ಬೆಂಗಳೂರು: ಬೆಂಗಳೂರು ನಗರ ಪೊಲೀಸರು ಈ ವರ್ಷದ 2025 ಜನವರಿಯಿಂದ ಅಕ್ಟೋಬರ್ ಮೊದಲನೆ ವಾರದವರೆಗೆ ರೂ.81.21 ಕೋಟಿ ರೂ. ಮೌಲ್ಯದ 1486.58 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ 711 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1048 ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ 35 ಮಂದಿ ವಿದೇಶಿಯರು ಸೇರಿದ್ದಾರೆ. ಇವರುಗಳಲ್ಲಿ ನೈಜೀರಿಯಾ ಪ್ರಜೆಗಳು ಹೆಚ್ಚು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿಕ್ಷಣ, ಪ್ರವಾಸ, ಆರೋಗ್ಯ… ಮೊದಲಾದ ಪ್ರವಾಸದ ಹೆಸರಿನಲ್ಲಿ ವೀಸಾ ಪಡೆದುಕೊಂಡು ಭಾರತ ಪ್ರವೇಶಿಸುತ್ತಾರೆ. ನಂತರ ದೇಶದ ವಿವಿಧ ಭಾಗಗಳಲ್ಲಿ ಮಾದಕ ವಸ್ತುಗಳ ಸಾಗಾಣೆ ಮತ್ತು ಮಾರಾಟದಲ್ಲಿ ತೊಡಗುತ್ತಾರೆ. ಬೆಂಗಳೂರಿಗೆ ಆಗಮಿಸಿದ್ದ ಕೆಲವು ವಿದೇಶಿಗರು ದೇಶ ಬಿಟ್ಟು ಹೋಗದೆ ಇಲ್ಲಿಯೇ ಉಳಿದುಕೊಡಿರುವುದು ಪತ್ತೆಯಾಗಿದೆ. ಈ ರೀತಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರು ಡ್ರಗ್ಸ್ ಸಾಗಾಣೆ ಮತ್ತು ಮಾರಾಟದಲ್ಲಿ ತೊಡಗಿಸಿಕೊಂಡು ಸುಲಭವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ.
ನಗರದ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿಗೆ ವಿದೇಶಗಳಿಂದ ನಗರ ಮತ್ತು ರಾಜ್ಯಕ್ಕೆ ಬರುವ ಎಲ್ಲಾ ಪಾರ್ಸಲ್ ಗಳ ಮೇಲೂ ಸಹ ನಿಗಾ ವಹಿಸಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿಲ್ಲ.

