ಸಿಡ್ನಿಯ ಬೋಂಡಿ ಬೀಚ್‌ ನಲ್ಲಿ ಭಾರತೀಯ ಮೂಲದ ಉಗ್ರರ ದಾಳಿ; ಮೃತಪಟ್ಟವರಲ್ಲಿ ಮೂವರು ಭಾರತೀಯ ವಿದ್ಯಾರ್ಥಿಗಳು

Most read

ಮೆಲ್ಬರ್ನ್: ಆಸ್ಟ್ರೇಲಿಯಾದ ಸಿಡ್ನಿಯ ಬೋಂಡಿ ಬೀಚ್‌ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ 40 ಮಂದಿಯಲ್ಲಿ ಮೂವರು ಭಾರತದ ವಿದ್ಯಾರ್ಥಿಗಳು ಸೇರಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ. ಆದರೆ ಗಾಯಗೊಂಡ ಭಾರತದ ವಿದ್ಯಾರ್ಥಿಗಳು ಯಾರು ಎನ್ನುವುದು ಬಹಿರಂಗಗೊಂಡಿಲ್ಲ.

ವಿಶ್ವಖ್ಯಾತಿ ಪ್ರವಾಸಿ ತಾಣ ಬೋಂಡಿ ಬೀಚ್‌ನಲ್ಲಿ ಹನುಕ್ಕಾ ಯಹೂದಿ ಹಬ್ಬದ ಪ್ರಾರಂಭೋತ್ಸವಕ್ಕೆ ಸಾವಿರಾರು ಸಂಕ್ಯೆಯಲ್ಲಿ ಪ್ರವಾಸಿಗರು ಸೇರಿದ್ದರು. 50 ವರ್ಷದ ಸಾಜದ್‌ ಅಕ್ರಮ್‌ ಆತನ ಪುತ್ರ ನವೀದ್ ಅಕ್ರಮ್ (24) ಇವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದುರಂತದಲ್ಲಿ 10 ವರ್ಷದ ಮಗು ಸೇರಿದಂತೆ ಕನಿಷ್ಠ 15 ಮಂದಿ ಅಸುನೀಗಿದ್ದಾರೆ. ಗಾಯಗೊಂಡಿರುವ ಐವರು ಸಾರ್ವಜನಿಕರು ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಸಾಜದ್‌ ಹೈದರಬಾದ್‌ ಮೂಲದವನು ಎಂದು ಹೇಳಲಾಗುತ್ತಿದೆ. ಈತ ವಿದ್ಯಾರ್ಥಿ ವೀಸಾ ಅಡಿಯಲ್ಲಿ 27 ವರ್ಷಗಳ ಹಿಂದೆ 1998 ರಲ್ಲಿ ಸಿಡ್ನಿಗೆ ತೆರಳಿದ್ದ. ಕಳೆದ ಮೂರು ದಶಕಗಳಲ್ಲಿ ಈತ ಮೂರು ಬಾರಿ ಹೈದರಾಬಾದ್‌ ಗೆ ಭೇಟಿ ನೀಡಿದ್ದಾನೆ. ಆದರೆ ತಂದೆ ಮೃತಪಟ್ಟಾಗ ಬಂದಿರಲಿಲ್ಲ. ಈತನ ಸಹೋದರ ಹೈದರಾಬಾದ್‌ ನಲ್ಲಿ ವೈದ್ಯರಾಗಿದ್ದಾರೆ. ನವೀದ್‌ ನನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ.

More articles

Latest article