರ ಸಲಹೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಈ ಸಂದರ್ಭದಲ್ಲಿ ಒಂದು ಮಗು ಮೃತಪಟ್ಟಿದೆ. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿರುವ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
40 ವರ್ಷದ ಭಾವನಾ ರಾಮಣ್ಣ ಅವರು ವಿವಾಹವಾಗದೆ ಐವಿಎಫ್ ಚಿಕಿತ್ಸೆ ಮೂಲಕ ಅವಳಿ ಮಕ್ಕಳ ನಿರೀಕ್ಷೆಯಲ್ಲಿದ್ದರು. ಇತ್ತೀಚೆಗೆ ಅವರುಸಂತಸದಿಂದ ಸೀಮಂತವನ್ನೂ ಮಾಡಿಕೊಂಡಿದ್ದರು.