ಜಸ್ಟೀಸ್ ಗವಾಯಿ ಮೇಲೆ ಶೂ ಎಸೆದ ಘಟನೆ ಖಂಡಿಸಿ ಅ. 17 ರಂದು ಕೋಲಾರ ಬಂದ್

Most read

ಕೋಲಾರ : ಭಾರತ ದೇಶದ ಸುಪ್ರೀಂ ಕೋರ್ಟ್ ನಲ್ಲಿ ವಕೀಲರೊಬ್ಬರು ನ್ಯಾಯಮೂರ್ತಿ ಗವಾಯಿ ರವರ ಮೇಲೆ ಉದ್ದೇಶ ಪೂರ್ವಕವಾಗಿ ಶೂ ಎಸೆದ ಘಟನೆಯನ್ನು ಖಂಡಿಸಿ ಅಕ್ಚೋಬರ್ 17 ರಂದು ಪ್ರಗತಿಪರ ಸಂಘಟನೆಗಳುˌ ಎಡ ಪಂಥೀಯ ಸಂಘಟನೆಗಳುˌ, ಮಹಿಳಾ ಸಂಘಟನೆಗಳುˌ, ಹಾಗೂ ಅಲ್ಪಸಂಖ್ಯಾತ ಮುಖಂಡರುಗಳು ಹಾಗೂ ಸಮಾನ ಮನಸ್ಕರ ಸಂಘಟನೆಗಳು ಸಭೆ ನಡೆಸಿ ಅಕ್ಚೋಬರ್ 17 ರಂದು ಸ್ವಯಂ ಘೋಷಿತ ಬಂದ್ ಗೆ ಕರೆ ನೀಡಿವೆ.

ನಗರದ ನಚಿಕೇತ ನಿಲಯದಲ್ಲಿನ “ಬುದ್ಧ ವಿಹಾರ”ದಲ್ಲಿ ನಡೆದ ಸಭೆಯಲ್ಲಿ ಸಂಘಟನೆಗಳ ಮುಖಂಡರು ನ್ಯಾಯಮೂರ್ತಿ ಗವಾಯಿ ಯವರಿಗೆ ಶೂ ಎಸೆದ ಘಟನೆಯನ್ನು ತೀವ್ರವಾಗಿ ಖಂಡಿಸಿದರು.

ಸಭೆಯಲ್ಲಿ ಸಿಪಿಎಂನ ಗಾಂಧಿ ನಗರ ನಾರಾಯಣ ಸ್ವಾಮಿ,ˌ ಡಿಎಸ್ ಎಸ್ ನ ವಿಜಯ ಕುಮಾರ್,ˌ ಪಂಡಿತ್ ಮುನಿವೆಂಕಟಪ್ಪ, ಚಂದ್ರ ಮೌಳಿˌ ,ನಗರ ಸಭಾ ಸದಸ್ಯ ಅಂಬರೀಶ್, ಹಾಗೂ ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಅಲ್ಪ ಸಂಖ್ಯಾತ ಮುಖಂಡರುಗಳಾದ ಸಲಾವುದ್ದೀನ್ ಬಾಬುˌ, ಅಫ್ರೋಜ್ ಪಾಷ,ˌ ಅನ್ವರ್ ಪಾಷ,ˌ ಪತ್ರಕರ್ತರಾದ ಸಿ ವಿ ನಾಗರಾಜ್ˌ ಕಿತ್ತಂಡೂರು ವೆಂಕಟರಾಂ ಸೇರಿದಂತೆ ಐವತ್ತಕ್ಕೂ ಹೆಚ್ಚು ಮುಖಂಡರುಗಳು ಸಭೆಯಲ್ಲಿ ಭಾಗವಹಿಸಿದ್ದರು.




More articles

Latest article