‘ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯಗಳೇ ಇರುವುದಿಲ್ಲ’: ಎಂಕೆ ಸ್ಟಾಲಿನ್ ಎಚ್ಚರಿಕೆ

Most read

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಇನ್ನು ಮುಂದೆ ಫೆಡರಲಿಸಂ ಅನ್ನೊದೆ ಇರುವುದಿಲ್ಲ ಮತ್ತು “ರಾಜ್ಯಗಳು ಸಹ ಅಸ್ತಿತ್ವದಲ್ಲಿ ಇರದ” ಮಟ್ಟಕ್ಕೆ ಹೋಗುತ್ತವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ ಹೇಳಿದ್ದಾರೆ.

ತಂಜಾವೂರಿನಲ್ಲಿ ನಡೆದ ರ್ಯಾಲಿಯಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ ಅವರು, “ಭಾರತದಲ್ಲಿ ಪ್ರಜಾಪ್ರಭುತ್ವ ಮುಂದುವರಿಯಬೇಕೇ ಅಥವಾ ಬೇಡವೇ ಎಂಬುದನ್ನು 2024 ನಿರ್ಧರಿಸುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಫೆಡರಲಿಸಂ, ಪ್ರಜಾಪ್ರಭುತ್ವದ ಮಾನದಂಡಗಳು ಅಥವಾ ಸಂಸದೀಯ ಪ್ರಕ್ರಿಯೆಗಳು ಇರುವುದಿಲ್ಲ ಮತ್ತದು ರಾಜ್ಯಗಳು ಅಸ್ತಿತ್ವದಲ್ಲಿಲ್ಲದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ಹೇಳಿದರು.

“ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ನಮ್ಮ ಕಣ್ಣೆದುರೇ ಎರಡು ಭಾಗಗಳಾಗಿ ಹೇಗೆ ವಿಭಜಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಅಲ್ಲಿನ ಜನರ ಒಪ್ಪಿಗೆಯಿಲ್ಲದೆ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಲಾಯಿತು. ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಈಗ ಅಲ್ಲಿ ಶಾಸಕಾಂಗ ಸಭೆ ಇಲ್ಲ, ಮತ್ತು ಐದು ವರ್ಷಗಳಿಂದ ಚುನಾವಣೆ ನಡೆದಿಲ್ಲ, ಈಗಲೂ ಅವರು J&Kಗೆ ಚುನಾವಣೆ ಘೋಷಣೆ ಮಾಡಿಲ್ಲ, ಇದು ಬಿಜೆಪಿಯ ಸರ್ವಾಧಿಕಾರ,” ಎಂದು ವಾಗ್ದಾಳಿ ನಡೆಸಿದರು.

More articles

Latest article