“ಅಮೃತ ಅಂಜನ್” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಹಿರಿಯ ನಟಿ ಜಯಮಾಲಾ; ಇದೇ 30ರಂದು ಬಿಡುಗಡೆ; ಗಮನ ಸೆಳೆದ ಹೊಸ ಪ್ರತಿಭೆಗಳ ಸಾಹಸ

ಬೆಂಗಳೂರು: ಈಗಾಗಲೇ  ಕಿರುಚಿತ್ರದ ಮೂಲಕ ಸಂಪೂರ್ಣ ಮನರಂಜನೆ ನೀಡಿ ಯಶಸ್ವಿಯಾದ ” ಅಮೃತಾಂಜನ್” ಮಿಲಿಯನ್ಸ್ ಗೂ ಹೆಚ್ಚು ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿತ್ತು. ಇದೇ ಯಶಸ್ಸಿನ ಮೆಟ್ಟಿಲನ್ನು ಆಧಾರವಾಗಿಟ್ಟುಕೊಂಡು ಯುವ ಪ್ರತಿಭೆಗಳ ತಂಡ “ಅಮೃತ ಅಂಜನ್” ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಜಿ ಟಿ ಮಾಲ್ ನಲ್ಲಿ ನಡೆಯಿತು.

ಮಾಜಿ ವಿಧಾನಪರಿಷತ್‌ ಸದಸ್ಯೆ , ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷೆ, ಹಾಗೂ ಹಿರಿಯ ನಟಿ ಜಯಮಾಲಾ ಅವರು ಟ್ರೈಲರ್ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.

ನಾನು ಈ ಕಾರ್ಯಕ್ರಮಕ್ಕೆ ಬರಲು ಕಾರಣ ಲೋಕೇಶ್ ನಾಗಪ್ಪ. ವೃತ್ತಿಯಿಂದ ಇಂಜಿನಿಯರ್ ಆದ ಅವರು ನಮ್ಮ ಮನೆಯನ್ನು ಕಟ್ಟಿಕೊಟ್ಟವರು. ಸರಳ ಸಜ್ಜನಿಕೆಯ ವ್ಯಕ್ತಿ. ಒಂದು ಶಾಲೆಯನ್ನೂ ನಡೆಸುತ್ತಿದ್ದಾರೆ. ಅವರ ಶಾಲೆಯ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೆ. ಅವರ ಶಾಲೆಯ ಸುಧಾಕರ್ ಎಂಬ ವಿದ್ಯಾರ್ಥಿಗೆ ಸಿನಿಮಾ ಬಗ್ಗೆ ಇನ್ನಿಲ್ಲದ ಆಸಕತಿ. ಪದವಿ ನಂತರ ಚಿತ್ರಲೋಕ ಪ್ರವೇಶಿಸುವುಂತೆ ಸಲಹೆ ನೀಡಿದ್ದೆ. ಹಾಗೆಯೇ ಸುಧಾಕರ್ ಕೆಮಿಕಲ್ ಇಂಜಿನಿಯರ್ ಪದವಿ ಪಡೆದರು. ಒಮ್ಮೆ ಅವರ ತಂಡ ಮಾಡಿದ್ದ ವೆಬ್ ಸೀರೀಸ್ ನೋಡಿದ್ದೆ. ಎರಡೂವರೆ ಕೋಟಿ ಜನ ವೀಕ್ಷಣೆ ಮಾಡಿದ್ದರು. ಈ ಕಾಮಿಡಿ ವೆಬ್ ಸೀರೀಸ್ ಇಷ್ಟು ಜನ ನೋಡಿದ್ದಾರೆಂದರೆ ಇವರ ಭವಿಷ್ಯ ಮುಂದೆ ಹೇಗಿರಬಹುದು ಎಂದು ಅಚ್ಚರಿಪಟ್ಟಿದ್ದೆ ಎಂದು ನೆನಪುಗಳನ್ನು ಮೆಲುಕು ಹಾಕಿದರು.

ಅಮೃತ ಅಂಜನ್‌ ಚಿತ್ರಕ್ಕೆ ಇಡೀ ತಂಡ ಆಸಕ್ತಿಯಿಂದ ಕೆಲಸ ಮಾಡಿದ್ದು ಇದೇ  30ರಂದು ಬಿಡುಗಡೆಯಾಗುತ್ತಿದೆ ಎಲ್ಲರೂ ಈ ಯುವ ಪ್ರತಿಭೆಗಳ ಚಿತ್ರವನ್ನ ನೋಡಿ ಬೆಂಬಲ ನೀಡಿ ಎಂದು ಕೇಳಿಕೊಂಡರು.

ಚಿತ್ರದ ನಿರ್ಮಾಪಕ  ಲೋಕೇಶ್ ಮಾತನಾಡುತ್ತ ನಮ್ಮ ಶಾಲೆಯ ವಿದ್ಯಾರ್ಥಿಯೂ ಆಗಿದ್ದ ಸುಧಾಕರ್ ಸಾಧನೆ ಹೆಮ್ಮೆ ಮೂಡಿಸುತ್ತದೆ. ಸುಧಾಕರ ಕೋಪಿಷ್ಠ ಎಂಬ ಅಪವಾದೂ ಇದೆ.  ಅವನ ಛಲ ಕಂಡು ನಾನು ಪ್ರೋತ್ಸಾಹ ನೀಡಿದ್ದೇನೆ.  ನಾನ್ನ ಜತೆ ಇನ್ನೂ ಇಬ್ಬರು ನಿರ್ಮಾಪಕರಿದ್ದಾರೆ ಎಂದರು.

ಹಣ ಗಳಿಸಲು ನಾನು ಈ ಚಿತ್ರಕ್ಕೆ ಬಂಡವಾಳ ಹೂಡಲಿಲ್ಲ. ಪಾಸಿಟಿವ್ ಗಿಂತ ನೆಗೆಟಿವ್ ಬಗ್ಗೆ ಹೆಚ್ಚು ಗಮನ ಇರಲಿ, ಗೆಲ್ಲಲು ಪ್ರಯತ್ನ ಮಾಡಿ, ಗೆಲುವು ಸೋಲು ನಮ್ಮ ಕೈಯಲ್ಲಿ ಇಲ್ಲ ಎಂದು ಕಿವಿ ಮಾತು ಹೇಳಿದ್ದೇನೆ ಎಂದರು.

ಚಿತ್ರದ ನಿರ್ದೇಶಕ ಜ್ಯೋತಿ ರಾವ್ ಮೋಹಿತ್ ಮಾತನಾಡುತ್ತಾ ನಾನು ಈ ಚಿತ್ರವನ್ನು ಆರಂಭಿಸಲು ಮುಖ್ಯ ಕಾರಣವೇ ನನ್ನ  ಅಮೃತಾಂಜನ್ ಕಿರುಚಿತ್ರ. ಈ ನಮ್ಮ ಅಮೃತ ಅಂಜನ್ ಚಿತ್ರ ಸಂಪೂರ್ಣ ಕಾಮಿಡಿ ಎಂಟರ್‌ ಟೈನ್‌ ಮೆಂಟ್ ಚಿತ್ರವಾಗಿದ್ದು , 80 ಪರ್ಸೆಂಟ್ ಹಾಸ್ಯ , 20 ಪರ್ಸೆಂಟ್ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದೆ. ಪ್ರೀತಿ,  ಸ್ನೇಹ, ಸಂಬಂಧ, ಹಾಸ್ಯದ ಲೇಪನದೊಂದಿಗೆ ಎರಡು ಹಾಡು,  ಫೈಟ್ ಸೇರಿದಂತೆ ಎಲ್ಲರಿಗೂ ಇಷ್ಟವಾಗುವಂತ ಅಂಶಗಳನ್ನು ಒಳಗೊಂಡಿದೆ. ನೈಜತೆಗೆ ಪೂರಕವಾಗಿ ಇರಲಿ ಎಂದು ಬಹಳಷ್ಟು ಶ್ರಮಪಟ್ಟು ಎಲ್ಲರೂ ಕೆಲಸ ಮಾಡಿದ್ದೇವೆ ಎಂದರು.

ನಟ ಸುಧಾಕರ್ ಗೌಡ ಮಾತನಾಡಿ, ನಮ್ಮ ತಂಡ ಇವತ್ತು ವೇದಿಕೆ ಮೇಲೆ ಇದೆ ಅಂದರೆ, ಅದಕ್ಕೆ ಮುಖ್ಯ ಕಾರಣ ನನ್ನ ಗುರುಗಳಾದ ಲೋಕೇಶ್ ನಾಗಪ್ಪ. ನಾನು ಅವರ ಶಾಲೆಯ ವಿದ್ಯಾರ್ಥಿ. ನನ್ನ ಆಸೆಯಂತೆ ಇಂದು  ಸಿನಿಮಾ ನಟನಾಗಿ ಕಾಣಿಸಿಕೊಂಡಿದ್ದೇನೆ. ನಾನು ಇಲ್ಲಿವರೆಗೂ ಅವರ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇಂದು ಇವತ್ತು ಅವಕಾಶ ಸಿಕ್ಕಿದೆ. ನಮ್ಮ ಇಡೀ ತಂಡಕ್ಕೆ ಅವರ ಬೆಂಬಲವೇ ಹೆಚ್ಚು ಎಂದರು.

ಬಹಳ ಇಷ್ಟಪಟ್ಟು ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಹಿರಿಯ ನಟಿ ಜಯಮಾಲಾ ಅವರ ಬೆಂಬಲವನ್ನು ಮರೆಯುವುದಿಲ್ಲ. ನಾವು ಜೀರೋಯಿಂದ ಈ ಮಟ್ಟಕ್ಕೆ ಬಂದಿದ್ದೇವೆ. ನಾವು ಚಿತ್ರರಂಗದಲ್ಲಿ ಬೆಳೆಯಬೇಕು ಎಂದು ಅದಮ್ಯ ಆಸೆ ಇಟ್ಟುಕೊಂಡಿದ್ದೇವೆ. ಚಿತ್ರ ನೋಡಿ ನಮ್ಮನ್ನು ಹರಸಿ ಎಂದು ಕೇಳಿಕೊಂಡರು.

ಮತ್ತೊಬ್ಬ ನಟ ಗೌರವ ಶೆಟ್ಟಿ ಮಾತನಾಡುತ್ತಾ ನಾವು ಅಂದುಕೊಂಡಂತೆ ಚಿತ್ರ ಬಂದಿದೆ. ಖಂಡಿತ ಇದು ಸಂಪೂರ್ಣ ಹಾಸ್ಯ ಭರಿತ ಮನೋರಂಜನೆಯ ಚಿತ್ರ. ನನ್ನದು ಈ ಚಿತ್ರದಲ್ಲಿ ಒಂದು ಕುಡುಕನ ಪಾತ್ರ. ಈಗ ನೀವು ಟ್ರೈಲರ್ ನೋಡಿದ್ದೀರಿ, ನಿಮ್ಮ ಅನಿಸಿಕೆ ತಿಳಿಸಿ ಎಂದರು.

ನಟಿ ಪಾಯಲ್ ಚಂಗಪ್ಪ, ಒಂದು ಸಿನಿಮಾ ಮಾಡುವುದು ಅಷ್ಟು ಸುಲಭ ಅಲ್ಲ. ಹೊಸಬರಿಗೆ ಅವಕಾಶ ಕೊಡುವುದು ಬಹಳ ಕಷ್ಟ. ನನಗೆ ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದಕ್ಕೆ ಎಲ್ಲರಿಗೂ ಆಭಾರಿಯಾಗಿದ್ಧೇನೆ. ನಾನು ಕಿರುಚಿತ್ರದಲ್ಲೂ ಅಭಿನಯಿಸಿದ್ದೇನೆ. ಈ ಸಿನಿಮಾದಲ್ಲಿ ಉರಿ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ ಎMದು ಹೇಳೀದರು.

ನಟಿ ಶ್ರೀ ಭವ್ಯ ಮಾತನಾಡುತ್ತಾ ನಾನು ಅಮೃತಾಂಜನ್ ಹಚ್ಚಿಕೊಂಡು ಎರಡು ಐಡಿಯಾ ಕೊಟ್ಟಿದ್ದೆ ಕಿರು ಚಿತ್ರದಲ್ಲಿ. ಈಗ ಸಿನಿಮಾದಲ್ಲಿ ಬಹಳಷ್ಟು ಐಡಿಯಾಗಳನ್ನು ನೀಡಿದ್ದೇನೆ. ನಮ್ಮ ತಂಡದ ಪ್ರತಿಯೊಬ್ಬರು ಬಹಳ ಟ್ಯಾಲೆಂಟೆಡ್ ಆಗಿದ್ದು, ಬಹಳ ಶ್ರಮವಹಿಸಿ ಸಿನಿಮಾ ಮಾಡಿದ್ದೇವೆ. ಈ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಿರೀಕ್ಷೆ ಇದೆ ಎಂದರು.

ಮತ್ತೊಬ್ಬ ಕಲಾವಿದ ಕಾರ್ತಿಕ್ ರೂವಾರಿ, ಗೀತೆ ರಚನೆಕಾರ ವೆಂಕಟೇಶ್ ಕುಲಕರ್ಣಿ ಸೇರಿದಂತೆ ಹಲವರು ಚಿತ್ರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಿರಿಯ ನಟ ನವೀನ್. ಡಿ. ಪಡೀಲ್, ಮಧುಮತಿ ಬಣ್ಣ ಹಚ್ಚಿದ್ದಾರೆ. ಸುಮಂತ್ ಆಚಾರ್ಯ ಛಾಯಾಗ್ರಹಣ , ಕಿರಣ್ ಕುಮಾರ್ ಸಂಕಲನ ಹಾಗೂ ರೋಹಿತ್ ಶೋವರ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರವನ್ನು ಜಯಣ್ಣ ಫಿಲಂಸ್ ರಿಲೀಸ್ ಮಾಡುತ್ತಿದೆ. ಯುವ ಪ್ರತಿಭೆಗಳು ಸೇರಿ ನಿರ್ಮಿಸಿರುವ ಈ ಚಿತ್ರ ಇದೇ 30ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸೋಣ.

More articles

Latest article

Most read