ಕಾಂಗ್ರೆಸ್‌ ಸದಸ್ಯರು ವಂದೇ ಮಾತರಂ ಹಾಡುತ್ತಾ ಜೈಲಿಗೆ ಹೋದರೆ ಬಿಜೆಪಿಯವರು ಬ್ರಿಟೀಷರ ಸೇವೆ ಮಾಡುತ್ತಿದ್ದರು: ಖರ್ಗೆ ವಾಗ್ದಾಳಿ

Most read

ನವದೆಹಲಿ: ದೇಶದಲ್ಲಿ ಬ್ರಿಟೀಷರ ವಿರುದ್ಧ 1921 ರಲ್ಲಿ ಅಸಹಕಾರ ಚಳುವಳಿ ಆರಂಭಗೊಂಡಾಗ ಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಜಪಿಸುತ್ತಾ ಜೈಲಿಗೆ ಹೋಗುತ್ತಿದ್ದರು. ನೀವು ನೀವು ಬ್ರಿಟಿಷರಿಗಾಗಿ ಕೆಲಸ ಮಾಡುತ್ತಿದ್ದೀರಿ ಎಂದು ಬಿಜೆಪಿ ವಿರುದ್ಧ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದಿದ್ದಾರೆ.

ರಾಜ್ಯಸಭೆಯಲ್ಲಿ ವಂದೇ ಮಾತರಂ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀವು ನಮಗೆ ದೇಶಭಕ್ತಿಯನ್ನು ಕಲಿಸಲು ಬರುತ್ತೀರಾ? ದೇಶಭಕ್ತಿಗೆ ಹೆದರಿ ಬ್ರಿಟಿಷರಿಗೆ ಸೇವೆ ಸಲ್ಲಿಸಿದವರು ನೀವು ಎಂದು ತಿರುಗೇಟು ನೀಡಿದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಅಪಮಾನಿಸಲು ಪ್ರಧಾನಿ ಮೋದಿ ಸಿಕ್ಕ ಎಲ್ಲಾ ಅವಕಾಶಗಳನ್ನು ಬಳಸಿಕೊಳ್ಳುತ್ತಾತ್ತಿದ್ದಾ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಅಂಗೀಕರಿಸಿದ ಕವಿತೆಯ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಣಯವನ್ನು ಅಂದು ನೆಹರೂ ಒಬ್ಬರೇ ತೆಗೆದುಕೊಂಡಿಲ್ಲ. ಮಹಾತ್ಮ ಗಾಂಧಿ, ಸುಭಾಷ್ ಚಂದ್ರ ಬೋಸ್, ಮದನ್ ಮೋಹನ್ ಮಾಳವಿಯಾ ಮತ್ತು ಆಚಾರ್ಯ ಜೆ.ಬಿ. ಕೃಪಲಾನಿ ಅವರಂತಹ ನಾಯಕರು ಸಾಮೂಹಿಕವಾಗಿ ತೆಗೆದುಕೊಂಡ ನಿರ್ಧಾರವಾಗಿತ್ತು ಎಂದು ಖರ್ಗೆ ಸದನದ ಗಮನಕ್ಕೆ ತಂದರು.

ಕವಿತೆಯ ಮೊದಲ ಎರಡು ಚರಣಗಳನ್ನು ಗೀತೆಯ ಉಳಿದ ಭಾಗದಿಂದ ಪ್ರತ್ಯೇಕಿಸುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ಟ್ಯಾಗೋರ್ ಹೇಳಿರುವುದನ್ನು ಕಾಂಗ್ರೆಸ್ ಅಧ್ಯಕ್ಷರು ಉಲ್ಲೇಖಿಸಿದರು.

‘ವಂದೇ ಮಾತರಂ’ ಗೀತೆಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು, ನೆಹರು ಅವರನ್ನು ಅವಮಾನಿಸಿದ್ದಾರೆ ಎಂದೂ ಖರ್ಗೆ ಟೀಕಿಸಿದರು.

More articles

Latest article