ಕೊರೊನಾ ವೈರಸ್ ರೂಪಾಂತರಿ ಬಗ್ಗೆ ಆತಂಕ ಬೇಡ: ಹೃದ್ರೋಗ ತಜ್ಞ ಡಾ ಎನ್ ಮಂಜುನಾಥ್ ರಿಂದ ಸ್ಪಷ್ಟನೆ

Most read

ಡಿಸೆಂಬರ್, ಜನವರಿ ತಿಂಗಳಲ್ಲಿ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುವುದು ಸಾಮಾನ್ಯ. ಕೋವಿಡ್ ಬಗ್ಗೆ ಜನರಿಗೆ ಸಮಗ್ರವಾದ ಮಾಹಿತಿ ತಿಳಿದಿದೆ.


ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದರೆ ಕೋವಿಡ್ ಸೋಂಕಿನಿಂದ ಪಾರಾಗಬಹುದು.


ಆದರೆ ವಯಸ್ಸಾದವರು, ಸಕ್ಕರೆ ಖಾಯಿಲೆ ಇರುವವರು, ಹೃದ್ರೋಗಿಗಳು, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು, ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವರು ತುಂಬಾ ಜಾಗರೂಕತೆಯಿಂದ ಇರಬೇಕು.


ಕೊರೊನಾ ಸೋಂಕಿನ ಲಕ್ಷಣ ಇರುವವರು, 60 ವರ್ಷ ಮೇಲ್ಪಟ್ಟವರು ತಪ್ಪದೇ ಮಾಸ್ಕ್ ಧರಿಸಬೇಕು.


ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದರೆ ಭಯಪಡಬಾರದು.
ಸೂಕ್ತ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಬೇಕು.


ನಾಡಿನ ಜನತೆಗೆ ಖ್ಯಾತ ಹೃದ್ರೋಗ ತಜ್ಞರಾದ ಡಾ ಎನ್ ಮಂಜುನಾಥ್ ರಿಂದ ಮಹತ್ವದ ಸಂದೇಶ.

More articles

Latest article