ಇಂಡಿಗೋ ವಿಮಾನ ವ್ಯತ್ಯಯಕ್ಕೆ ಕೇಂದ್ರದ ಏಕಸ್ವಾಮ್ಯ ನೀತಿ ಕಾರಣ: ರಾಹುಲ್‌ ಗಾಂಧಿ ಆರೋಪ

Most read

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಏಕಸ್ವಾಮ್ಯ ಮಾದರಿಯೇ ಕಾರಣ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇಂತಹ ವ್ಯತ್ಯಯಗಳನ್ನು ನಿವಾರಿಸಲು ವಾಯುಯಾನದಲ್ಲಿ ನ್ಯಾಯಯುತ ಸ್ಪರ್ಧೆ ಇರಬೇಕು ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಇಂಡಿಗೋ ವೈಫಲ್ಯಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ದೂಷಿಸಿದ್ದಾರೆ.

ಇಂಡಿಗೋ ಸಂಸ್ಥೆಯು ಗುರುವಾರ 550 ವಿಮಾನ ಮತ್ತು ಇಂದು 450 ವಿಮಾನಗಳ ಹಾರಾಟವನ್ನು ರದ್ದುಪಡಿಸಿದ್ದು, ಸಾವಿರಾರು ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ.

ಇಂಡಿಗೋ ವೈಫಲ್ಯಕ್ಕೆ ಕೇಂದ್ರ ಸರ್ಕಾರದ ಏಕಸ್ವಾಮ್ಯ ನೀತಿ ಕಾರಣವಾಗಿದ್ದು, ಮತ್ತೊಮ್ಮೆ, ವಿಳಂಬ, ರದ್ದತಿ ಮತ್ತು ಅಸಹಾಯಕತೆಯಿಂದ ಸಾಮಾನ್ಯ ಭಾರತೀಯರು ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.

ರಾಹುಲ್‌ ಅವರನ್ನು ಬೆಂಬಲಿಸಿ ಟ್ವೀಟ್‌ ಮಾಡಿರು ಪ್ರಿಯಾಂಕಾ ಗಾಂಧಿ ಅವರು, ಇಡೀ ದೇಶದ ಅನೇಕ ವಲಯಗಲೂ ಕೆಲವೇ ಮಂದಿಯ ಹಿಡಿತದಲ್ಲಿವೆ ಎಂದು ಆಪಾದಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಗಳ ಫಲವಾಗಿ ದೇಶದ ಅನೇಕ ವಲಯಗಳು ಕೆಲವೇ ಮಂದಿಯ ಹಿಡಿತದಲ್ಲಿವೆ. ದೇಶದ ಆರ್ಥಿಕ ಬೆಳವಣಿಗ ದೃಷ್ಟಿಯಿಂದ ಇದು ಅನಾರೋಗ್ಯಕರ ಬೆಳವಣಿಗೆ. ಪ್ರಜಾಪ್ರಭುತ್ವಕ್ಕೂ ಮಾರಕ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

More articles

Latest article