ತಮಿಳರ ವಿರುದ್ಧ ಶೋಭಾ ಕರಂದ್ಲಾಜೆ ಹೇಳಿಕೆ: #NoVoteToBJP ಟ್ರೆಂಡಿಂಗ್

Most read

ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ನಡೆಸಿದವರು ತಮಿಳುನಾಡಿನವರು ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ತಮಿಳುನಾಡಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಎಕ್ಸ್ ಸಾಮಾಜಿಕ ಜಾಲತಾಣ (ಟ್ವಿಟರ್)ದಲ್ಲಿ #NoVoteToBJP ಟ್ರೆಂಡ್ ಆಯಿತು.

ಶೋಭಾ ಕರಂದ್ಲಾಜೆ ಈ ಕುರಿತು ಕ್ಷಮೆ ಕೇಳಿದ್ದರೂ ಸಹ ತಮಿಳರ ಆಕ್ರೋಶ ಕರಗುತ್ತಿಲ್ಲ. ತಮಿಳರಿಗೆ ಭಯೋತ್ಪಾದಕರ ಪಟ್ಟ ಕಟ್ಟುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಇಂದು ಬಿಜೆಪಿ ತಮಿಳುನಾಡನ್ನು ಅಪಮಾನಿಸುತ್ತಿದೆ,
ಕೇರಳಿಗರನ್ನು ಅಪಮಾನಿಸುತ್ತಿದೆ.

ನಾಳೆ ಬಿಜೆಪಿ ಆಂಧ್ರ ಪ್ರದೇಶ ಮತ್ತು ತೆಲಂಗಾಣವನ್ನು ಅಪಮಾನಿಸುತ್ತದೆ,
ನಾಡಿದ್ದು ಇದೇ ಬಿಜೆಪಿ ಕರ್ನಾಟಕವನ್ನು ಅಪಮಾನಿಸುತ್ತದೆ.

ಬಿಜೆಪಿ ದಕ್ಷಿಣ ಭಾರತೀಯರನ್ನು ಕೀಳಾಗಿ ನೋಡುತ್ತದೆ, ನಾಚಿಕೆಗೇಡು ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದಿದ್ದಾರೆ.

ಇದು ನಿಜಕ್ಕೂ ಆಶ್ಚರ್ಯಕರ ಮತ್ತು ಕೀಳುಮಟ್ಟದ ಆರೋಪ, ಶೋಭಾ ಅವರ ಬಳಿ ಸಾಕ್ಷಿ ಇದ್ದರೆ ಅವರು ಪೊಲೀಸರ ಬಳಿ ಹೋಗಬಹುದಿತ್ತು. ಹೀಗೇಕೆ ಆರೋಪ ಮಾಡಿದ್ದಾರೆ ಎಂದು ಹೇಳಿರುವ ಎಕ್ಸ್ ಬಳಕೆದಾರರೊಬ್ಬರು, ಈ ಸಂಬಂಧ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಪೊಲೀಸರು ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ನಾವು ದಕ್ಷಿಣ ಭಾರತೀಯರು ಈ ಬಗೆಯ ದ್ವೇಷ ಹಬ್ಬಿಸುವುದಕ್ಕೆ ಬಿಡುವುದಿಲ್ಲ ಎಂದು ಹಿಂದೂಸ್ತಾನಿ ಎಂಬ ಹ್ಯಾಂಡಲ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಉಡುಪಿಯಿಂದ ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಬಂದಿದ್ದಾರೆ. ಅಲ್ಲಿನ ಮತದಾರರು ಸರಿಯಾದ ಪಾಠ ಕಲಿಸಬೇಕು ಎಂದು ಮಹೇಂದ್ರ ಎಂಬುವವರು ಪೋಸ್ಟ್ ಮಾಡಿದ್ದಾರೆ.

ಈ ನಡುವೆ ಪ್ರಖ್ಯಾತ ತಮಿಳು ನಟ ವಿಜಯ್ ಸೇತುಪತಿ, ಯಾರು ಧರ್ಮ ಅಪಾಯದಲ್ಲಿದೆ ಎಂದು ಬೆದರಿಸುತ್ತಾರೋ ಅವರಿಗೆ ಮತ ಹಾಕಬೇಡಿ ಎಂದು ನೀಡಿರುವ ಹೇಳಿಕೆ ವೈರಲ್ ಆಗಿದ್ದು, ಸೇತುಪತಿ ಆಡಿರುವ ಮಾತುಗಳ ವಿಡಿಯೋಗಳನ್ನು #NoVoteToBJP ಹ್ಯಾಶ್ ಟ್ಯಾಗ್ ನೊಂದಿಗೆ ಶೇರ್ ಮಾಡಲಾಗುತ್ತಿದೆ.

ಧರ್ಮ ಅಪಾಯದಲ್ಲಿದೆ, ಜಾತಿ ಅಪಾಯದಲ್ಲಿದೆ ಎಂದು ನಿಮ್ಮನ್ನು ಪ್ರಚೋದಿಸುವವರು ಮನೆಯಲ್ಲಿ ಆರಾಮಾಗಿ ಇರುತ್ತಾರೆ, ನೀವು ನಡುಬೀದಿಯಲ್ಲಿ ಸಿಕ್ಕಿಬೀಳುತ್ತೀರಿ. ಯಾರು ನಿಮ್ಮ ರಾಜ್ಯ, ಜಿಲ್ಲೆ, ಊರು, ಶಾಲೆ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಾರೋ ಅವರಿಗೆ ಮತ ನೀಡಿ ಎಂದು ವಿಜಯ್ ಸೇತುಪತಿ ಹೇಳಿದ್ದಾರೆ.

More articles

Latest article