ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷವು ದೇಶದಲ್ಲಿ “ಏಕ ಪಕ್ಷದ ಆಡಳಿತ ನಡೆಸಲು ಬಯಸುತ್ತಿದೆ. ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೆಡವಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರಿಂದ ಹೇಳಿಕೆಯನ್ನು ಬಯಸಿದ್ದ 141 ಸಂಸದರನ್ನು ಅಮಾನತುಗೊಳಿಸಲಾಗಿದೆ. ಒಳನುಗ್ಗುವವರ ಪ್ರವೇಶವನ್ನು ಸುಗಮಗೊಳಿಸಿದ ಬಿಜೆಪಿ ಸಂಸದರಿಗೆ, ವಿಪಕ್ಷದವರು ಪ್ರಶ್ನಿಸುವ ಹಕ್ಕು ನೀಡಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನೂ ಸಂಸತ್ತಿನ ಒಳನುಗ್ಗಿದವರ ವಿರುದ್ಧ ಭಯೋತ್ಪಾದನಾ ನಿಗ್ರಹ, ಯುಎಪಿಎ ಕಾನೂನಿನಡಿ ಪ್ರಕರಣ ದಾಖಲಿಸಲಾಗಿದೆ.ಸಂಸತ್ತಿನ ಭದ್ರತೆಗೆ ಜವಾಬ್ದಾರರಾಗಿರುವ ಹಿರಿಯ ಅಧಿಕಾರಿಗಳನ್ನು ಏಕೆ ಹೊಣೆಗಾರರನ್ನಾಗಿ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
🔹ಒಳನುಗ್ಗಿದವರು ಸ್ಪಷ್ಟವಾಗಿ ತಿಂಗಳಿನಿಂದ ಯೋಜಿಸಿದ್ದಾರೆ ಎಂದು ಕಾಣುತ್ತದೆ. ಈ ರೀತಿಯ ಗುಪ್ತಚರ ವೈಫಲ್ಯಕ್ಕೆ ಯಾರು ಹೊಣೆ ಎಂದು ಟ್ವೀಟ್ ಮಾಡಿ ಕೇಳಿದ್ದಾರೆ.