ಶ್ರೀನಗರ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವುದು ಬಿಜೆಪಿಯ ವಿಕಸಿತ ಭಾರತ ಹೇಗಿರುತ್ತದೆ ಎಂಬುದರ ಭಯಾನಕ ಚಿತ್ರಣದ ಸಂಕೇತ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಮೇಲೆ ಯಾವುದೇ ಕ್ರಮ ಜರುಗಿಸುವುದಿಲ್ಲ ಎಂಬ ವಿಶ್ವಾಶದಿಂದಲೇ ವಕೀಲ ರಾಕೇಶ್ ಕಿಶೋರ್ ಎಂಬಾತ ಶೂ ಎಸೆದಿದ್ದಾನೆ. ಇದು 2047ರ ವೇಳೆಗೆ ಬಿಜೆಪಿಯ ವಿಕಸಿತ ಭಾರತ ಹೇಗಿರುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಎಕ್ಸ್ ಮೂಲಕ ಆಪಾದಿಸಿದ್ದಾರೆ.
ಮಹಾತ್ಮ ಗಾಂಧಿ ಅವರನ್ನು ಕೊಂದ ಗೋಡ್ಸೆ ಭಾರತದಲ್ಲಿ ಗುಂಪು ಹಲ್ಲೆ ನಡೆಸುವವರಿಗೆ ಹಾರ ಹಾಕುವುದು, ಆತ್ಯಾಚಾರಿಗಳನ್ನು ಕ್ಷಮಿಸುವುದು ಮತ್ತು ದ್ವೇಷ ಹರಡುವವರನ್ನು ಸನ್ಮಾನಿಸುವುದು ದಿನನಿತ್ಯದ ವಿದ್ಯಾಮಾನವಾಗಿದೆ. ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಕ್ಕಾಗಿ ವರ್ಷಾನುಗಟ್ಟಲೇ ಜೈಲುವಾಸ ಅನುಭವಿಸಲು ಆತ ರಾಕೇಶ್ ಕಿಶೋರ್. ಉಮರ್ ಖಾಲಿದ್ ಅಥವಾ ಶಾರ್ಜೀಲ್ ಇಮಾಮ್ ಅಲ್ಲ ಎಂದು ಟೀಕಿಸಿದ್ದಾರೆ.
ಈಗ ನ್ಯಾಯಾಲಯದ ಮುಂದಿರುವ ಪ್ರಶ್ನೆ ಕೇವಲ ಕಾನೂನಿಗೆ ಸಂಬಂಧಪಟ್ಟಿದ್ದಲ್ಲ. ಅದು ಅಸ್ತಿತ್ವದ ಪ್ರಶ್ನೆಯಾಗಿದೆ. ಸಂವಿಧಾನವನ್ನು ರಕ್ಷಿಸಲು ನ್ಯಾಯಾಂಗ ಎದ್ದು ನಿಂತಾಗಲೆಲ್ಲಾ ಅದನ್ನು ಶೂ ಅಡಿಯಲ್ಲಿ ಹಾಕಿ ತುಳಿಯಲಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.